Advertisement
ಸುದ್ದಿಗಳು

ಪ.ಜಾತಿ ಮಹಿಳೆಯ ಕೃಷಿ ಜಾಗವನ್ನು ಘನತ್ಯಾಜ್ಯ ವಿಲೇವಾರಿಗೆ ಗುರುತಿಸದಂತೆ ಮನವಿ

Share

ಸುಳ್ಯ:ಅಜ್ಜಾವರ ಗ್ರಾಮದ ನೆಲ್ಯಡ್ಕ ಎಂಬಲ್ಲಿ ಪ.ಜಾತಿ ಮಹಿಳೆಯೊಬ್ಬರು ರಬ್ಬರ್ ಕೃಷಿ ಮಾಡಿಕೊಂಡು ಬಂದ ಜಾಗವನ್ನು ಇದೀಗ ಅಜ್ಜಾವರ ಗ್ರಾ.ಪಂ. ಘನತ್ಯಾಜ್ಯ ವಿಲೇವಾರಿ ಮಾಡಲು ಗುರುತಿಸಿದೆ. ಗ್ರಾ.ಪಂ.ನವರು ಕೈಗೊಂಡಿರುವ ಈ ನಿರ್ಧಾರವನ್ನು ಕೈ ಬಿಟ್ಟು ಆ ಜಾಗವನ್ನು ಆ ಮಹಿಳೆಗೇ ಬಿಟ್ಟು ಕೊಡಬೇಕೆಂದು ಮನವಿ ಮಾಡುತ್ತೇವೆ ಎಂದು ಆದಿದ್ರಾವಿಡ ಸಮುದಾಯದ ಪ್ರಮುಖರಾದ ಕೆ.ಎಂ.ಬಾಬು ಜಾಲ್ಸೂರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

ನೇಲ್ಯಡ್ಕದಲ್ಲಿ ಸುಶೀಲರವರು ೨ ಎಕ್ರೆ ಜಾಗದಲ್ಲಿ ೬೦೦ ರಬ್ಬರ್ ಕೃಷಿ ಮಾಡಿದ್ದು, ಅದರಲ್ಲಿ ೪೫೦ ಗಿಡಗಳು ಈಗ ಹಾಲು ಟ್ಯಾಪಿಂಗ್ ಮಾಡಲಾಗುತ್ತಿದೆ. ಇದು ಸರಕಾರಿ ಜಮೀನು. ಇದನ್ನು ಅಕ್ರಮ ಸಕ್ರಮದಲ್ಲಿ ಮಾಡಿಕೊಳ್ಳಲು ಅವರು ಅರ್ಜಿಯನ್ನು ಹಾಕಿದ್ದಾರೆ.

ಇದೀಗ ಈ ಜಾಗವನ್ನು ಗ್ರಾ.ಪಂ. ಘನತ್ಯಾಜ್ಯ ವಿಲೇವಾರಿಗೆ ಗುರಿತಿಸಿದ್ದು ಇದರಿಂದ ಇವರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಘನತ್ಯಾಜ್ಯಕ್ಕೆ ಬೇರೆ ಜಾಗ ಗುರುತಿಸುವಂತೆ ವಿನಂತಿಸಿದ ಅವರು ಇದೇ ಸರ್ವೆ ನಂಬರ್‌ನಲ್ಲಿ ಒಟ್ಟು ೭.೭೩ ಎಕ್ರೆ ಸರಕಾರಿ ಜಮೀನು ಇದೆ. ಅದರಲ್ಲಿ ೨ ಎಕ್ರೆ ಸುಶೀಲರು ಕೃಷಿ ಮಾಡಿದರೆ ಉಳಿದ ಜಾಗವೂ ಒತ್ತುವರಿಯಾಗಿದೆ. ಅದೆಲ್ಲವನ್ನು ಬಿಟ್ಟು ಇವರ ಜಾಗ ಮಾತ್ರ ಘನತ್ಯಾಜ್ಯ ವಿಲೇವಾರಿಗೆ ಗುರಿತಿಸಿರುವುದು ಸರಿಯಲ್ಲ. ಇದಕ್ಕೆ ನಾವು ಅವಕಾಶವನ್ನು ನೀಡುವುದಿಲ್ಲ. ಜಿಲ್ಲಾಧಿಕಾರಿ ಸೇರಿದಂತೆ ಹಲವರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಕೆ.ಎಂ.ಬಾಬು ಹೇಳಿದರು.

ಸುಶೀಲಾ ಮಾತನಾಡಿ ಅಕ್ರಮ ಸಕ್ರಮದಡಿಯಲ್ಲಿ ಅರ್ಜಿ ಅಲ್ಲಿಸಲಾಗಿದ್ದು ಕೃಷಿ ಮಾಡಿದ ಆ ಜಾಗವನ್ನು ತನ್ನ ಹೆಸರಿಗೆ ನೀಡಬೇಕೆಂದು ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರತ್ನಾವತಿ ಉದ್ದಂತಡ್ಕ, ವಿಶ್ವನಾಥ ಉದ್ದಂತಡ್ಕ, ಸತೀಶ್ ನೆಲ್ಯಡ್ಕ, ರವಿ ಪಿಲಿಕೋಡಿ, ಮಂಜುನಾಥ ಇದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ

ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…

11 hours ago

ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…

11 hours ago

ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

ಎಲ್‌ನಿನೋ ವಿದ್ಯಮಾನವು ಡಿಸೆಂಬರ್‌ನಲ್ಲಿ ಗರಿಷ್ಠ ತೀವ್ರತೆ ತಲುಪುವ ಸಾಧ್ಯತೆಯಿದ್ದು, 2027ರ ಫೆಬ್ರವರಿವರೆಗೆ ಮುಂದುವರಿಯಬಹುದು…

11 hours ago

ಹವಾಮಾನ ವರದಿ | 10-10-2026 | ರಾಜ್ಯದಲ್ಲಿ ಇಂದಿನಿಂದ ಮಳೆ ಇಳಿಕೆ ; ಅ.16ರಿಂದ ಹಿಂಗಾರು ಮಳೆ ಆರಂಭದ ಮುನ್ಸೂಚನೆ

ಅಕ್ಟೋಬರ್ 11ರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಮುಂದುವರಿಯುವ…

14 hours ago

ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ

ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…

2 days ago