ಸುಳ್ಯ: ಬಡಿಯಡ್ಕದಲ್ಲಿ ಇಂದು ಹಲಸು ಮೇಳದ ಗೌಜಿ ನಡೆಯಲಿದೆ. ಇಂದು ಇಡೀ ದಿನ ಹಲಸಿನದ್ದೇ ಮಾತುಕತೆ ನಡೆಯಲಿದೆ. ಇಲ್ಲಿ ವಿಶೇಷವಾಗಿ ಗೋವಿಗಾಗಿ ಹಲಸು ಮೇಳ ನಡೆಯುತ್ತಿರುವುದು ವಿಶೇಷವಾಗಿದೆ. ಗೋವಿಗೆ ಹಲಸನ್ನೇ ಗೋಗ್ರಾಸ ನೀಡುವ ಬಗ್ಗೆಯೂ ಇಲ್ಲಿ ಮಾತುಕತೆ ನಡೆಯುತ್ತಿದೆ. ಹೀಗಾಗಿ ಹಲಸು ಈ ಬಾರಿ ಅತ್ಯಂತ ಜನಪ್ರತಿಯವಾಗುತ್ತಿದೆ.
ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠ ಇಂದು ಬೆಳಗ್ಗಿನಿಂದ ಸಂಜೆಯವರೆಗೆ ಹಲಸು ಮೇಳ ನಡೆಯುತ್ತದೆ. ಹಲಸು ಮೌಲ್ಯ ವರ್ಧನೆ, ಹಲಸು ಮಾತುಕತೆ , ತಿಂಡಿಗಳ ಪ್ರದರ್ಶನ ಇಲ್ಲಿರುತ್ತದೆ.
ಹಲಸು ಮೇಳದಲ್ಲಿ ಏನೇನಿದೆ?…..
ಹಲಸಿನ ಕಾಯಿ ದೋಸೆ, ಹಣ್ಣಿನ ದೋಸೆ, ಹಲಸಿನ ಹಣ್ಣಿನ ಕೊಟ್ಟಿಗೆ, ಗೆಣಸಲೆ , ಹಲಸಿನ ಹಣ್ಣಿನ, ಕಾಯಿಯ ಗುಳಿ ಅಪ್ಪ, ಹಲಸಿನ ಹಣ್ಣಿನ, ಕಾಯಿ ಸೇಮಿಗೆ,
ಹಲಸಿನ ಇಡ್ಲಿ, ಹಲಸಿನ ಬೀಜದ ಹೋಳಿಗೆ, ಹಲಸಿನ ಹಣ್ಣಿನ ಹಲ್ವ, ಹಲಸಿನ ಬೀಜದ ಹಲ್ವ, ಉಂಡ್ಲಕಾಳು, ಚಿಪ್ಸ್, ಹಪ್ಪಳಗಳು, ಹಲಸಿನ ಕಾಯಿಸೊಳೆ, ಹಣ್ಣಿನ ಸೊಳೆ, ಹಲಸಿನ ಹಣ್ಣಿನ ಡ್ರೈ ಸೊಳೆ, ಹಲಸಿನ ಹಣ್ಣಿನ ಕೇಕ್, ಹಲಸಿನ ಬೀಜದ ಬಿಸ್ಕತ್ತು, ವಡೆ, ಹಲಸಿನ ಸೊಳೆಯ ರೊಟ್ಟಿ, ಹಲಸಿನ ಹಣ್ಣಿನ ಜ್ಯೂಸ್
ಹಲಸಿನ ಹಣ್ಣಿನ ಜೆಲ್ಲಿ ಜಾಮ್, ಹಲಸಿನ ಕೇಕ್, ಪಾಯಸಗಳು , ಬೇಳೆಯ ಪಾಯಸ, ಪೆರಟಿ ಪಾಯಸ, ಜೆರಡಿ ಪಾಯಸ, ಹಣ್ಣಿನ ಪಾಯಸ, ಹಲಸಿನ ಚಿಳ್ಳೆಯಲ್ಲಿ ಪಾಯಸ, ಹಲಸಿನ ಕಾಯಿ ಚಿಪ್ಸ್, ಹಲಸಿನ ಬೀಜದ ರಸಂ ಪುಡಿ, ಹಲಸಿನ ಐಸ್ ಕ್ರೀಂ, ಹಲಸಿನ ಐಸ್ ಕ್ಯಾಂಡಿಗಳು, ಹಲಸಿನ ಗುಜ್ಜೆ ಮಂಚೂರಿ, ಹಲಸಿನ ಗುಜ್ಜೆ ಕಬಾಬ್, ವಿವಿಧ ನಮೂನೆಯ ಸಮೂಸಗಳು, ಹಲಸಿನ ಗುಜ್ಜೆ ಪಲಾವು ಇದ್ದರೆ. ವಿವಿಧ ಜಾತಿಯ ಹಲಸಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಹಲವು ರೀತಿಯ ಹಲಸಿನ ವಿವಿಧ ರೀತಿಯ ತಿಂಡಿ ತಿನಸುಗಳು, ಉತ್ಪನ್ನಗಳು ಮೇಳದಲ್ಲಿ ಮಾರಾಟಕ್ಕೂ ಲಭ್ಯವಿದೆ.
ಇಲ್ಲಿ ವಿಶೇಷ ಎಂದರೆ ಹಬ್ಬದಲ್ಲಿ ಮಾರಾಟವಾಗುವ ಹಲಸು ಉತ್ಪನ್ನಗಳಲ್ಲಿ ಒಮದು ಪಾಲು ಗೋಶಾಲೆಯ ಅಭಿವೃದ್ಧಿಗೂ ಬಳಕೆಯಾಗುತ್ತದೆ.
ಜೂ.15 ಹಾಗೂ 16 ರಂದು ಪುತ್ತೂರಿನಲ್ಲಿ :
ಜೂನ್.15 ಹಾಗೂ 16 ರಂದು ಪುತ್ತೂರಿನಲ್ಲಿ ಹಲಸು ಸಾರ ಮೇಳ ನಡೆಯಲಿದೆ. ಹಲಸು ಸ್ನೇಹಿ ಕೂಟದ ವತಿಯಿಂದ ನಡೆಯುವ ಹಲಸು ಸಾರ ಮೇಳ ಕೂಡಾ ವಿಶೇಷ ರೀತಿಯಲ್ಲಿ ನಡೆಯಲಿದೆ. ವಿಶೇಷವಾಗಿ ಐ ಐ ಎಚ್ ಆರ್ ಬೆಂಗಳೂರು ಸಂಸ್ಥೆ ಕೂಡಾ ಆಗಮಿಸಿ ಮಾಹಿತಿ ನೀಡಲಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…