ದೇಹ ಮತ್ತು ಮನಸ್ಸಿನ ಫಿಟ್ನೆಸ್‌ಗೆ ಬೆಳಗ್ಗಿನ ನಡಿಗೆ ಹೆಚ್ಚು ಪ್ರಸ್ತುತ. ಹಾಗಂತ ಮುಂಜಾನೆ ತಡಬಡಾಯಿಸಿ ಎದ್ದು ನಡಿಗೆ ಆರಂಭಿಸಬೇಕು ಎಂದಲ್ಲ. ಅದಕ್ಕೂ ಮುಂಚೆ ಒಂದಷ್ಟು ಸಲಹೆಗಳನ್ನು ಪಡೆದುಕೊಳ್ಳಿ.
ಸದಾ ಆ್ಯಕ್ಟಿವ್ ಆಗಿರಲು ಮತ್ತು ದೇಹದ ಫಿಟ್ನೆಸ್‌ಗೆ ವ್ಯಾಯಾಮ ಹಾಗು ಮಾರ್ನಿಂಗ್ ವಾಕ್ ಸಹಕಾರಿ. ಮಾರ್ನಿಂಗ್ ವಾಕ್‌ಗೆ ಇಲ್ಲಿದೆ ಕೆಲವು ಟಿಫ್ಸ್.
1. ಮನಸ್ಸು ಮಾಡಿ: ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳಲೇ ಬೇಕೆಂಬ ಮನಸ್ಸು ಮಾಡಿ. ಮುದುಡಿಕೊಂಡು ಮಲಗುವ ಮನಸ್ಸನ್ನು ಹೆಚ್ಚು ಪ್ರೋತ್ಸಾಹಿಸುತ್ತದೆ. ಅದಕ್ಕೆ ಅವಕಾಶ ನೀಡದೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಿ.
2. ಪ್ರಾರಂಭ ಹೀಗಿರಲಿ: ಮಾರ್ನಿಂಗ್ ವಾಕ್ ನಿಧಾನವಾಗಿ ಪ್ರಾರಂಭಿಸಿ. ನಿಮ್ಮ ಕಾಲುಗಳ ಮಾಂಸಖಂಡಗಳು ನಡಿಗೆಗೆ ಸಿದ್ಧವಾದ ನಂತರ ಕ್ರಮೇಣ ವೇಗ ಹೆಚ್ಚಿಸಿಕೊಳ್ಳಿ. ಉತ್ತಮವಾದ ನಡಿಗೆಯ ಸ್ಥಳವನ್ನು ಆಯ್ಕೆ ಮಾಡಿ. ಚಳಿಗಾಲದ ಮಂಜಿನಿಂದ ತೇವವಾದ ಸ್ಥಳಗಳು ನಡಿಗೆಯನ್ನು ನಿಧಾನಗೊಳಿಸಬಹುದು ಅಥವಾ ಜಾರುವ ಸಂದರ್ಭ ಒದಗಬಹುದು. ಚಳಿಗಾಲದಲ್ಲಿ ಮಂಜು ಕವಿಯುತ್ತದೆ ಬೆಳಗಿನ ಜಾವ ರಸ್ತೆಗಳು ಕಾಣದಾಗುತ್ತದೆ. ಇಂತಹ ಸ್ಥಳಗಳ ಆಯ್ಕೆ ಬೇಡ. ಹೆಚ್ಚು ಟ್ರಾಫಿಕ್ ಇಲ್ಲದ ಹೆಚ್ಚು ತಣ್ಣನೆ ಗಾಳಿ ಬೀಸದ ಸ್ಥಳ ಆಯ್ಕೆ ಮಾಡಿ. ವಾಕ್‌ಗೆ ಹಗುರವಾದ ಜಾರದ ಶೂ ಆಯ್ಕೆ ಮಾಡಿ.
3. ಜತೆಗೆ ನೀರಿರಲಿ: ಒಂದು ಬಾಟಲ್ ನೀರು ಹತ್ತಿರವಿರಲಿ. ಬೇಸಿಗೆಯಲ್ಲಿ ಹೆಚ್ಚು ಬಾಯಾರುತ್ತದೆ, ಬೆವರು ಬರುತ್ತದೆ. ಎಂಬುದು ನೆನಪಿರಲಿ. ಆಗಾಗ್ಗೆ ನೀರು ಕುಡಿಯುತ್ತಿರಿ.