ಬೆಂಗಳೂರು/ಸುಳ್ಯ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇಮಕ ಮಾಡಿದ್ದಾರೆ. ಕಳೆದ ತಿಂಗಳಿನಿಂದಲೇ ಈ ಸುದ್ದಿ ಹರಿದಾಡುತ್ತಿತ್ತು. ಇದೀಗ ಅಧಿಕೃತವಾದ ಆದೇಶ ಹೊರಬಂದಿದೆ. ಸಂಘಟನಾ ಚಾತುರ್ಯತೆ ಹೊಂದಿರುವ ನಳಿನ್ ಕುಮಾರ್ ಕಟೀಲು ಅವರು ಕೇರಳದಲ್ಲಿ ಬಿಜೆಪಿ ಸಂಘಟನೆ ನಡೆಸಿದ್ದು ರಾಷ್ಟ್ರೀಯ ನಾಯಕರುಗಳಿಗೆ ಗಮನಸೆಳೆದಿತ್ತು.
ಇಂದು ಕೂಡಾ ನಳಿನ್ ಕುಮಾರ್ ಕಟೀಲು ಅವರು ಕೇರಳದ ಎರ್ನಾಕುಲಂ ನಲ್ಲಿ ನಡೆದ ಕೇರಳ ಬಿಜೆಪಿ ರಾಜ್ಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು. ಕೇರಳ ರಾಜ್ಯ ಬಿಜೆಪಿ ಸಹಪ್ರಭಾರಿಯೂ ಆಗಿರುವ ನಳಿನ್ ಕುಮಾರ್ ಕಟೀಲ್ ಕೇರಳದಲ್ಲಿ ಬಿಜೆಪಿ ಸಂಘಟನೆಯನ್ನು ಕಳೆದ ಬಾರಿ ವಿಧಾನಸಭಾ ಚುನಾವಣೆಯ ಸಂದರ್ಭ ಹಾಗೂ ಶಬರಿಮಲೆ ವಿವಾದ ಸಂದರ್ಭದಲ್ಲೂ ನಳಿನ್ ಸಾರಥ್ಯದಲ್ಲಿ ಪ್ರತಿಭಟನೆ ನಡೆದಿತ್ತು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel