Advertisement
ಅನುಕ್ರಮ

ಬಿದಿರಿನ ದೋಟಿ ಬಲು ಗಟ್ಟಿ……

Share

ಬಿದಿರು ಹುಲ್ಲಿನ ಗುಂಪಿಗೆ ಸೇರಿದ ಸಸ್ಯ. ವಂಶ, ವೇಣು, ಯುವಫಲ ಎಂದು ಸಂಸ್ಕೃತ ಭಾಷೆಯಲ್ಲಿ ಕರೆಸಿಕೊಳ್ಳುವ ಬಿದಿರು ರೈತ ಮಿತ್ರಕೂಡಾ ಹೌದು. ಜಗತ್ತಿನಲ್ಲಿ 550 ಕ್ಕೂ ಹೆಚ್ಚು ಪ್ರಭೇದಗಳಿವೆ. ನಮ್ಮ ದೇಶದಲ್ಲಿ ದೊರೆಯುವುದು ಕೇವಲ 130 ಜಾತಿಯ ಬಿದಿರುಗಳು ಅದರಲ್ಲೂ ಹೆಚ್ಚಾಗಿ ಸುಮಾರು 40 ವೆರೈಟಿಯ ಬಿದಿರುಗಳು ಕಾಣಸಿಗುತ್ತವೆ.

ದಶಕದ ಹಿಂದೆ ಕೃಷಿಕಾರ್ಯಗಳಿಗೆ ಸಲಕರಣೆಗಳಿಗಾಗಿ ರೈತರು ಅವಲಂಬಿಸುತ್ತಿದ್ದದ್ದು ಕಡಿಮೆ ವೆಚ್ಚದಲ್ಲಿ ಸುಲಭವಾಗಿ ದೊರೆಯುತ್ತಿದ್ದ ಬಿದಿರುಗಳನ್ನು ಅದರಲ್ಲೂ ಮುಖ್ಯವಾಗಿ ಅಡಿಕೆ, ತೆಂಗು, ಕೊಕ್ಕೋ, ಗೇರು ಮರಗಳಲ್ಲಿ ಬೆಳೆದ ಫಲಗಳನ್ನು ಕೀಳಲು ಅನಿವಾರ್ಯವಾದ ದೋಟಿ ತಯಾರಿಸಲು ಕೃಷಿಕರು ಮಾರು ಹೋಗುತ್ತಿದ್ದದ್ದು ಲೆಂಕಿರಿ ಎನ್ನುವ ಬಿದಿರಿಗೆ. ಆದರೆ ಇತ್ತೀಚಿನ ದಿನಗಳಲ್ಲಿ ಹಣಕೊಟ್ಟರೆ ಸುಲಭವಾಗಿ ದೊರೆಯುವ ಅಲ್ಯುಮೀನಿಯಂ ಪೋಲ್ ಬಂದ ನಂತರ ಬಿದಿರಿನ ದೋಟಿಗಳ(ದೋಟಿಗೆಕೊಕ್ಕೆ ಎಂದೂ ಹೆಸರಿದೆ) ಬಳಕೆ ಕಡಿಮೆಯಾಗುತ್ತಿದೆ. ಅದಲ್ಲದೆ ಬಿದಿರು ಒತ್ತೊತ್ತಾಗಿ ಬೆಳೆಯವ ಸಸ್ಯ. ದೋಟಿ ಮಾಡಲು ಅನುಕೂಲವಾದದ್ದನ್ನು ತುಂಡರಿಸಲು ಅದರ ಸುತ್ತಮುತ್ತಲಿರುವ ಅಡೆತಡೆಗಳನ್ನು ನಿವಾರಿಸಿ ತೆಗೆಯಬೇಕು. ಬಿದಿರನ್ನು ತುಂಡರಿಸಿ ತಂದು ಒಣಗಿಸಿ ದೋಟಿ ಮಾಡಲು ಸಮಯ ಜೊತೆಗೆ ತಾಳ್ಮೆಯೂ ಬೇಕು.

ಲೆಂಕಿರಿ ಬಿದಿರಿನ ವಿಶೇಷತೆ:  ಉದ್ದವಾಗಿ ಸಪೂರವಾಗಿ ಬೆಳೆಯುವ ಲೆಂಕಿರಿ ಬಿದಿರು ದೋಟಿ ತಯಾರಿಸಲು ತಕ್ಕದಾದದ್ದು. ಒಳಗಡೆ ಟೊಳ್ಳಾಗಿ ಇರುವುದರಿಂದ ಹಗುರವಾಗಿ ಆದರೆ ಅಷ್ಟೇ ಗಟ್ಟಿಯಾಗಿರುವುದು ಇದರ ಇನ್ನೊಂದು ವಿಶೇಷತೆ. ಫಲಗಳನ್ನು ಕೀಳಲು ಹಗುರವಾದ ದೋಟಿ ಬೇಕಾಗಿರುವುದರಿಂದ ಕೃಷಿಕರು ಹೆಚ್ಚಾಗಿ ಬಳಸುವುದು ಲೆಂಕಿರಿ ಬಿದಿರನ್ನು.ಈ ಜಾತಿಯ ಬಿದಿರುಗಳಲ್ಲಿ ಮುಳ್ಳುಗಳು ಇರುವುದಿಲ್ಲ. ಅಂಕುಡೊಂಕಾಗಿ ಇದ್ದರೂ ಹಸಿಯಾಗಿ ಇರುವಾಗ ನೆಲದ ಮೇಲೆ ಇಟ್ಟು ಭಾರವಾದ ಕಲ್ಲುಗಳನ್ನು ಇದರ ಮೇಲೆ ಇರಿಸುವುದರಿಂದ ಅಥವಾ ಮರಕ್ಕೆ ನೇರವಾಗಿ ಇಳಿಬಿಟ್ಟು ಕೆಳಗಡೆ ಭಾರವಾದಕಲ್ಲುಕಟ್ಟಿ ನೇರವಾಗುವಂತೆ ಮಾಡಬಹುದು.ಬಿದಿರುಒಣಗುವ ಮೊದಲೇಇದರ ಗೆಣ್ಣುಗಳನ್ನು ಸರಿಯಾಗಿ ತುಂಡರಿಸಬೇಕು. ನಂತರ ತೆಳ್ಳಗೆ ಇರುವ ತುದಿಗೆ ಕತ್ತಿಕಟ್ಟಿದರೆ ಮರಗಳಲ್ಲಿ ಬೆಳೆದ ಕಾಯಿಗಳನ್ನು ಕೀಳಲು ದೋಟಿ ತಯಾರಾಗುತ್ತದೆ. ನೀರು ತಾಕದ ಹಾಗೆ ಜತನದಿಂದ ಉಪಯೋಗಿಸಿದರೆ ಎರಡು – ಮೂರು ವರ್ಷಕ್ಕೆ ನಿರಾತಂಕವಾಗಿ ಬಳಸಬಹುದಾದ ಲೆಂಕಿರಿ ಬಿದಿರಿನ ದೋಟಿ ಬಲು ಗಟ್ಟಿ. ಇಲ್ಲವಾದರೆಒಂದೇ ವರ್ಷಕ್ಕೆ ಗೆದ್ದಲುಗಳಿಗೆ ಆಹಾರವಾದೀತು.

# ವಂದನಾರವಿ ಕೆ.ವೈ.ವೇಣೂರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

18 hours ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

19 hours ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

19 hours ago

ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್

ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…

19 hours ago

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

2 days ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

2 days ago