ಬಳ್ಪ ಸಮಗ್ರ ಅಭಿವೃದ್ಧಿಯಾಗಿದೆ ; ಮುಂದೆಯೂ ಅಭಿವೃದ್ಧಿಯಾಗುತ್ತದೆ – ವೆಂಕಟ್ ವಳಲಂಬೆ

September 27, 2019
9:26 PM

ಸುಬ್ರಹ್ಮಣ್ಯ: ಕಳೆದ ನಾಲ್ಕು ವರ್ಷದಲ್ಲಿ ಬಳ್ಪ ಗ್ರಾಮದಲ್ಲಿ ಸುಮಾರು 10 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಕೆಲಸಗಳು ನಡೆದಿದೆ.ಬಳ್ಪ ಗ್ರಾಮದಲ್ಲಿ ಅಭಿವೃದ್ಧಿ ಪರ್ವವು ನಡೆದಿದೆ. ಮುಂದೆಯೂ ಅಭಿವೃದ್ಧಿಯಾಗುತ್ತದೆ. ಹಾಗಿದ್ದರೂ ವಾಸ್ತವ ಸಂಗತಿಯನ್ನು ಮರೆ ಮಾಚಿ  ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ ಎಂದು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಆರೋಪಿಸಿದ್ದಾರೆ.

Advertisement

ಸುಬ್ರಹ್ಮಣ್ಯದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು  ಗಾಂಧಿ ಕಲ್ಪನೆಯ ಗ್ರಾಮ ಸ್ವರಾಜ್ಯಕ್ಕೆ ಕಾಂಗ್ರೆಸ್  ಕೊಡುಗೆಯನ್ನೆ ನೀಡಿಲ್ಲ. ಬಿಜೆಪಿ ಮತ್ತು ಈಗಿನ ಪ್ರಧಾನಿಯ  ನರೇಂದ್ರ ಮೋದಿಯವರು ಗ್ರಾಮ ರಾಜ್ಯದ ಕಲ್ಪನೆಯನ್ನು ಕಾರ್ಯಗತಗೊಳಿಸುವಲ್ಲಿ ಆದರ್ಶ ಗ್ರಾಮ ಪರಿಕಲ್ಪನೆಯನ್ನು ದೇಶದಲ್ಲಿ 2014 ರಲ್ಲಿ ಜಾರಿಗೆ ತಂದರು. ಅದರಂತೆ ಬಳ್ಪ ಗ್ರಾಮವನ್ನು ದತ್ತು ಪಡೆದ ಸಂಸದ ನಳಿನ್‍ ಕುಮಾರ್ ಗ್ರಾಮವನ್ನು ಅಭಿವೃದ್ಧಿಗೊಳಿಸಿದ್ದಾರೆ. ಗ್ರಾಮ ಹಂತಹಂತವಾಗಿ ಅಭಿವೃದ್ಧಿಗೊಳ್ಳುತ್ತಿದೆ ಎಂದರು. ಹಾಗೆಂದು ಇಲ್ಲಿ ಸಂಪೂರ್ಣ ಅಭಿವೃದ್ಧಿ ಆಗಿದೆ ಎಂದು ನಾವು ಹೇಳುವುದಿಲ್ಲ.ಸ್ವಲ್ಪ ಮಟ್ಟಿನ ಲೋಪ ದೋಷಗಳು ಇರಬಹುದು.ಅದನ್ನು ದೊಡ್ಡದು ಮಾಡಿ ಅಪಪ್ರಚಾರ ಮಾಡುವ ಕೆಲಸವಾಗುತ್ತಿದೆ.ಬೆರಳೆಣಿಕೆಯ ಘಟನೆಗಳನ್ನು ವೈಭವೀಕರಿಸಿ ಅಪಪ್ರಚಾರ ನಡೆಯುತ್ತಿದೆ.ಏನಿದ್ದರೂ ಮುಂದೆಯೂ ಬಳ್ಪದಲ್ಲಿ ನಿರಂತರ ಅಭಿವೃದ್ಧಿ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯಲಿದೆ ಎಂದು ವೆಂಕಟ್ ವಳಲಂಬೆ ಹೇಳಿದರು. ಗ್ರಾಮದಲ್ಲಿ ಶಾಲೆಗಳ ಆಧುನೀಕರಣ. ಬೀದಿ ದೀಪ, ಪ್ರಮುಖ ರಸ್ತೆಗಳ ಕಾಂಕ್ರೀಟಿಕರಣ, ಕೃಷಿ ಪತ್ತಿನ ಸಹಕಾರಿ ಸಂಘ, ರಾಷ್ಟ್ರೀಕೃತ ಬ್ಯಾಂಕು. ಅಂಗನವಾಡಿ, ಪ್ರಾಥಮಿಕ ಶಾಲೆಗಳ ಪುನಾಶ್ಚೇತನ, 16 ವಿದ್ಯುತ್ ಪರಿವರ್ತಕ ಅಳವಡಿಕೆ ಹೀಗೆ ಸಾಕಷ್ಟು ಅಭಿವೃದ್ಧಿಗಳು ನಡೆದಿದೆ ಎಂದರು.

ಇತ್ತೀಚೆಗೆ ರಾಮಣ್ಣ ಪೂಜಾರಿ ಅವರು ಅನಾರೋಗ್ಯಕ್ಕೆ ಒಳಗಾಗ ಸಂದರ್ಭ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಬಂದಿತ್ತು.  ಅಂಬುಲೆನ್ಸ್  ಮನೆಗೆ ತೆರಳುವ ದಾರಿ ಮಧ್ಯೆ ಮಳೆಯಿಂದ ನೀರಿನ ಒಸರು ಇದ್ದ ಕಾರಣ ಮನೆ ತನಕ ರಸ್ತೆ ಇದ್ದರೂ ಅಂಬುಲೆನ್ಸ್ ಗೆ ಹೋಗುವಷ್ಟು ರಸ್ತೆ ಸರಿ ಇರಲಿಲ್ಲ.ಆದರೆ ಈ ರಸ್ತೆಯಲ್ಲಿ ಜೀಪುಗಳು ಹೋಗುತ್ತದೆ.ಆ ಕಾರಣದಿಂದ ರಾಮಣ್ಣ ಪೂಜಾರಿ ಅವರನ್ನು ಸುಮಾರು 200 ಮೀ ದೂರ ಎತ್ತಿಕೊಂಡು ಹೋಗಿ ಅವರನ್ನು ಆಂಬುಲೆನ್ಸ್ ಗೆ ರವಾನಿಸಿದರು.ಇದರ ಛಾಯಾಚಿತ್ರ ತೆಗೆದು ಯಾವುದೇ ಅಭಿವೃದ್ಧಿಯಾಗಿಲ್ಲ ಎಂಬಂತೆ ಬಿಂಬಿಸುವ ಷಡ್ಯಂತ್ರ ನಡೆದಿದೆ. ಇಲ್ಲಿ ಪರ್ಯಾಯ ರಸ್ತೆ ಇದ್ದರೂ ಖಾಸಗಿ ಜಾಗದ ತಕರಾರು ಅರಣ್ಯ ಇಲಾಖೆ ಅಡ್ಡಿ ಇತ್ಯಾದಿ ಸಮಸ್ಯೆ ಇದ್ದ ಕಾರಣಕ್ಕೆ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ. ಹೀಗಾಗಿ ಸ್ವಲ್ಪ ದೂರ ಅವರನ್ನು ಎತ್ತಿಕೊಂಡು ಹೋಗುವ ಸ್ಥಿತಿ ಎದುರಾಯಿತು ಇದಕ್ಕೆ ಕಾಂಗ್ರೆಸ್ ರಾಜಕೀಯ ಲೇಪನ ನೀಡುತ್ತಿದೆ ಎಂದರು.

ರಸ್ತೆ ಅಭಿವೃದ್ಧಿಯಷ್ಟೆ ಆದರ್ಶ ಗ್ರಾಮದ ಕಲ್ಪನೆಯಲ್ಲ. ಗ್ರಾಮದಲ್ಲಿ ಆಗಿರುವ ಅಭಿವೃದ್ಧಿ ವಿಚಾರಗಳನ್ನು ಮುಚ್ಚಿಟ್ಟು ಕೇವಲ ಸಮಸ್ಯೆಯನ್ನೆ ಹೊರಗಿನ ಪ್ರಪಂಚಕ್ಕೆ ತೋರಿಸುವ ಮುನ್ನ ಗ್ರಾಮದ ಈ ಹಿಂದಿನ ವಾಸ್ತವ ಸಂಗತಿಯನ್ನು ಕೂಡ ಹೊರ ಜಗತ್ತಿಗೆ ತೋರಿಸುವ ಕೆಲಸವಾಗಬೇಕು ಎಂದು ತಾ.ಪಂ.ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಳ್ಪ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಮುಡ್ನೂರು,   ಸುಬ್ರಹ್ಮಣ್ಯ ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಬಳ್ಪ ಗ್ರಾ.ಪಂ.ಸದಸ್ಯ ವಿನೋದ್ ಬೊಳ್ಮಲೆ, ಸುಬ್ರಹ್ಮಣ್ಯ ಬಿಜೆಪಿ ಗ್ರಾಮಸಮಿತಿ ಅಧ್ಯಕ್ಷ ದಿನೇಶ್ ಸಂಪ್ಯಾಡಿ, ಪ್ರಮುಖರಾದ ಚಿದಾನಂದ ಕಂದಡ್ಕ, ರಮಾನಂದ ಎಣ್ಣೆಮಜಲು, ಅಚ್ಚುತ್ತ ಗೌಡ ಕುಕ್ಕಪ್ಪನ ಮನೆ ಉಪಸ್ಥಿತರಿದ್ದರು

 

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |
May 12, 2025
11:31 AM
by: ದ ರೂರಲ್ ಮಿರರ್.ಕಾಂ
ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |
May 12, 2025
7:32 AM
by: ದ ರೂರಲ್ ಮಿರರ್.ಕಾಂ
ಕದನ ವಿರಾಮ ಬಳಿಕ ಪರಿಸ್ಧಿತಿ ಸಾಮಾನ್ಯ ಸ್ಧಿತಿಗೆ | ಶಾಂತಿ ಸ್ಧಾಪನೆಯ ಉದ್ದೇಶಕ್ಕೆ ಪೂರಕ ವಾತಾವರಣ
May 11, 2025
10:11 PM
by: The Rural Mirror ಸುದ್ದಿಜಾಲ
ಮುಳಿಯ ಕೃಷಿಗೋಷ್ಟಿ | ಕೃಷಿಕರೇ ಕೃಷಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಹೇಗೆ..?
May 11, 2025
9:54 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group