ಸುಳ್ಯ: ಕೊರೊನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಮಾ.31 ರವರೆಗೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. 9 ಜಿಲ್ಲೆಗಳು ಲಾಕ್ ಡೌನ್ ಆಗಲಿದೆ. ಅಂದರೆ ಬಂದ್… ಬಂದ್ ಅಲ್ಲ. ಅಗತ್ಯ ಸೇವೆ ಲಭ್ಯವಿದೆ. ಆದರೆ ಅತೀ ಅಗತ್ಯವಾದರೆ ಮಾತ್ರಾ ವಾರಗಳ ಕಾಲ ಪೇಟೆಗೆ ತೆರಳಿ.
ಮಾ.31 ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು, ಹಾಗೂ ಬೆಳಗಾವಿ ಜಿಲ್ಲೆ ಲಾಕ್ ಡೌನ್ ಆಗಿರುತ್ತದೆ.
ಇದೆಲ್ಲಾ ಇರುವುದಿಲ್ಲ :
- ಬಸ್ ಸಂಚಾರ, ರೈಲು, ಮೆಟ್ರೋ ಸಂಪೂರ್ಣ ಬಂದ್
- ಹೊರಜಿಲ್ಲೆಗಳಿಂದ ಇಲ್ಲಿಗೆ ಯಾವುದೇ ಬಸ್, ವಾಹನ ಪ್ರವೇಶಿಸುವಂತಿಲ್ಲ.
- ಕೈಗಾರಿಕೆಗಳಲ್ಲಿ ದಿನಬಿಟ್ಟು ದಿನ ಅರ್ಧದಷ್ಟು ಕಾರ್ಮಿಕರ ನಿಯೋಜನೆ.
ಯಾವುದೆಲ್ಲಾ ಇರುತ್ತದೆ :
- ಆಹಾರ, ಹಾಲು, ದಿನಸಿ, ತರಕಾರಿ,
- ಪತ್ರಿಕಾ ವಿತರಣೆ, ಮಾಧ್ಯಮ
- ಅಂಚೆ, ಬ್ಯಾಂಕ್, ಎಟಿಎಂ, ದೂರವಾಣಿ
- ಆಸ್ಪತ್ರೆ, ಮೆಡಿಕಲ್ ಸ್ಟೋರ್‌ಗಳು
- ಆಹಾರಗಳ ಹೋಮ್ ಡೆಲಿವರಿ
- ಹೊಟೇಲ್‌ಗಳ ಪಾರ್ಸಲ್ ಸೇವೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel