ಸುಳ್ಯ: ಕರ್ನಾಟಕ ಸರಕಾರ ಹೊರತಂದ ಪ್ರಥಮ ಯಕ್ಷಗಾನ ಪಠ್ಯ ಪುಸ್ತಕದ ಪರಿಚಯ ಮತ್ತು ಮಕ್ಕಳ ಯಕ್ಷಗಾನ ಪ್ರದರ್ಶನ ಫೆ.23 ರಂದು ಸಂಜೆ 6.00 ಕ್ಕೆ ಸುಳ್ಯ ಹಳೆಗೇಟಿನ ರಂಗಮನೆಯಲ್ಲಿ ನಡೆಯಲಿದೆ.
ರಂಗಮನೆಯ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಠ್ಯಪುಸ್ತಕ ಸಮಿತಿಯ ಸದಸ್ಯ ಪ್ರಕಾಶ್ ಮೂಡಿತ್ತಾಯ ಪುಸ್ತಕ ಪರಿಚಯ ಮಾಡಲಿದ್ದಾರೆ. ಹಿರಿಯ ಯಕ್ಷರಂಗ ಕಲಾವಿದ ಸುಜನಾ ಸುಳ್ಯ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದ ಅಂಗವಾಗಿ ಗುರು ಕುಮಾರ ಸುಬ್ರಮಣ್ಯ ಅವರ ನಿರ್ದೇಶನದಲ್ಲಿ ಕೇಂದ್ರದ ಹಿಮ್ಮೇಳ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ಚಂಡೆವಾದನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕೇಂದ್ರದ ವಿದ್ಯಾರ್ಥಿಗಳಿಂದ ಲಕ್ಷ್ಮೀಶ ರೈ ಕಳಂಜ ಇವರ ನಿರ್ದೇಶನದಲ್ಲಿ ಪಂಚವಟಿ- ಖರಾಸುರ ವಧೆ ಯಕ್ಷಗಾನ ಪ್ರಸಂಗ ನಡೆಯಲಿದೆ. ಭಾಗವತಿಕೆಯಲ್ಲಿ ರಾಮಚಂದ್ರ ಅರ್ಭಿತ್ತಾಯ, ಹಿಮ್ಮೇಳನದಲ್ಲಿ ಕುಮಾರ ಸುಬ್ರಮಣ್ಯ, ಕೇಶವ ದೀಕ್ಷಿತ್ ಭಾಗವಹಿಸಲಿದ್ದಾರೆ. ಕಲಾವಿದರಾಗಿ ಕೃತಸ್ವರ ದೀಪ್ತ, ಮನುಜ ನೇಹಿಗ, ಮನ್ವಿತ್ ಪಡ್ಡಂಬೈಲ್, ಸೃಜನಾದಿತ್ಯ ಶೀಲ, ಧ್ಯಾನ್ ವಿಜಯ್, ಸುಮೇಧಾ ಕುಕ್ಕುಜಡ್ಕ, ಗೌತಮ್ ಪೇರಾಲು, ಜಿತೇಶ್ ಮತ್ತು ಶಿಶಿರ ಸೋಮಯಾಗಿ ಭಾಗವಹಿಸಲಿದ್ದಾರೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…