ಬಳ್ಪ: ಇತಿಹಾಸ ಪ್ರಸಿದ್ಧ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈಗ ಇನ್ನೊಂದು ಅಚ್ಚರಿ ಕಂಡಿದೆ. ಅತ್ಯಂತ ಪುರಾತನವಾದ ಸಂಪೂರ್ಣ ಶಿಲಾಮಯವಾದ ಹಾಗೂ ರಾಜ್ಯದಲ್ಲೇ ಅಪರೂಪ ಎನಿಸಿದ ತ್ರಿಶೂಲಿನೀ ದೇವಸ್ಥಾನದಲ್ಲಿ ಆಂಜನೇಯ ಪ್ರತಿಮೆ ಇದೆ. ಈ ಪ್ರತಿಮೆ ಬೆಳೆದಿದೆ, ಬೆಳೆಯುತ್ತಿದೆ. ಇದರ ವಿವರ ಇಲ್ಲಿದೆ..
ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನವು ಅತ್ಯಂತ ಪುರಾತನವಾದ ಶಿಲಾಮಯ ದೇಗುಲ. ಚೋಳರು, ಕದಂಬರ ಕಾಲದಲ್ಲಿ ಈ ದೇವಸ್ಥಾನ ರಚನೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಕಳೆದ ಎರಡು ವರ್ಷದ ಹಿಂದೆ ಜೀರ್ಣೋದ್ಧಾರಗೊಂಡು ಈಗ ಪೂಜೆ ನಡೆಯುತ್ತಿದೆ. ಇಲ್ಲಿ ತ್ರಿಶೂಲಕ್ಕೆ ಪೂಜೆ ನಡೆಯುವುದು ವಿಶೇಷತೆ. ಹೀಗಾಗಿ ದಕ್ಷಿಣ ಭಾರತದ ಶಕ್ತಿ ಪೀಠ ಎಂದು ನಂಬಲಾಗುತ್ತದೆ. ಇಲ್ಲಿ ನಡೆಸುವ ಪ್ರಾರ್ಥನೆಗಳಿಗೆ ವಿಶೇಷವಾದ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ. ಹಿಂದೆ ರಾಜರುಗಳು ಯಾವುದೇ ಕೆಲಸಕ್ಕೆ ಹೊರಡುವ ವೇಳೆ ಇಲ್ಲಿ ಪ್ರಾರ್ಥನೆ ಸಲ್ಲಿಸಿ ತೆರಳುತ್ತಿದ್ದರು. ಹೀಗಾಗಿ ಇದೊಂದು ಶಕ್ತಿ ಪೀಠ ಎಂದೇ ಕರೆಯಲಾಗುತ್ತಿತ್ತು. ಇದೀಗ ಜೀರ್ಣೋದ್ಧಾರಗೊಂಡು ವಾರ್ಷಿಕ ಉತ್ಸವಗಳು ನಡೆಯುತ್ತಿದೆ.
ಅದರ ಜೊತೆಗೆ ಈಗ ವಿಶೇಷವೊಂದು ಇಲ್ಲಿ ನಡೆದಿದೆ. ದೇವಸ್ಥಾನವು ಸಂಪೂರ್ಣ ಶಿಲಾಮಯವಾಗಿದ್ದು ಸುತ್ತು ಪೌಳಿಯ ಹೊರ ಶಿಲೆಯಲ್ಲಿ ಆಂಜನೇಯ ಪ್ರತಿಮೆ ಇದೆ. ಇದಕ್ಕೆ ಪೂಜೆಯೂ ನಡೆಯುತ್ತಿದೆ. ಈ ಪ್ರತಿಮೆ ಬೆಳೆಯುತ್ತಿದೆ.ಇದನ್ನು ಹತ್ತಿರದಿಂದ ಗಮನಿಸುವ ಹಾಗೂ ಪ್ರತೀ ದಿನವೂ ಪೂಜೆ ಮಾಡುವ ಶ್ರೀವತ್ಸ ಅವರು ಆಂಜನೇಯ ಪ್ರತಿಮೆ ಬೆಳೆಯುವ ಬಗ್ಗೆ ಮಾಹಿತಿ ನೀಡುತ್ತಾರೆ. ಕಳೆದ ವರ್ಷ ಆಂಜನೇಯ ಪ್ರತಿಮೆಗೆ ಬೆಳ್ಳಿಯ ಕವಚ ಮಾಡಲಾಗಿತ್ತು. ದಾನಿಗಳು ಇದನ್ನು ಸೇವಾ ರೂಪದಲ್ಲಿ ಸಲ್ಲಿಸಿದ್ದರು. ಇದೀಗ ಈ ಕವಚ ಅಳವಡಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀವತ್ಸ ಎಂ ವಿ. ಇದರ ಜೊತೆಗೆ ಈ ಹಿಂದೆ ಆಂಜನೇಯ ಪ್ರತಿಮೆಯ ಮೇಲೆ ಹೂವು ಇಡಲು ಸಾದ್ಯವಾಗುತ್ತಿರಲಿಲ್ಲ ಈಗ ಹೂವು ಇಡಲು ಸಾಧ್ಯವಾಗುತ್ತದೆ ಎಂದು ಶ್ರೀವತ್ಸ ವಿವರಣೆ ನೀಡುತ್ತಾರೆ. ಈ ಬಗ್ಗೆ ಹಿರಿಯರು ಹಾಗೂ ತಜ್ಞರೊಬ್ಬರ ಬಳಿ ಕೇಳಿದಾಗ ಇದು ಬೆಳೆಯುವ ಆಂಜನೇಯ ಪ್ರತಿಮೆ ಎಂದು ಹೇಳಿದ್ದರು ಎಂದು ವಿವರಣೆ ನೀಡುತ್ತಾರೆ ಶ್ರೀವತ್ಸ. ಈ ಹಿಂದೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ದುಂಬಿಯೊಂದು ಬಂದಿರುವುದು ಹಾಗೂ ಮರುವರ್ಷ ಜಾತ್ರಾ ಉತ್ಸವದ ಸಂದರ್ಭವೂ ಅದೇ ಮಾದರಿ ದುಂಬಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರೆ, ದೇವಸ್ಥಾನ ಬ್ರಹ್ಮಕಲಶೋತ್ಸವದ ದಿನ ಫೋಟೊ ತೆಗೆದವರಿಗೂ ಗರ್ಭ ಗುಡಿಯಲ್ಲಿ ತ್ರಿಶೂಲದ ಮಾದರಿಯ ಚಿತ್ರ ಗೋಚರಿಸಿತ್ತು. ಇದೀಗ ಆಂಜನೇಯ ಪ್ರತಿಮೆ ಬೆಳೆವಣಿಗೆ ಇಲ್ಲಿ ಇನ್ನೊಂದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
https://theruralmirror.com/?p=16076
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…