ಗುತ್ತಿಗಾರು: ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಹಾಗೂ ದೈವಗಳ ನೇಮ ಫೆ.1 ಹಾಗೂ 2 ರಂದು ನಡೆಯಲಿದೆ. ಈ ಪ್ರಯುಕ್ತ ಶನಿವಾರ ಗೊನೆ ಮುಹೂರ್ತ ನಡೆಯಿತು.
ಈ ಸಂದರ್ಭ ದೇವಸ್ಥಾನದ ವ್ಯವಸ್ಥಾನಪನಾ ಸಮಿತಿ ಮಾಜಿ ಅಧ್ಯಕ್ಷರುಗಳಾದ ಕೇಶವ ಹೊಸೋಳಿಕೆ , ಬಿಕೆ ಬೆಳ್ಯಪ್ಪ ಕಡ್ತಲ್ ಕಜೆ, ಪ್ರಧಾನ ಅರ್ಚಕ ಪರಮೇಶ್ವರ ಭಟ್ ವಳಲಂಬೆ, ಅರ್ಚಕ ಮಹಾಬಲೇಶ್ವರ ಭಟ್, ವ್ಯವಸ್ಥಾನಪನಾ ಸಮಿತಿ ಮಾಜಿ ಸದಸ್ಯರುಗಳು, ಭಕ್ತಾದಿಗಳು, ಜಾತ್ರೋತ್ಸವ ಸಮಿತಿ ಹಾಗೂ ಸೇವಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಫೆ.1 ರಂದು ನೀಲೇಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರಿಗೆ ಉತ್ಸವಾದಿಗಳು ನಡೆಯಲಿದೆ. ಬೆಳಗ್ಗೆ ಗಣಪತಿ ಹವನ, ಏಕಾದಶ ರುದ್ರಾಭಿಷೇಕ ನಡೆಯಲಿದೆ. ಸಂಜೆ ದೇವರ ಉತ್ಸವ ಬಲಿ , ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ ನಡೆಯಲಿದೆ.
Advertisementಫೆ.2 ರಂದು ದೈವಗಳ ನೇಮ ನಡೆಯಲಿದೆ. ಬೆಳಗ್ಗೆ ಉಳ್ಳಾಕ್ಲು-ಉಳ್ಳಾಲ್ತಿ ದೈವಗಳ ನೇಮ, ಕುಮಾರ ದೈವದ ನೇಮ ನಡೆದು ಬಳಿಕ ರಕ್ತೇಶ್ವರಿ ದೈವದ ನೇಮ, ಧೂಮಾವತಿ ದೈವದ ನೇಮ ಹಾಗೂ ಸಂಜೆ ಗುಳಿಗ ಕೋಲ ನಡೆಯಲಿದೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.