ಬಾಳುಗೋಡಿನಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಕಾಡಾನೆ

May 9, 2019
7:30 AM

ಬಾಳುಗೋಡು: ಬಾಳುಗೋಡು ಮೀಸಲು ಅರಣ್ಯದೊಳಗಿನ ಕಾಡಿನಲ್ಲಿ ಕಾಡಾನೆಯೊಂದು ಗಾಯಗೊಂಡ ಸ್ಥಿತಿಯಲ್ಲಿರುವುದು ಬುಧವಾರ ಕಂಡುಬಂದಿಂದಿದೆ. ಬಾಳುಗೋಡು ಗ್ರಾಮದ ಪದಕ ಮಿತ್ತಡ್ಕ ನಿವಾಸಿಗಳಿಬ್ಬರು ಬುಧವಾರ ಕಾಡಿನಿಂದ ಹರಿದು ಬರುವ ಝರಿ ನೀರಿನ ಪೈಪು ಸರಿಪಡಿಸಲೆಂದು ಕಾಡಿನತ್ತ ತೆರಳಿದಾಗ ಗಾಯಗೊಂಡ ಆನೆ ಪತ್ತೆಯಾಗಿತ್ತು.

Advertisement

ಆನೆ ಇರುವುದರ ಬಗ್ಗೆ  ಸುಬ್ರಹ್ಮಣ್ಯ ಅರಣ್ಯ ಇಲಾಖೆ ಸಿಬಂದಿಗಳಿಗೆ ಮಾಹಿತಿಯನ್ನು ಸ್ಥಳೀಯರು  ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಸಿಬಂದಿಗಳು ಬುಧವಾರ ಬೆಳಗ್ಗೆ ಆನೆಯಿರುವ ಕಾಡಿನತ್ತ ತೆರಳಿ ಪರಿಶೀಲಿಸಿದರು.  ಆನೆಯ ಮುಂಭಾಗದ ಕಾಲಿಗೆ ಏಟಾಗಿರುವುದು  ಗಮನಕ್ಕೆ ಬಂದಿದೆ. ನೋವಿನಿಂದ ಬಳಲುತ್ತಿರುವ ಆನೆಯು ನೋವು ತಡೆಯಲಾರದೆ ಘೀಳಿಡುತ್ತಿದೆ. ಹತ್ತಿರಕ್ಕೆ ತೆರಳಿದರೆ ಮರವನ್ನು ಅಲ್ಲಾಡಿಸಿ ಗದರಿಸುತ್ತಿದೆ.  ಸೊಂಡಿಲಿನಿಂದ ಸೊಪ್ಪು ಕಲ್ಲುಗಳನ್ನು ಎಸೆಯುತ್ತಿದೆ.

ಬಾಳುಗೋಡು ಪರಿಸರದ ಪದಕ ಮಿತ್ತಡ್ಕ ಪರಿಸರದಲ್ಲಿ ಕಳೆದ ಹತ್ತು ದಿನಗಳಿಂದ ಆನೆಯೊಂದು ಆಗಾಗ್ಗೆ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅದು ಕೃಷಿಕರ ತೋಟಗಳಿಗೆ ದಾಳಿ ನಡೆಸುತ್ತಿತ್ತು. ಬುಧವಾರ ಗಾಯಗೊಂಡ ಸ್ಥಿತಿಯಲ್ಲಿ ಕಂಡು ಬಂದಿರುವ ಆನೆ ಇದೇ ಆಗಿರಬಹುದೆನ್ನುವ ಶಂಕೆಯನ್ನು ಸ್ಥಳಿಯ ಮಿತ್ತಡ್ಕ ನಿವಾಸಿ ಪ್ರಶಾಂತ ಎನ್ನುವವರು ವ್ಯಕ್ತಪಡಿಸಿದರು.
ಬಾಳುಗೋಡು ಮೀಸಲು ಅರಣ್ಯದೊಳಗೆ ಕಾಡಾನೆ ಗಾಯಗೊಂಡು ಇರುವುದು ನಮ್ಮ ಗಮನಕ್ಕೆ ಬಂದಿದೆ.  ಆನೆಗೆ ಚಿಕಿತ್ಸೆಯ ಅಗತ್ಯತೆ ಇದೆ. ಗುರುವಾರ ಮತ್ತೆ ಕಾಡಿಗೆ ತೆರಳಿ ಆನೆಯ ಚಲನವಲನವನ್ನು ಗಮನಿಸುತ್ತೇವೆ ಎಂದು ಸುಬ್ರಹ್ಮಣ್ಯ ಅರಣ್ಯ ವಿಭಾಗದ ಆರ್ ಎಪ್ ಒ ತ್ಯಾಗರಾಜ್  ತಿಳಿಸಿದ್ದಾರೆ.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 13-07-2025 | ಇಂದು ಸಾಮಾನ್ಯ ಮಳೆ | ಕರಾವಳಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ – ಏಕೆ?
July 13, 2025
2:14 PM
by: ಸಾಯಿಶೇಖರ್ ಕರಿಕಳ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶರಧಿ.ಡಿ.ಎಸ್
July 13, 2025
8:14 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕೃತಿಕಾ
July 13, 2025
8:01 AM
by: ದ ರೂರಲ್ ಮಿರರ್.ಕಾಂ
ರಾಜ್ಯಾದ್ಯಂತ ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮ | ಹೆಬ್ರಿಯ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಚಾಲನೆ
July 13, 2025
7:50 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group