ಗುತ್ತಿಗಾರು: ಮಂಗಳೂರಿನ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆದ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಬಳಿಯ ಕುಟುಂಬದ ಸದಸ್ಯನ ಆರೋಗ್ಯ ವಿಚಾರಿಸಲು ಹೋದ ಗುತ್ತಿಗಾರು ಗ್ರಾಮದ ಕಮಿಲ ಕುಟುಂಬವೊಂದರ ಸದಸ್ಯರನ್ನು ಹೋಂ ಕ್ವಾರಂಟೇನ್ ಗೆ ಗುತ್ತಿಗಾರು ಗ್ರಾ ಪಂ ಪಿಡಿಒ ಹಾಗೂ ಆಡಳಿತವು ತಿಳಿಸಿದೆ.
ಮಂಗಳೂರಿನ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ಮೂಲದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಬಳಿಯ ವ್ಯಕ್ತಿಯೋರ್ವರು ಚಿಕಿತ್ಸೆ ಪಡೆದು ಬಂದಿದ್ದರು. ಇವರನ್ನು ಗುತ್ತಿಗಾರು ಗ್ರಾಮದ ಕಮಿಲದ ಸಂಬಂಧಿ ಕುಟುಂಬ ಮಾತನಾಡಿಸಲು ಹೋಗಿತ್ತು. ಈ ಸಂಗತಿ ಆರೋಗ್ಯ ಇಲಾಖೆ ಗಮನಕ್ಕೆ ಬಂದ ತಕ್ಷಣವೇ ಕ್ವಾರಂಟೇನ್ ನಲ್ಲಿರಲು ಸೂಚಿಸಲಾಗಿದೆ. ಮನೆಯಿಂದ ಹೊರಬಾರದಂತೆ ಸೂಚಿಸಲಾಗಿದೆ. ಗ್ರಾಪಂ ಆಡಳಿತವು ಮನೆಗೆ ಭೇಟಿ ನೀಡಿದೆ.
ಇದೇ ಸಂದರ್ಭ ಗುತ್ತಿಗಾರು ಮೆಸ್ಕಾಂ ವಿಭಾಗದಲ್ಲಿ ಲೈನ್ ಮೇನ್ ಆಗಿದ್ದ ವ್ಯಕ್ತಿ ಬೆಳಗಾಂನಿಂದ ವಾಪಾಸು ಬಂದಿದ್ದರು. ಅವರನ್ನು ಕೂಡಾ 14 ದಿನಗಳ ಕ್ವಾರಂಟೇನ್ ಗೆ ಸೂಚಿಸಲಾಗಿದೆ.