ಸುಳ್ಯ: ಸುಳ್ಯ ತಾಲೂಕಿನಲ್ಲಿ ಬಿ ಎಸ್ ಎನ್ ಎಲ್ ನಲ್ಲಿ 17 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಉಪವಿಭಾಗೀಯ ಅಧಿಕಾರಿಯಾಗಿದ್ದ ರಾಮಕೃಷ್ಣ ಭಟ್ ಪಿ. ಸೇವಾ ನಿವೃತ್ತಿಯಾಗುತ್ತಿದ್ದಾರೆ.
ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಪೈರುಪುಣಿಯ ನಾರಾಯಣ ಭಟ್ಟ ಮತ್ತು ತಾಯಿ ಸರಸ್ವತಿಯವರ ಹಿರಿಯ ಪುತ್ರನಾದ ರಾಮಕೃಷ್ಣ ಭಟ್ ಅವರು ಪುತ್ತೂರು ಫಿಲೋಮಿನ ಕಾಲೇಜಿನಲ್ಲಿ ಬಿಯಸ್ಸಿ ಪದವೀಧರರಾದ ಬಳಿಕ 1983 ರಲ್ಲಿ ಅಂದಿನ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಟೆಲಿಫೋನ್ ಆಪರೇಟರ್ ಆಗಿ ಕಾರವಾರ ವಿಭಾಗಲ್ಲಿ ನಿಯುಕ್ತರಾದರು. ನಂತರ ಉಡುಪಿಯಲ್ಲಿ 6 ವರ್ಷ, ಕೊಡಗಿನಲ್ಲಿ 5 ವರ್ಷ, ಉಪ್ಪಿನಂಗಡಿಯಲ್ಲಿ 8 ವರ್ಷ ಮತ್ತು ಸುಳ್ಯ ತಾಲೂಕಿನಲ್ಲಿ 17 ವರ್ಷ ಬೇರೆ ಬೇರೆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಉಪವಿಭಾಗೀಯ ಅಧಿಕಾರಿಯಾಗಿ ನಿವೃತ್ತಿಯಾಗುತ್ತಿದ್ದಾರೆ. ಒಟ್ಟು ಸುಮಾರು 36 ವರ್ಷಗಳ ಕಾಲ ಟೆಲಿಕಾಂ ಸೇವೆಯಲ್ಲಿದ್ದರು. ಈ ನಡುವೆ ಕಳೆದ 10 ವರ್ಷಗಳಿಂದ ತಮ್ಮ ಬಿಡುವಿನ ಸಮಯದಲ್ಲಿ ಆರ್ಟ್ ಆಫ್ ಲಿವಿಂಗ್ ಶಿಕ್ಷಕರಾಗಿಗೂ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದಾರೆ.