ಸುಳ್ಯ/ಕಡಬ: ಕುಕ್ಕೆ ಸುಬ್ರಹ್ಮಣ್ಯದ ನೂತನ ಬ್ರಹ್ಮರಥದ ಮೆರವಣಿಗೆ ಬಲ್ಯದಿಂದ ಇಂದು ಬೆಳಗ್ಗೆ ಹೊರಟಿದೆ. ಮಂಗಳೂರಿನಿಂದ ಹೊರಟ ರಥದ ಮೆರವಣಿಗೆ ನಿನ್ನೆ ತಡರಾತ್ರಿ ಬಲ್ಯ ದೇವಸ್ಥಾನದ ಬಳಿ ತಂಗಿತ್ತು.
ಬುಧವಾರ ಬೆಳಗ್ಗೆ ಬಲ್ಯದಿಂದ ಹೊರಟು ಕಡಬದಲ್ಲಿ ಅದ್ದೂರಿ ಸ್ವಾಗತ ನಡೆದು ಬಳಿಕ ವಾಹನ ರಾಲಿ ಮೂಲಕ ಸುಬ್ರಹ್ಮಣ್ಯದ ಕಡೆಗೆ ತೆರಳಲಿದೆ. ಕುಲ್ಕುಂದದ ಬಳಿಯಿಂದ ಆಕರ್ಷಕ ಮೆರವಣಿಗೆ ನಡೆಯಲಿದೆ. ಟ್ಯಾಬ್ಲೋ, ಚೆಂಡೆ ಇತ್ಯಾದಿಗಳ ಮೂಲಕ ಅದ್ದೂರಿ ಮೆರವಣಿಗೆ ನಡೆಯಲಿದೆ. ಸುಬ್ರಹ್ಮಣ್ಯದಲ್ಲಿ ಟ್ಯಾಬ್ಲೋ, ತಳಿರು ತೋರಣ, ಹೂ, ಗಳಿಂದ ರಸ್ತೆ ಶೃಂಗಾರ ಮಾಡಿ ವಿಜೃಂಭಣೆಯಿಂದ ಸ್ವಾಗತಿಸಲು ಸಿದ್ಧತೆ ನಡೆದಿದೆ.
ರಥವನ್ನು ಉದ್ಯಮಿ ಮುತ್ತಪ್ಪ ರೈ ಹಾಗೂ ಅಜಿತ್ ಕುಮಾರ್ ಕಡಬ ಅವರು ಕಾಣಿಕೆ ರೂಪದಲ್ಲಿ ನೀಡುತ್ತಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel