ಸುಳ್ಯ: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಅಡ್ಪಂಗಾಯ ಮಾವಿನ ಪಳ್ಳದಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿರುವ ಬಡ ಕುಟುಂಬಕ್ಕೆ ಆಸರೆಯನ್ನು ಒದಗಿಸಲು ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಕೈ ಜೋಡಿಸಿದ್ದಾರೆ.
ಮುರಿದು ಬೀಳಲು ಸಿದ್ಧವಾಗಿದ್ದ ಗುಡಿಸಲಿನಿಂದ ಕುಟುಂಬವನ್ನು ತಹಶೀಲ್ದಾರ್ ಎನ್.ಎ.ಕುಂಞಿ ಅಹಮದ್ ನೇತೃತ್ವದ ಅಧಿಕಾರಿಗಳ ತಂಡ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದರು.
ಇದೀಗ ಧರೆಗುರುಳಿದ ಮನೆಯನ್ನು ತೆರವು ಮಾಡಿ ಆದೇ ಜಾಗದಲ್ಲಿ ಒಂದು ಮನೆಯನ್ನು ನಿರ್ಮಿಸಿ ಕೊಡಲು ತಹಶೀಲ್ದಾರ್ ಆಸಕ್ತಿ ವಹಸಿರುವುದಕ್ಕೆ ಯುವ ಬ್ರಿಗೇಡ್, ಎಸ್ ಕೆ ಎಸ್ ಎಸ್ ಎಫ್ ವಿಖಾಯ ತಂಡ ತಮ್ಮ ಶ್ರಮದಾನದ ಮೂಲಕ ಕೈ ಜೋಡಿಸಿದ್ದಾರೆ.
ಶುಕ್ರವಾರ ಯುವ ಬ್ರಿಗೆಡ್ ತಂಡದ ಸದಸ್ಯರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳು ಗುಡಿಸಲನ್ನು ತೆರವು ಗೊಳಿಸಿ ಅಲ್ಲಿನ ಪ್ರದೇಶವನ್ನು ಶುಚಿಗೊಳಿಸಿದರು. ಸುತ್ತಲೂ ಹಬ್ಬಿದ ಪೊದೆ ಹಾಗು ಸಣ್ಣ ಪುಟ್ಟ ಬಳ್ಳಿಗಳನ್ನು ತೆರವು ಮಾಡಿದ್ದಾರೆ.
ಶನಿವಾರ ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ವಿಖಾಯ ಅಡ್ಕ ಇರುವಂಬಳ್ಳ ಶಾಖಾ ತಂಡವು ಮನೆಯ ಅಡಿಪಾಯ ನಿರ್ಮಾಣ ಕಾರ್ಯ ನಡೆಸಿದ್ದಾರೆ.
ಮನೆ ನಿರ್ಮಾಣಕ್ಕೆ ಅಗತ್ಯವಾದ ಸಾಮಾಗ್ರಿಗಳನ್ನು ಮತ್ತು ಸಹಾಯ ಧನವನ್ನು ನೀಡುವ ಮೂಲಕ ಹಲವು ಮಂದಿ ದಾನಿಗಳು ಕೂಡ ಸಹಕಾರ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾವತಿ ಬಾಳಿಲ,
ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶುಭದಾ ಎಸ್ ರೈ, ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಮನೆ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದರು.
ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…