ಕಾಣಿಯೂರು: ಕಡಬ ತಾಲೂಕು ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳಂದೂರು ಶಾಲೆಯ ಪ್ರಾರಂಭೋತ್ಸವವನ್ನು ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯೆ ಗೌರಿ ಸಂಜೀವ ಉದ್ಘಾಟಿಸಿದರು.
ಪಠ್ಯ ಪುಸ್ತಕ ವಿತರಣೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಿನ್ನಪ್ಪ ಗೌಡ ನೆರವೇರಿಸಿದರು. ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯರಾದ ನಝೀರ್ ದೇವಸ್ಯ ಶುಭ ಹಾರೈಸಿದರು. ಶಿಕ್ಷಣ ಇಲಾಖೆಯಿಂದ ಆಗಮಿಸಿದ ಬಿ.ಐ.ಇ.ಆರ್.ಟಿ. ತಾರಾನಾಥ ಸವಣೂರು. ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯಗುರು ಜಾನಕಿ.ಕೆ.ಆರ್ ಸ್ವಾಗತಿಸಿದರು. ಸಹಶಿಕ್ಷಕಿ ವಸಂತಿ.ಕೆ ವಂದಿಸಿದರು. ಸಹಶಿಕ್ಷಕ ಛತ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel