ಸುಳ್ಯ:ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ತಪ್ಪಿರುವ ಕಾರಣ ಶಾಸಕ ಅಂಗಾರ ಮತ್ತು ಸುಳ್ಯ ಬಿಜೆಪಿ ಅಸಮಾಧಾನಗೊಂಡಿರುವ ಹಿನ್ನಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಇಂದು ಶಾಸಕ ಎಸ್.ಅಂಗಾರರನ್ನು ಅವರ ದೊಡ್ಡತೋಟ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ ಮತ್ತು ಗಣೇಶ್ ಕಾರ್ಣಿಕ್ ಭೇಟಿ ಮಾಡಿ ಚರ್ಚಿಸಿದರು.
ಆ ಬಳಿಕ ಮಂಡಲ ಸಮಿತಿ ಪ್ರಮುಖರೊಡನೆ ಸುಳ್ಯದಲ್ಲಿ ಚರ್ಚೆ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆಯ ಮೇರೆಗೆ ಜಿಲ್ಲಾಧ್ಯಕ್ಷರು ಶಾಸಕ ಅಂಗಾರ ಮತ್ತು ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿದ್ದಾರೆ.
ಬಂಗಾಳಕೊಲ್ಲಿಯ ಕಡೆಯಿಂದ ಹಿಂಗಾರು ರೀತಿಯ ಮಾರುತಗಳು ಬರುತ್ತಿರುವುದರಿಂದ ಈಗಿನ ಈ ಮೋಡ ಹಾಗೂ…
ಸುಮಾರು 32 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದ ನೆರವಿನಿಂದಾಗಿ ಕುಟುಂಬಕ್ಕೆ…
ನಂದಿನಿ ಹಾಲಿನ ದರ 2 ರೂಪಾಯಿ ಇಳಿಕೆಗೆ ನಿರ್ಧಾರ.
ನೇಪಾಳವು ಅಡಿಕೆ ಬೆಳೆ ಹಾಗೂ ಅಡಿಕೆ ರಫ್ತಿನ ಕಡೆಗೆ ರೈತರಿಗೆ ಪ್ರೋತ್ಸಾಹ ನೀಡಲು…
ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿ ಸಮಗ್ರ ಯೋಜನಾ ವರದಿ…
ಕಸ್ಟಮ್ಸ್ ಗೋದಾಮಿನಿಂದ ಸುಮಾರು 40 ಟನ್ ಕಾಳುಮೆಣಸು ಹಾಗೂ ಸುಮಾರು 5 ಕೋಟಿ…