ಬೆಳಂದೂರು: ಉಚಿತ ನೇತ್ರ ತಪಾಸಣಾ ಶಿಬಿರ

October 31, 2019
12:57 PM

ಬೆಳಂದೂರು: ಕಣ್ಣು ಮಾನವನ ಶರೀರದ ಪ್ರಮುಖ ಅಂಗ, ಕಣ್ಣಿಗೆ ತೊಂದರೆಯಾದರೆ ಜೀವನದ ಬೆಳಕನ್ನು ಕಳೆದು ಕೊಂಡಂತೆ ಆದುದರಿಂದ ಕಣ್ಣಿನ ಆರೋಗ್ಯದ ಕಡೆ ಗಮನ ಹರಿಸುವುದು ಅತಿ ಅಗತ್ಯ. ಇದಕ್ಕೆ ಇಂಥ ಶಿಬಿರಗಳು ಪೂರಕ ವಾತಾವರಣ ಒದಗಿಸುತ್ತದೆ. ಇಂಥ ಕಾರ್ಯಗಳನ್ನು ನಡೆಸುತ್ತಿರುವ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಬೆಳಂದೂರು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರದ ಪ್ರಮೀಳಾ ಜನಾರ್ದನ ಹೇಳಿದರು.

Advertisement

ಅವರು ಬೆಳಂದೂರು ಶಾಲೆಯಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಸಂಭವ್ ಫೌಂಡೇಶನ್ ಐ ಮಿತ್ರ ಸುರತ್ಕಲ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ), ಡಾ. ಪಿ ದಯಾನಂದ ಪೈ ಮತ್ತು ಟಿ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ಗೆಳೆಯರ ಬಳಗ ಕೊಡಿಮಾರು ಅಬೀರ, ಸದಾಶಿವ ಯುವಕ ಮಂಡಲ ಅಗಳಿ, ಸುಗ್ರಾಮ ಸಂಘ ಪುತ್ತೂರು ಮತ್ತು ಅಧ್ಯಕ್ಷರು, ಸರ್ವ ಸದಸ್ಯರು ಸಿಬ್ಬಂದಿ ವರ್ಗ ಬೆಳಂದೂರು ಗ್ರಾಮ ಪಂಚಾಯತ್ ಇವರ ಸಹಕಾರದೊಂದಿಗೆ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯರಾದ  ಉಮೇಶ್ವರಿ ಅಗಳಿರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಲಿತಾ ಈಶ್ವರ ಮಾನ್ಯ ತಾಲೂಕು ಪಂಚಾಯತ್ ಉಪಾಧ್ಯಕ್ಷರು, ಸವಣೂರು ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯರಾದ ರಾಜೇಶ್ವರಿ, ಪುರಂದರ ಅಗಳಿ ಅಧ್ಯಕ್ಷರು ಸದಾಶಿವ ಯುವಕ ಮಂಡಲ ಅಗಳಿ, ಪ್ರಮೋದ್ ನೀರಜರಿ ಅಧ್ಯಕ್ಷರು ಗೆಳೆಯರ ಬಳಗ ಕೊಡಿಮಾರು ಅಬೀರ, ಜಿನ್ನಪ್ಪ ಗೌಡ ಅಧ್ಯಕ್ಷರು ಎಸ್. ಡಿ.ಎಂ.ಸಿ ಬೆಳಂದೂರು ಶಾಲೆ, ಹರೀಶ್ ಕೆರೆನಾರು ಉಪಾಧ್ಯಕ್ಷರು ಬೆಳಂದೂರು ಗ್ರಾಮ ಪಂಚಾಯತ್, ವೇಣುಗೋಪಾಲ್ ಕಳುವಾಜೆ ಅಧ್ಯಕ್ಷರು ಗ್ರಾಮಾಭಿವೃದ್ಧಿ ಯೋಜನೆ ಬೆಳಂದೂರು ಬಿ ಒಕ್ಕೂಟ ಇವರುಗಳು ಭಾಗವಹಿಸಿದ್ದರು.

ಐ ಮಿತ್ರ ಇದರ ಮೆನೇಜರ್ ಆಗಿರುವ ಹೇಮಚಂದ್ರರವರು ಶಿಬಿರದ ಮತ್ತು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಬೆಳಂದೂರು ಗ್ರಾಮ ಪಂಚಾಯತ್ ಸಿಬ್ಬಂದಿ ಪ್ರಶಾಂತಿ ಪ್ರಾರ್ಥಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಜಯಂತ ಅಬೀರ ಸ್ವಾಗತಿಸಿ ಗೆಳೆಯರ ಬಳಗ ಕೊಡಿಮಾರು ಅಬೀರ ಇದರ ಗೌರವ ಸಲಹೆಗಾರರಾಗಿರುವ ಶೇಷಪ್ಪ ಅಬೀರ ವಂದಿಸಿದರು. ಸದಾಶಿವ ಯುವಕ ಮಂಡಲ ಅಗಳಿ ಇದರ ಉದಯ ಕುಮಾರ್ ಅಗಳಿ ಕಾರ್ಯಕ್ರಮ ನಿರೂಪಿಸಿದರು. ನಂತರ ನಡೆದ ಶಿಬಿರದಲ್ಲಿ ಹಲವಾರು ಜನರ ಕಣ್ಣಿನ ತಪಾಸಣೆ ನಡೆಸಿ ಅಗತ್ಯವುಳ್ಳವರಿಗೆ ಕನ್ನಡಕಗಳನ್ನು ವಿತರಣೆ ಮಾಡಲಾಯಿತು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಾಮಾಜಿಕ ಕಾರ್ಯಕರ್ತ ಧನಂಜಯ ವಾಗ್ಲೆ ಇನ್ನಿಲ್ಲ | ಅವರು ಬರೆದಿರುವ ಓದಲೇಬೇಕಾದ ಬರಹ ಇಲ್ಲಿದೆ…
July 13, 2025
5:09 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 13-07-2025 | ಇಂದು ಸಾಮಾನ್ಯ ಮಳೆ | ಕರಾವಳಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ – ಏಕೆ?
July 13, 2025
2:14 PM
by: ಸಾಯಿಶೇಖರ್ ಕರಿಕಳ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶರಧಿ.ಡಿ.ಎಸ್
July 13, 2025
8:14 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕೃತಿಕಾ
July 13, 2025
8:01 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group