ಸುಳ್ಯ: ರೋಟರಿ ಕ್ಲಬ್ ಸುಳ್ಯ ಹಾಗೂ ರೋಟರಾಕ್ಟ್ ಕ್ಲಬ್ ಸುಳ್ಯ ಜಂಟಿಯಾಗಿ ಬಾಳುಗೋಡು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರಿಯಡ್ಕ ಇಲ್ಲಿಗೆ ಅತೀ ಅಗತ್ಯವಿದ್ದ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಿತು.
ವಿದ್ಯುತ್ ಕಡಿತಗೊಂಡ ಸಂಧರ್ಭದಲ್ಲಿ ಇಲ್ಲಿನ ಶಾಲಾ ವಿಧ್ಯಾರ್ಥಿಗಳು ಬಾವಿಯಿಂದ ನೀರನ್ನು ಸೇದುವ ಕಷ್ಟಕರ ಸನ್ನಿವೇಶಗಳನ್ನು ಮನಗಂಡ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಹಾಗು ಮುಖ್ಯಶಿಕ್ಷಕರು ಶಾಲೆಗೆ ನೀರಿನ ಟ್ಯಾಂಕ್ ಅಗತ್ಯವಿರುವುದಾಗಿ ರೋಟರಾಕ್ಟ್ ಮಾಜಿ ಅಧ್ಯಕ್ಷ ರೋ. ಚೇತನ್ ಕಜೆಗದ್ದೆಯವರ ಗಮನಕ್ಕೆ ತಂದಿದ್ದರು. ಈ ನಿಟ್ಟಿನಲ್ಲಿ ರೋಟರಾಕ್ಟ್ ಅಧ್ಯಕ್ಷ ರೋ.ಮೋಹಿತ್ ಹರ್ಲಡ್ಕ, ಕಾರ್ಯದರ್ಶಿ ರೋ.ಪ್ರಣೀತ್ ಕಣಕ್ಕೂರು, ರೋಟರಾಕ್ಟ್ ಮಾಜಿ ಅದ್ಯಕ್ಷ ಭವಾನಿಶಂಕರ ಕಲ್ಮಡ್ಕ, ರೋಟರಾಕ್ಟ್ ಮಾಜಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಕೆದಿಲಾಯ , ರೋ.ಮಧುಸೂದನ್ ಬೂಡು, ರೋಟರಾಕ್ಟ್ ಸಭಾಪತಿ ರೋ.ಪ್ರಭಾಕರ್ ನಾಯರ್, ಮಾತ್ರೃ ಸಂಸ್ಥೆ ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷ ರೋ.ಪಿ.ಎಚ್.ಎಫ್.ಡಾ.ಪುರುಷೋತ್ತಮ ಕೆ.ಜಿ. , ಇನ್ನರ್ ವ್ಹೀಲ್ ಕ್ಲಬ್ ಸುಳ್ಯ ಇದರ ಅಧ್ಯಕ್ಷೆ ಡಾ.ಹರ್ಷಿತಾ ಪುರುಷೋತ್ತಮ್ ಇವರುಗಳೊಂದಿಗೆ ಇಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರಿಯಡ್ಕ ಇಲ್ಲಿಗೆ ಭೇಟಿ ನೀಡಿ ನೀರಿನ ಟ್ಯಾಂಕ್ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳ ಪೋಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷ ಓಬಯ್ಯ ಕಜೆಗದ್ದೆ, ಶಾಲಾ ಮುಖ್ಯ ಶಿಕ್ಷಕ ಸುಧೀರ್.ಕೆ, ವಿಧ್ಯಾರ್ಥಿಗಳು ಹಾಗು ಶಾಲಾಭಿಮಾನಿಗಳು ಭಾಗವಹಿಸಿದ್ದರು.
ರೋಟರಿ ಕ್ಲಬ್ ಸುಳ್ಯ ಹಾಗು ರೋಟರಾಕ್ಟ್ ಕ್ಲಬ್ ಸುಳ್ಯ ಜಂಟಿಯಾಗಿ ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಲು ರೋಟರಿ ಕ್ಲಬ್ ಸುಳ್ಯ ಇದರ ಮಾಜಿ ಅಧ್ಯಕ್ಷರು ರೋ.ಪಿ.ಪಿ.ಪಿ.ಎಚ್.ಎಫ್.ರಾಮಚಂದ್ರ.ಪಿ ಮಾಲಕರು ಭಾರತ್ ಆಗ್ರೋ ಹೌಸ್ ಸುಳ್ಯ ಇವರು ಉತ್ತಮ ದರ್ಜೆಯ 1000ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಕಂಪೆನಿಯ ಟ್ಯಾಂಕ್ ಅನ್ನು ಉಚಿತವಾಗಿ ನೀಡಿರುತ್ತಾರೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…