ಫೆ‌.6 :ಕಾಂಗ್ರೆಸ್ ವತಿಯಿಂದ ಸಿಎಎ ಮತ್ತು ಎನ್ಆರ್ ಸಿ ಕುರಿತು ಮಾಹಿತಿ ಕಾರ್ಯಾಗಾರ

February 2, 2020
6:21 AM

ಸುಳ್ಯ: ದ.ಕ‌.ಜಿಲ್ಲಾ ಕಾಂಗ್ರೆಸ್ ವತಿಯಿಂದ ಪೌರತ್ವ ತಿದ್ದುಪಡಿ ಕಾಯಿದೆ ಹಾಗು ರಾಷ್ಟ್ರೀಯ ಪೌರತ್ವ ನೋಂದಾವಣೆ ಕುರಿತು ಮಾಹಿತಿ ಶಿಬಿರವನ್ನು ಮಂಗಳೂರು ಕುಲಶೇಖರ ಕುರ್ಡೆಲ್ ಚರ್ಚ್ ಸಭಾಂಗಣದಲ್ಲಿ ಫೆ.6 ರಂದು ಹಮ್ಮಿಕೊಳ್ಳಲಾಗಿದೆ. ಪ್ರತಿ ಬ್ಲಾಕ್ ನಿಂದ 100 ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ತಿಳಿಸಿದ್ದಾರೆ.

Advertisement
Advertisement
Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಬಿರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ರಮೇಶ್ ಕುಮಾರ್, ಬಿ.ಎಲ್ ಶಂಕರ್ ,ಭವ್ಯ ನರಸಿಂಹ ಮೂರ್ತಿ ಮಾಹಿತಿ ನೀಡಲಿದ್ದಾರೆ. ಅಂದು ಬೆಳಿಗ್ಗೆ 10.30 ರಿಂದ 1.30ರ ತನಕ ಕಾರ್ಯಾಗಾರ ನಡೆಯಲಿದ್ದು
ಪೌರತ್ವ ತಿದ್ದುಪಡಿ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ. ಬಳಿಕ ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಾಗಾರ ನಡೆಸಿ ಜನರಿಗೆ ಕಾಯಿದೆಯಲ್ಲಿನ ವಾಸ್ತವಾಂಶವನ್ನು ತಿಳಿಸಲಾಗುವುದು. ದೇಶದ ಕಾನೂನು, ಕಾಯಿದೆಗಳು ಮತ ಪಡೆಯುವ ದೃಷ್ಟಿಯಿಂದ ಆಗಬಾರದು ಮತ್ತು ಧಾರ್ಮಿಕ ನೆಲೆಯ ಆಧಾರದಲ್ಲಿ ರೂಪಿತವಾಗಬಾರದು. ಹಾಗಾದರೆ ಅದು ದೇಶದ ಭವಿಷ್ಯಕ್ಕೆ ಅಪಾಯಕಾರಿ. ಈ ರೀತಿಯ ಬೆಳವಣಿಗೆಯಿಂದ ದೇಶದಲ್ಲಿ ಸಂಘರ್ಷಕ್ಕೆ ಕಾರಣವಾಗಬಹುದು. ಆದುದರಿಂದ ಕಾಯಿದೆಗಳು ದೇಶದ ಭವಿಷ್ಯಕ್ಕೆ ಮತ್ತು ಜನರ ಭಾವನೆಗಳಿಗೆ ಪೂರಕವಾಗಿರಬೇಕು ಎಂದು ಅವರು ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪಿ.ಎಸ್‌.ಗಂಗಾಧರ, ನಂದರಾಜ ಸಂಕೇಶ, ಪರಮೇಶ್ವರ ಕೆಂಬಾರೆ, ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸ ಬೆಳೆ…. ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ
April 24, 2024
2:57 PM
by: The Rural Mirror ಸುದ್ದಿಜಾಲ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ
ಅಡಿಕೆ ಆಮದು ಒಪ್ಪಂದು ರದ್ದು…! | ಭರವಸೆ ನೀಡಿದ ಕಾಂಗ್ರೆಸ್‌ |
April 24, 2024
2:23 PM
by: ದ ರೂರಲ್ ಮಿರರ್.ಕಾಂ
24 ಗಂಟೆಗಳಲ್ಲಿ 80 ಭೂಕಂಪ | ಭೂಕಂಪದ ತೀವ್ರತೆಯಲ್ಲಿ ತೈವಾನ್‌ |
April 23, 2024
2:39 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror