Advertisement
ವಿಶೇಷ ವರದಿಗಳು

ಬಳ್ಪ ತ್ರಿಶೂಲಿನೀ ದೇವಸ್ಥಾನದ ಆಂಜನೇಯ ಮೂರ್ತಿಯಲ್ಲಿ ಕಂಡ ಅಚ್ಚರಿ ಏನು ಗೊತ್ತಾ ?

Share

ಬಳ್ಪ: ಇತಿಹಾಸ ಪ್ರಸಿದ್ಧ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಈಗ ಇನ್ನೊಂದು ಅಚ್ಚರಿ ಕಂಡಿದೆ. ಅತ್ಯಂತ ಪುರಾತನವಾದ ಸಂಪೂರ್ಣ ಶಿಲಾಮಯವಾದ ಹಾಗೂ ರಾಜ್ಯದಲ್ಲೇ ಅಪರೂಪ ಎನಿಸಿದ ತ್ರಿಶೂಲಿನೀ ದೇವಸ್ಥಾನದಲ್ಲಿ ಆಂಜನೇಯ ಪ್ರತಿಮೆ ಇದೆ. ಈ ಪ್ರತಿಮೆ ಬೆಳೆದಿದೆ, ಬೆಳೆಯುತ್ತಿದೆ. ಇದರ ವಿವರ ಇಲ್ಲಿದೆ..

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನವು ಅತ್ಯಂತ ಪುರಾತನವಾದ ಶಿಲಾಮಯ ದೇಗುಲ. ಚೋಳರು, ಕದಂಬರ ಕಾಲದಲ್ಲಿ ಈ ದೇವಸ್ಥಾನ ರಚನೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಕಳೆದ ಎರಡು ವರ್ಷದ ಹಿಂದೆ ಜೀರ್ಣೋದ್ಧಾರಗೊಂಡು ಈಗ ಪೂಜೆ ನಡೆಯುತ್ತಿದೆ. ಇಲ್ಲಿ ತ್ರಿಶೂಲಕ್ಕೆ ಪೂಜೆ ನಡೆಯುವುದು ವಿಶೇಷತೆ. ಹೀಗಾಗಿ ದಕ್ಷಿಣ ಭಾರತದ ಶಕ್ತಿ ಪೀಠ ಎಂದು ನಂಬಲಾಗುತ್ತದೆ. ಇಲ್ಲಿ ನಡೆಸುವ ಪ್ರಾರ್ಥನೆಗಳಿಗೆ ವಿಶೇಷವಾದ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ. ಹಿಂದೆ ರಾಜರುಗಳು ಯಾವುದೇ ಕೆಲಸಕ್ಕೆ ಹೊರಡುವ ವೇಳೆ ಇಲ್ಲಿ  ಪ್ರಾರ್ಥನೆ ಸಲ್ಲಿಸಿ ತೆರಳುತ್ತಿದ್ದರು. ಹೀಗಾಗಿ ಇದೊಂದು ಶಕ್ತಿ ಪೀಠ ಎಂದೇ ಕರೆಯಲಾಗುತ್ತಿತ್ತು. ಇದೀಗ ಜೀರ್ಣೋದ್ಧಾರಗೊಂಡು ವಾರ್ಷಿಕ ಉತ್ಸವಗಳು ನಡೆಯುತ್ತಿದೆ.

ಅದರ ಜೊತೆಗೆ ಈಗ ವಿಶೇಷವೊಂದು ಇಲ್ಲಿ ನಡೆದಿದೆ. ದೇವಸ್ಥಾನವು ಸಂಪೂರ್ಣ ಶಿಲಾಮಯವಾಗಿದ್ದು ಸುತ್ತು ಪೌಳಿಯ ಹೊರ ಶಿಲೆಯಲ್ಲಿ  ಆಂಜನೇಯ ಪ್ರತಿಮೆ ಇದೆ. ಇದಕ್ಕೆ ಪೂಜೆಯೂ ನಡೆಯುತ್ತಿದೆ. ಈ ಪ್ರತಿಮೆ ಬೆಳೆಯುತ್ತಿದೆ.ಇದನ್ನು ಹತ್ತಿರದಿಂದ ಗಮನಿಸುವ ಹಾಗೂ ಪ್ರತೀ ದಿನವೂ ಪೂಜೆ ಮಾಡುವ ಶ್ರೀವತ್ಸ ಅವರು ಆಂಜನೇಯ ಪ್ರತಿಮೆ ಬೆಳೆಯುವ ಬಗ್ಗೆ ಮಾಹಿತಿ ನೀಡುತ್ತಾರೆ.  ಕಳೆದ ವರ್ಷ ಆಂಜನೇಯ ಪ್ರತಿಮೆಗೆ ಬೆಳ್ಳಿಯ ಕವಚ ಮಾಡಲಾಗಿತ್ತು. ದಾನಿಗಳು ಇದನ್ನು  ಸೇವಾ ರೂಪದಲ್ಲಿ ಸಲ್ಲಿಸಿದ್ದರು. ಇದೀಗ ಈ ಕವಚ ಅಳವಡಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀವತ್ಸ ಎಂ ವಿ. ಇದರ ಜೊತೆಗೆ ಈ ಹಿಂದೆ ಆಂಜನೇಯ ಪ್ರತಿಮೆಯ ಮೇಲೆ ಹೂವು ಇಡಲು ಸಾದ್ಯವಾಗುತ್ತಿರಲಿಲ್ಲ ಈಗ ಹೂವು ಇಡಲು ಸಾಧ್ಯವಾಗುತ್ತದೆ ಎಂದು ಶ್ರೀವತ್ಸ ವಿವರಣೆ ನೀಡುತ್ತಾರೆ. ಈ ಬಗ್ಗೆ ಹಿರಿಯರು ಹಾಗೂ ತಜ್ಞರೊಬ್ಬರ ಬಳಿ ಕೇಳಿದಾಗ  ಇದು ಬೆಳೆಯುವ ಆಂಜನೇಯ ಪ್ರತಿಮೆ ಎಂದು ಹೇಳಿದ್ದರು ಎಂದು  ವಿವರಣೆ ನೀಡುತ್ತಾರೆ ಶ್ರೀವತ್ಸ. ಈ ಹಿಂದೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ದುಂಬಿಯೊಂದು ಬಂದಿರುವುದು  ಹಾಗೂ ಮರುವರ್ಷ ಜಾತ್ರಾ ಉತ್ಸವದ ಸಂದರ್ಭವೂ ಅದೇ ಮಾದರಿ ದುಂಬಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರೆ, ದೇವಸ್ಥಾನ ಬ್ರಹ್ಮಕಲಶೋತ್ಸವದ ದಿನ ಫೋಟೊ ತೆಗೆದವರಿಗೂ ಗರ್ಭ ಗುಡಿಯಲ್ಲಿ  ತ್ರಿಶೂಲದ ಮಾದರಿಯ ಚಿತ್ರ ಗೋಚರಿಸಿತ್ತು. ಇದೀಗ ಆಂಜನೇಯ ಪ್ರತಿಮೆ ಬೆಳೆವಣಿಗೆ ಇಲ್ಲಿ ಇನ್ನೊಂದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

https://theruralmirror.com/?p=16076

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು

ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…

7 hours ago

“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ

‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ…

9 hours ago

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ

ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…

15 hours ago

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…

16 hours ago

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?

ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್‌ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…

23 hours ago

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

1 day ago