ಪೆರ್ಲ: ಪೆರ್ಲ ನಾಲಂದ ಮಹಾವಿದ್ಯಾಲಯ, ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು ಹಾಗೂ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ನ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಫೆ. 8 ಶನಿವಾರ ಪೆರ್ಲ ನಾಲಂದ ಕಾಲೇಜು ಆವರಣದಲ್ಲಿ ಬೃಹತ್ ‘ಕೃಷಿ ಮೇಳ’ ನಡೆಯಲಿದೆ.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಟ್ರಸ್ಟಿ, ನಾಲಂದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಸಿ. ಟಿ. ರವಿ ಸಮಾರಂಭ ಉದ್ಘಾಟಿಸಲಿದ್ದಾರೆ.
ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು ಇದರ ಅಧ್ಯಕ್ಷ ಸತೀಶ್ಚಂದ್ರ ಎಸ್. ಆರ್. ದಿಕ್ಸೂಚಿ ಭಾಷಣ ಮಾಡಲಿದ್ದು, ಕಾಸರಗೋಡು ಎ. ಆರ್. ಜನರಲ್ ಜಯಚಂದ್ರನ್ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
10.55ರಿಂದ ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು ಇದರ ನಿರ್ದೇಶಕ ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆಯಲ್ಲಿ ಅಡಿಕೆ ಕೃಷಿಯಲ್ಲಿ ಆಧುನಿಕತೆ ಎಂಬ ವಿಷಯದ ಕುರಿತಾಗಿ ವಿಚಾರಗೋಷ್ಠಿ ನಡೆಯಲಿದೆ. ಹಿರಿಯ ವಿಜ್ಞಾನಿ, ಕಾಸರಗೋಡು ಐಸಿಎಆರ್- ಸಿಪಿಸಿಆರ್ ಐ, ಡಾ. ರವಿ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ (ಲಿ), ನೀರ್ಚಾಲು ಇದರ ಅಧ್ಯಕ್ಷ ಜಯದೇವ ಖಂಡಿಗೆ ಹಾಗೂ ರಾಧಾಕೃಷ್ಣ ಭಂಡಾರದಮನೆ- ಖಂಡೇರಿ ಉಪಸ್ಥಿತರಿರುವರು.
ಮಧ್ಯಾಹ್ನ 12.05 ರಿಂದ ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು ಇದರ ನಿರ್ದೇಶಕ ಪದ್ಮರಾಜ ಪಟ್ಟಾಜೆ ಅಧ್ಯಕ್ಷತೆಯಲ್ಲಿ ಕೊಕ್ಕೊ ಕೃಷಿ ಸವಾಲುಗಳು ಎಂಬ ವಿಷಯದ ಕುರಿತಾಗಿ ವಿಚಾರಗೋಷ್ಠಿ ನಡೆಯಲಿದೆ. ಹಿರಿಯ ವಿಜ್ಞಾನಿ, ವಿಟ್ಲ ಸಿಪಿಸಿಆರ್ ಐ, ಡಾ. ನಾಗರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿಲಿದ್ದು, ಪ್ರಗತಿಪರ ಕೃಷಿಕ ಪೆರುವೋಡಿ ಸದಾನಂದ ಆಳ್ವ ಉಪಸ್ಥಿತರಿರುವರು.
ಅಪರಾಹ್ನ 1.05 ರಿಂದ ಲೇಖಕಿ ಕೃಷ್ಣವೇಣಿ ಕಿದೂರು ಅಧ್ಯಕ್ಷತೆಯಲ್ಲಿ ಕೈತೋಟ ಕೃಷಿಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತಾಗಿ ವಿಚಾರಗೋಷ್ಠಿ ನಡೆಯಲಿದೆ. ಖ್ಯಾತ ಲೇಖಕಿ ಸವಿತಾ ಭಟ್ ಅಡ್ವಾಯಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿಲಿದ್ದು, ಪ್ರಗತಿಪರ ಕೃಷಿಕರಾದ ಪುಷ್ಪಾ ಕೊಮ್ಮಂಗಳ ಉಪಸ್ಥಿತರಿರುವರು.
2.15 ರಿಂದ ‘ಸುಭಿಕ್ಷಾ’, ಸಾವಯವ ಕೃಷಿಕರ ಬಹುರಾಜ್ಯ ಸಹಕಾರಿ ಸಂಘ (ನಿ), ತೀರ್ಥಹಳ್ಳಿ ಇದರ ನಿರ್ದೇಶಕಿ ಸವಿತಾ ಬಾಳಿಕೆ ಅಧ್ಯಕ್ಷತೆಯಲ್ಲಿ ಸಾವಯವ ಕೃಷಿ ಪದ್ಧತಿ ಎಂಬ ವಿಷಯದ ಕುರಿತಾಗಿ ವಿಚಾರಗೋಷ್ಠಿ ನಡೆಯಲಿದೆ. ಪ್ರಗತಿಪರ ಕೃಷಿಕ ದಾಮೋದರ ಉಜಾರ್ಲೆ ಉಪಸ್ಥಿತರಿರುವರು.
ಸಾಯಂಕಾಲ 3.30 ರಿಂದ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಟ್ರಸ್ಟಿ, ನಾಲಂದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ಜರಗಲಿದೆ. ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಕೃಷಿ ಸಾಧಕರನ್ನು ಸನ್ಮಾನಿಸಲಿದ್ದಾರೆ.
ನಬಾರ್ಡ್ ಎ. ಜಿ. ಎಂ. ಜ್ಯೋತಿಷ್ ಜಗನ್ನಾಥ್ ಸಮಾರೋಪ ಭಾಷಣ ಮಾಡಲಿದ್ದು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಹಾಗೂ ಪ್ರಗತಿಪರ ಕೃಷಿಕ ಡಾ. ಚಂದ್ರಶೇಖರ ಚೌಟ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು ಇದರ ಉಪಾಧ್ಯಕ್ಷ ಶಂ. ನಾ. ಖಂಡಿಗೆ ಉಪಸ್ಥಿತರಿರುವರು.
ಗೋಷ್ಠಿಗಳೊಂದಿಗೆ ಕೃಷಿ ಯಂತ್ರೋಪಕರಣಗಳು, ಬೀಜಗಳು, ನರ್ಸರಿ ಗಿಡಗಳು, ವಿವಿಧ ಕೃಷಿ ಉತ್ಪನ್ನಗಳು, ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ. ಸ್ಥಳೀಯ ಉತ್ತಮ ಕೃಷಿ ಉತ್ಪನ್ನಗಳ ( ಅಡಿಕೆ, ತೆಂಗು, ಕೊಕ್ಕೋ, ಬಾಳೆ ) ಪ್ರದರ್ಶನಕ್ಕೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…