ಬಿಗ್ ಟಿಕೆಟ್ ಬಹುಮಾನ ಫಯಾಝ್ ಗೆ ಹಸ್ತಾಂತರ : 23 ಕೋಟಿ ರೂಪಾಯಿ ಬಹುಮಾನ ಸ್ವೀಕರಿಸಿದ ಸುಳ್ಯದ ಯುವಕ

November 4, 2019
7:06 AM

ಸುಳ್ಯ: ಬಿಗ್ ಟಿಕೆಟ್‌ನ ಡ್ರೀಂ ಸೀರೀಸ್‌ನ 208 ನೇ ಡ್ರಾದ ವಿಜೇತರಾದ ಸುಳ್ಯ ಜಟ್ಟಿಪಳ್ಳದ ಜೆ.ಎ.ಮಹಮ್ಮದ್ ಫಯಾಜ್ ಅವರಿಗೆ ಬಹುಮಾನ ಮೊತ್ತದ ಚೆಕ್ಕನ್ನು ನ.3 ರಂದು ಹಸ್ತಾಂತರಿಸಲಾಯಿತು.

23 ಕೋಟಿಯ ಮೌಲ್ಯದ ಅಬುಧಾಬಿ ಬಿಗ್ ಟಿಕೆಟ್ ಲಾಟರಿಯ ಅಕ್ಟೋಬರ್ ತಿಂಗಳ ಅದೃಷ್ಟ ಸುಳ್ಯದ ಯುವಕನಿಗೆ ಒಲಿದು ಬಂದಿತ್ತು. ನವೆಂಬರ್ 3 ರಂದು ನಡೆದ ಡ್ರಾ ದಿನದಂದು ಅಕ್ಟೋಬರ್ ತಿಂಗಳ ವಿಜೇತರಿಗೆ ಬಹುಮಾನ ಮೊತ್ತ 12 ಮಿಲಿಯನ್ ಚೆಕ್ ಹಸ್ತಾಂತರಿಸಲಾಯಿತು.

ಬಿಗ್ ಟಿಕೆಟ್‌ನ ಡ್ರೀಂ ಸೀರೀಸ್‌ನ 208 ನೇ ಡ್ರಾದ 12 ಮಿಲಿಯನ್ ದಿರ್‌ಹಾಂ (ಅಂದಾಜು23.17 ಕೋಟಿ) ಪ್ರಥಮ ಬಹುಮಾನ ಸುಳ್ಯ ಜಟ್ಟಿಪಳ್ಳದ ಜೆ.ಎ.ಮಹಮ್ಮದ್ ಫಯಾಜ್ ಅವರಿಗೆ ಒಲಿದು ಬಂದಿತ್ತು. ಮುಂಬೈನಲ್ಲಿ ಉದ್ಯೋಗದಲ್ಲಿರುವ ಫಯಾಜ್ ಕಳೆದ ಆರು ತಿಂಗಳಿನಿಂದ ದೊಡ್ಡ ಮೊತ್ತದ ಬಿಗ್ ಟಿಕೆಟ್ ಗಳನ್ನು ಖರೀದಿಸುತ್ತಿದ್ದು ಪ್ರಥಮ ಬಹುಮಾನದ ರೂಪದಲ್ಲಿ ಅದೃಷ್ಠ ಒಲಿದು ಬಂದಿತ್ತು. ಫಯಾಜ್ ಮತ್ತು ಗೆಳೆಯರು ಖರೀದಿಸಿದ ಟಿಕೆಟ್‌ಗೆ ಅದೃಷ್ಠ ಒಲಿದು ಬಂದಿತ್ತು. ಇದುವರೆಗೆ ದುಬೈ ನೋಡಿರದ ಫಯಾಜ್ ನನ್ನು ಅರಸಿ ವಿದೇಶದ ಅದೃಷ್ಟ ಒಲಿದು ಬಂದಿತ್ತು. ಇದೀಗ ದುಬೈಗೆ ಭೇಟಿ ನೀಡಿದ ಫಯಾಜ್ ಬಹುಮಾನ ಸ್ವೀಕರಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ..
March 7, 2026
7:29 AM
by: ಮಿರರ್‌ ಡೆಸ್ಕ್
ಕುಕ್ಕೆ–ಕೊಲ್ಲೂರು ದೇವಾಲಯಗಳಿಗೆ ಅಭಿವೃದ್ಧಿ ಪ್ರಾಧಿಕಾರ : ಮುಜರಾಯಿ ಇಲಾಖೆಗೆ ಬಜೆಟ್ ಬಲ
March 7, 2026
7:23 AM
by: ಮಿರರ್‌ ಡೆಸ್ಕ್
ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು
March 6, 2026
8:22 PM
by: ದ ರೂರಲ್ ಮಿರರ್.ಕಾಂ
ರಾಜ್ಯ ಬಜೆಟ್‌ 2026-27: ಕೃಷಿ, ತೋಟಗಾರಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ಹೊಸ ಯೋಜನೆಗಳ ಘೋಷಣೆ
March 6, 2026
8:08 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror