ಸುಳ್ಯ: ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಆ.15 ರಂದು ಬೆಳ್ಳಾರೆಯಲ್ಲಿ ನಡೆಯಬೇಕಿದ್ದ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮ ಸುಳ್ಯದ ಸುನ್ನೀ ಮಹಲ್ ಗೆ ಸ್ಥಳಾಂತರ ಮಾಡಲಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಪ್ರಕೃತಿ ವಿಕೋಪ ದಿಂದ ನಾಶ ನಷ್ಟಗಳು ಸಂಭವಿಸಿದ್ದು ಎಸ್ ಕೆ ಎಸ್ ಎಸ್,ಎಸ್ ಎಫ್ ನ ಕಾರ್ಯಕರ್ತರನ್ನು ಹೆಚ್ಚಾಗಿ ನಾಶ ನಷ್ಟಗಳು ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸುವುದಕ್ಕಾಗಿ ಪ್ರೇರೇಪಿಸಿದ್ದೇವೆ .ಆದ್ದರಿಂದಲೇ ಫ್ರೀಡಂ ಸ್ಕ್ವಾರ್ ಸ್ವಾಗತ ಸಮಿತಿ ಚೆಯರ್ಮೇನ್ ಅಬೂಬಕ್ಕರ್ ಹಾಜಿ ಮತ್ತು ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಅಧ್ಯಕ್ಷರಾದ ಹಸನ್ ಅರ್ಶದಿ ಬೆಳ್ಳಾರೆ ಅವರ ಜಂಟೀ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಗಸ್ಟ್ 15 ರಂದು 4 ಗಂಟೆ ಗೆ ಬೆಳ್ಳಾರೆಯಲ್ಲಿ ನಡೆಯಬೇಕಿದ್ದ ಪ್ರೀಡಂ ಸ್ಕ್ವೇರ್ ಕಾರ್ಯಕ್ರಮವನ್ನು ಸುಳ್ಯ ಸುನ್ನೀ ಮಹಲ್ ಕಚೇರಿಗೆ ಹಸ್ತಾಂತರಿಸಿ ಸರಳವಾಗಿ ನಡೆಸಲು ತೀರ್ಮಾನಿಸಿರುತ್ತೇವೆ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಶುಕೂರ್ ದಾರಿಮಿ ಕರಾಯ ಆಗಮಿಸಲಿದ್ದಾರೆ ಎಂದು ಪ್ರ ಕಾರ್ಯದರ್ಶಿ ಸಿದ್ದೀಕ್ ಅಡ್ಕ ಮತ್ತು ಪ್ರೀಡಂ ಸ್ಕ್ವಾರ್ ಕನ್ವೀನರ್ ಜಮಾಲುದ್ದೀನ್ ಕೆ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…