ಸುಳ್ಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಸಂಜಯ ರಾಯಭಾರ ಯಕ್ಷಗಾನ ತಾಳಮದ್ದಳೆ ಜರಗಿತು.
ಬೆಂಗಳೂರಿನ ಶಂಭಯ್ಯ ಕೊಡಪಾಲ ಮತ್ತು ಮನೆಯವರ ಸೇವಾ ರೂಪವಾಗಿ ನಡೆಸಲ್ಪಟ್ಟ ಈ ಕಾರ್ಯಕ್ರಮದ ಮೊದಲಿಗೆ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಕೀರಿಕ್ಕಾಡು ವನಮಾಲ ಕೇಶವ ಭಟ್ಟರ ಉಪಸ್ಥಿತಿಯಲ್ಲಿ ಸಂಘದ ಹಿರಿಯ ಭಾಗವತ ವಿಶ್ವವಿನೋದ ಬನಾರಿ ಅವರ ನಿರ್ದೇಶನದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಮೋಹನ ಮೆಣಸಿನಕಾನ, ಮಡ್ವ ಶಂಕರ ನಾರಾಯಣ ಭಟ್ ಮತ್ತು ನಿತೀಶ್ ಕುಮಾರ್ ಎಂಕಣ್ಣಮೂಲೆ ಸಹಕರಿಸಿದರು.
ಚೆಂಡೆ ಮದ್ದಳೆ ವಾದನದಲ್ಲಿ ಮಂಡೆಕ್ಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣು ಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಭಾಗವಹಿಸಿದರು. ಅರ್ಥಧಾರಿಗಳಾಗಿ ನಾರಾಯಣ ಮಾಸ್ತರ್ ದೇಲಂಪಾಡಿ (ಕೌರವ) ರಾಮಣ್ಣ ಮಾಸ್ತರ್ ದೇಲಂಪಾಡಿ (ಗುರುಕೃಪರು) ಬಿ.ಯಚ್ ವೆಂಕಪ್ಪ ಗೌಡ (ಕರ್ಣ) ರಾಮನಾಯ್ಕ್ ದೇಲಂಪಾಡಿ(ಅಶ್ವತ್ಥಾಮ) ಡಿ.ವೆಂಕಟ್ರಮಣ ಮಾಸ್ತರ್ ದೇಲಂಪಾಡಿ (ಸಂಜಯ) ಯಂ. ಐತ್ತಪ್ಪ ಗೌಡ ಮುದಿಯಾರು(ಶ್ರೀಕೃಷ್ಣ) ವಿದ್ಯಾಭೂಷಣ ಪಂಜಾಜೆ(ಭೀಮ) ಗೋಪಾಲಕೃಷ್ಣ ರೈ ಮುದಿಯಾರು(ಅರ್ಜುನ) ಶೇಖರ ಪಾಟಾಳಿ ಕಲ್ಲರ್ಪೆ(ದ್ರೌಪದಿ) ತಮ್ಮ ಅರ್ಥಗಾರಿಕೆಯಲ್ಲಿ ಗಮನ ಸೆಳೆದರು. ಲತಾ ಆಚಾರ್ಯ ಬನಾರಿ ಸ್ವಾಗತಿಸಿ, ದಿವ್ಯಾನಂದ ಪೆಂರ್ದಲಪದವು ಧನ್ಯವಾದ ಸಮರ್ಪಣೆಗೈದರು.