ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ರ ಸಂಘದ ವತಿಯಿಂದ ಗಾಂಧಿ ಜಯಂತಿ ಯ 150ನೆ ವರ್ಷಾಚರಣೆಯ ಅಂಗವಾಗಿ ಪತ್ರಕರ್ತ ದಿ.ನಾಗೇಶ್ ಪಡು ಸ್ಮರಣಾರ್ಥ ನಗರದ ನೆಹರು ಮೈದಾನದಲ್ಲಿ ಹಮ್ಮಿಕೊಂಡ ಫ್ರೆಂಡ್. ಶಿಫ್ ಕ್ರಿಕೆಟ್ ಪಂದ್ಯದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ತಂಡ ವಿಜಯಿಯಾಯಿತು.
ಜಿಲ್ಲಾಧಿಕಾರಿ ತಂಡ ಹಾಗೂ ಮಂಗಳೂರು ವಿಶ್ವವಿದ್ಯಾನಿ ಲಯದ ತಂಡದ ನಡುವೆ ನಡೆದ ಅಂತಿಮ ಪಂದ್ಯದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ತಂಡ ಜಯಗಳಿಸಿತು. ಜಿಲ್ಲಾಧಿಕಾರಿ ಗಳ ತಂಡ ದ್ವಿತೀಯ ಪ್ರಶಸ್ತಿ ಪಡೆಯಿತು. ಸರಣಿ ಶ್ರೇಷ್ಠ ಪ್ರಶಸ್ತಿ ಯನ್ನು ಡಿ.ಸಿ ತಂಡದ ಸುಧೀರ್, ಪಂದ್ಯ ಶ್ರೇಷ್ಠ ಪ್ರಶಸ್ತಿ ಯನ್ನು ಮಂಗಳೂರು ವಿ.ವಿ ತಂಡದ ಸಂದೀಪ್, ಉತ್ತಮ ಬೌಲರ್ ಆಗಿಮಂಗಳೂರು ವಿ.ವಿ ತಂಡದ ಮಲ್ಲಿಕಾರ್ಜುನ ಸ್ವಾಮಿ, ಉತ್ತಮ ದಾಂಡಿಗನಾಗಿ ಮಂಗಳೂರು ವಿ.ವಿ.ತಂಡದ ಕಿರಣ್ ಪ್ರಶಸ್ತಿ ಪಡೆದು ಕೊಂಡರು.ಒಟ್ಟು 7ತಂಡಗಳು ಪಂದ್ಯದಲ್ಲಿ ಭಾಗವಹಿಸಿದ್ದವು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕರಾವಳಿ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಗಣೇಶ್ ರಾವ್ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿ ಅಭಿನಂದಿಸಿ ಮಾತನಾಡಿ ಮಂಗಳೂರು ಶಾಂತಿ, ಸೌಹಾರ್ದತೆಯೊಂದಿಗೆ ಬದುಕುವ ಜನಸಮೂಹದ ಪ್ರದೇಶವಾಗಿ,ಮಾದಕ ವ್ಯಸನಮುಕ್ತ ನಗರವಾಗಿ ಗುರುತಿಸು ವಂತಾಗಬೇಕು. ಮಂಗಳೂರಿನ ಸೌಹಾರ್ದತೆಗೆ ಧಕ್ಕೆಯಾಗದಂತೆ ನಾವೆಲ್ಲರೂ ಬಂದಾಗ ಬೇಕಾಗಿದೆ. ಇಲ್ಲಿನ ಜಲ ಹಾಗೂ ಪ್ರಾಕೃತಿಕ ಸಂಪತ್ತಿನ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಬ್ರ್ಯಾಂಡ್ ಮಂಗಳೂರು ಪರಿಕಲ್ಪನೆ ಶ್ಲಾಘನೀಯ ಎಂದರು. ಅಕಾಲ ಮರಣಕ್ಕೀಡಾದ ನಾಗೇಶ್ ಪಡು ಅವರ ಕುಟುಂಬಕ್ಕೆ ತಾನು ವೈಯಕ್ತಿಕ ವಾಗಿ ಸಹಾಯ ನೀಡುವ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ,ಉಪ ಪೊಲೀಸ್ ಆಯುಕ್ತ ಅರುಣಾಂಶು ಗಿರಿ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಉಪಸ್ಥಿತರಿದ್ದರು. ತೀರ್ಪು ಗಾರರಾದ ಮಂಗಳೂರು ವಿಶ್ವವಿದ್ಯಾನಿಲ ಯದ ದೈಹಿಕ ಶಿಕ್ಷಣ ದ ನಿರ್ದೇಶಕ ಕಿಶೋರ್ ಹಾಗೂ ತಂಡ ದ ಸದಸ್ಯರಾದ ವಿಗ್ನೇಶ್ ಭಟ್,ಲೋಕೇಶ್, ಪ್ರವೀಣ್ ಭಾಗವಹಿಸಿ ದ್ದರು. ಪುಷ್ಪರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ ರೈ ಕಟ್ಟಬೀಡು ಸ್ವಾಗತಿಸಿ ದರು. ಇಬ್ರಾಹಿಂ ಅಡ್ಕಸ್ಥಳ ವಂದಿಸಿದ ರು.ಅಜಯ ರಾಜ್, ದಯಾನಂದ ಕುಕ್ಕಾಜೆ, ವಿಜಯ ಕೊಟ್ಯಾನ್ ಪಡು ವೀಕ್ಷಕ ವಿವರಣೆ ನೀಡಿದರು.
*ಪ್ರೆಂಡ್ ಶಿಫ್ ಕ್ರಿಕೆಟ್ ಪಂದ್ಯ ಉದ್ಘಾಟನೆ:–
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಗಾಂಧಿ ಜಯಂತಿ ಯ 150ನೆ ವರ್ಷಾಚರಣೆಯ ಅಂಗವಾಗಿ ಪತ್ರಕರ್ತ ದಿ.ನಾಗೇಶ್ ಪಡು ಸ್ಮರಣಾರ್ಥ ನಗರದ ನೆಹರು ಮೈದಾನದಲ್ಲಿ ಹಮ್ಮಿಕೊಂಡ ಫ್ರೆಂಡ್ ಶಿಫ್ ಕ್ರಿಕೆಟ್ ಪಂದ್ಯವನ್ನು ಜಿಲ್ಲಾಧಿಕಾರಿ ಸಿಂಧೂ.ಬಿ. ರೂಪೇಶ್ ಉದ್ಘಾಟಿಸಿ ಶುಭ ಹಾರೈಸಿದರು.
ಪೊಲೀಸ್ ಕಮೀಶನರ್ ಡಾ.ಪಿ.ಎಸ್.ಹರ್ಷ ನಾಣ್ಯ ಚಿಮ್ಮುಗೆಯ ಮೂಲಕ ಮೊದಲ ಪಂದ್ಯಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದರು. ಪ್ಲಾಸ್ಟಿಕ್ ಬಳಸದೆ ಪರಿಸರ ಉಳಿಸಿ ಮಾಹಿತಿ ಪತ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀ ಪ್ರಸಾದ್ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾಅಥ್ಲೆಟ್ ಅಸೋಸಿಯೇಷನ್ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿ, ಅದಾನಿ ಸಮೂಹ ಸಂಸ್ಥೆ ಯ ಅಧ್ಯಕ್ಷ ಕಿಶೋರ್ ಆಳ್ವ, ಪ್ರೊಬೇಷನರ್ ಐಎಎಸ್ ಅಧಿಕಾರಿ ರಾಹುಲ್ ಶಿಂಡೆ, ಡಿಸಿಪಿ ಅರುಣಾಂಶು ಗಿರಿ, ಎ ಎಸ್ ಪಿ ಸೈದುಲ್ಲಾ ಅದಾವತ್, ಹಿರಿಯ ಪತ್ರಕರ್ತ ರಾದ ಮನೋಹರ ಪ್ರಸಾದ್, ಜಗನ್ನಾಥ ಶೆಟ್ಟಿ ಬಾಳ,ಪುಷ್ಪರಾಜ್ ಬಿ.ಎನ್, ಭಾಸ್ಕರ ರೈ, ದಯಾನಂದ ಕುಕ್ಕಾಜೆ ಮೊದಲಾದ ವರು ಉಪಸ್ಥಿತರಿದ್ದರು. ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…
ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…
115 ವರ್ಷಗಳ ಇತಿಹಾಸ ಇರುವ ಹಾಗೂ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಜಲಾಶಯ ವಾಣಿವಿಲಾಸ…