ಸುಳ್ಯ: ಆಲೆಟ್ಟಿ-ಕೋಲ್ಚಾರು-ಕಣಕ್ಕೂರು-ಬಂದಡ್ಕ ಅಂತಾರಾಜ್ಯ ರಸ್ತೆಯಲ್ಲಿ 2.60 ಕಿ.ಮಿ.ರಲ್ಲಿ ಬಾರ್ಪಣೆ ಎಂಬಲ್ಲಿ ಕಿರಿದಾದ ಹಳೆಯ ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಳೆದ ಒಂದು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದ್ದು ತಳಪಾಯ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಬಾರ್ಪಣೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ನಬಾರ್ಡ್ ಯೋಜನೆಯಲ್ಲಿ 91 ಲಕ್ಷ ರೂ ಅನುದಾನ ಬಿಡುಗಡೆಗೊಂಡಿದೆ. ಮಾರ್ಚ್ ಕೊನೆಗೆ ಸೇತುವೆ ಕಾಮಗಾರಿ ಮುಗಿಸಿ ಸಂಚಾರಕ್ಕೆ ತೆರೆದುಕೊಳ್ಳುವ ಯೋಜನೆ ರೂಪಿಸಲಾಗಿದೆ.
19 ಮೀಟರ್ ಉದ್ದದ ಸೇತುವೆ: 19.34 ಮೀಟರ್ ಉದ್ದದ 10 ಮೀಟರ್ ಕ್ಯಾರಿಯೇಜ್ ವೇ ಅಗಲದ ಸೇತುವೆ ನಿರ್ಮಾಣಗೊಳ್ಳಲಿದೆ. 8.42 ಮೀಟರ್ ಅಗಲದ ಎರಡು ಅಂಕಣಗಳು, ಎರಡು ಅಬಾಟ್‍ಮೆಂಟ್, ಎರಡು ವೃತ್ತಾಕಾರದ ಪಿಲ್ಲರ್ ಗಳು ಇರುವ ಫೌಂಡನ್ ಒಳಗೊಂಡಂತೆ ಆರ್ ಸಿ ಸಿ ಸೇತುವೆ ನಿರ್ಮಾಣವಾಗಲಿದೆ ಎಂದು ಸುಳ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಣ್ಣೇ ಗೌಡ ತಿಳಿಸಿದ್ದಾರೆ.
ಸಂಚಾರಕ್ಕೆ ಬದಲಿ ರಸ್ತೆ:ಕಾಮಗಾರಿ ನಡೆಯುತ್ತಿರುವ ನಿಟ್ಟಿನಲ್ಲಿ 2020 ಮಾರ್ಚ್ 31ರವರೆಗೆ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ನಡೆಸಲಾಗುತಿದೆ. ಸೇತುವೆಯ ಎರಡೂ ಬದಿಯಲ್ಲಿ ತೆಂಗು, ಅಡಿಕೆ ತೋಟವಿರುವ ಕಾರಣ ಬದಲಿ ರಸ್ತೆ ನಿರ್ಮಿಸಲು ಅವಕಾಶ ಇರುವುದಿಲ್ಲ. ಈ ಹಿನ್ನಲೆಯಲ್ಲಿ ಈ ಭಾಗದ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಸುಳ್ಯ-ಬಂದಡ್ಕ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ರಸ್ತೆಗಳನ್ನು ಸೂಚಿಸಲಾಗಿದೆ. ಬಂದಡ್ಕದಿಂದ ಸುಳ್ಯಕ್ಕೆ ಬರುವ ವಾಹನಗಳು ಕೊಲ್ಲರಮೂಲೆ-ಕರ್ಲಪ್ಪಾಡಿ ದ್ವಾರ-ಕಾಂತಮಂಗಲ ಸೇತುವೆ ಮೂಲಕ ಹಾಗು ಸುಳ್ಯದಿಂದ ಬಂದಡ್ಕಕ್ಕೆ ಹೋಗುವ ವಾಹನಗಳು ಕಾಂತಮಂಗಲ ಸೇತುವೆ-ಕರ್ಲಪ್ಪಾಡಿ ದ್ವಾರ-ಕೊಲ್ಲರಮೂಲೆ ಮೂಲಕ ಸಂಚರಿಸಲಾಗುತಿದೆ. ಸೇತುವೆ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳದ ಮೇಲ್ಭಾಗದಲ್ಲಿ ಜನರಿಗೆ ನಡೆದಾಡಲು ಒಂದು ತಾತ್ಕಾಲಿಕ ಕಾಲು ಸೇತುವೆಯನ್ನೂ ನಿರ್ಮಿಸಲಾಗಿದೆ.
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…
ನಾಡಿನ ಸಮಸ್ತರಿಗೂ ಮಕರ ಸಂಕ್ರಾಂತಿ ಶುಭಾಶಯ. ರೈತರಿಗೂ ಇದು ಸುಗ್ಗಿಯ ಹಬ್ಬ. ಈ…
ಕರಾವಳಿ ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿಯ ತನಕವೂ ಪಶ್ಚಿಮದ ಗಾಳಿಯ ಪ್ರಭಾವ ಇರುವುದರಿಂದ…