ಬೆಳೆವಿಮೆ, ಸಾಲಮನ್ನಾ ಯೋಜನೆ ಜಾರಿಯಲ್ಲಿ ಅವ್ಯವಹಾರದ ಸಂಶಯ

September 26, 2019
5:11 PM

ಸುಬ್ರಹ್ಮಣ್ಯ : ಸರಕಾರದ ಸಾಲಮನ್ನಾ ವಂಚಿತರ ಪರ ಹೋರಾಟ ನಡೆಸಲು ಮಲೆನಾಡು ಜನಹಿತ ರಕ್ಷಣಾ ನೇತೃತ್ವದಲ್ಲಿ ರೈತರು, ಜನಪ್ರತಿನಿಧಿಗಳು ಹಾಗೂ ಸಹಕಾರಿ ಸಂಸ್ಥೆಗಳ ಪ್ರಮುಖರನ್ನೊಳಗೊಂಡ ರೂಪುರೇಷೆ ಸಭೆ ಗುರುವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಪಂಚಾಯತ್ ಸಭಾಭವನದಲ್ಲಿ ಜರಗಿತು. ಸಭೆಯಲ್ಲಿ ಕೃಷಿಕರಿಗೆ ಫಸಲ್ ಭೀಮಾ ಯೋಜನೆ (ಬೆಳೆವಿಮೆ) ಮತ್ತು ಸಾಲಮನ್ನಾ ನೀಡುವ ಯೋಜನೆಯಲ್ಲಾಗಿರುವ ತೊಡಕುಗಳಲ್ಲಿ ಭ್ರಷ್ಚಾಚಾರ ಸಂಶಯದ ಬಗ್ಗೆ ಕೃಷಿಕರು, ಮುಖಂಡರಿಂದ ಅಭಿಪ್ರಾಯ ವ್ಯಕ್ತಗೊಂಡಿತು.

Advertisement
Advertisement
Advertisement

ಅ.3ರಂದು ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಸಾಲಮನ್ನಾ ಬಗ್ಗೆ ನಡೆಯಲಿರುವ ಸಹಕಾರಿ ಸಂಸ್ಥೆಗಳು ಮತ್ತು ಅಧಿಕಾರಿಗಳ ವಿಶೇಷ ಸಭೆಯ ಜರಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳಲ್ಲಿ ಸಾಲಮನ್ನಾ ಪಾವತಿ ವ್ಯವಸ್ಥೆ ನಡೆಯದಿದ್ದಲ್ಲಿ ಅಕ್ಟೋಬರ್ ತಿಂಗಳಾಂತ್ಯದಲ್ಲಿ ಮಂಗಳೂರಿನ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ಸಭೆ ತೀರ್ಮಾನಿಸಿದೆ.

Advertisement

ಇದರೊಂದಿಗೆ ಸಾಲಮನ್ನಾ ಯೋಜನೆ ಪ್ರತೀ ರೈತರಿಗೆ ತಲುಪುವಂತಾಗಲು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ಜಿಲ್ಲಾ ಸಹಕಾರಿ ಬ್ಯಾಂಕ್ ಅಧಿಕಾರಿಗಳ ಭೇಟಿ ನೀಡಿ ಚರ್ಚಿಸಲು ನಿರ್ಧರಿಸಲಾಯಿತು. ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಅರ್ಹ ಫಲಾನುಭವಿಗಳ ಮಾಹಿತಿಯನ್ನು ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳಿಗೆ ನೀಡಿ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸುವ ಮೂಲಕ ಪಾರದರ್ಶಕತೆಯನ್ನ ಕಾಪಾಡಬೇಕು ಎಂದು ಸಭೆ ಒಕ್ಕೊರಲಿನಿಂದ ಆಗ್ರಹಿಸಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೊನೆಯ ಹಂತದಲ್ಲಿ ನೀಡಿದ 50 ಸಾವಿರ ಸಾಲಮನ್ನಾದ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಸಾಲ ದೊರೆಯದಿದ್ದರಿಂದ ಸಮ್ಮಿಶ್ರ ಸರಕಾರದ ಸಾಲಮನ್ನಾ ಯೋಜನೆ ಮೊತ್ತ ಪೂರ್ತಿ ಪಡೆಯಲು ವಿಫಲರಾಗಿರುವ ಬಗ್ಗೆ ಸಭೆ ಚರ್ಚೆ ನಡೆಸಿತು.

ವೇದಿಕೆ ಸಂಚಾಲಕರಾದ ಕಿಶೋರ್ ಶಿರಾಡಿ, ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ದಾಮೋದರ ಡಿ.ಎಂ., ಐನೆಕಿದು- ಸುಬ್ರಹ್ಮಣ್ಯ ಕೃಷಿ ಪತ್ತಿನ ಸಂಘದ ಅಧ್ಯಕ್ಷ ರವೀಂದ್ರಕುಮಾರ್ ರುದ್ರಪಾದ, ಮುರುಳ್ಯ ಸಹಕಾರಿ ಸಂಘದ ಅಧ್ಯಕ್ಷ ವಸಂತ ಎಚ್. ಮುರುಳ್ಯ, ಹಿರಿಯ ಸಹಕಾರಿ ಧುರೀಣರಾದ ಪ್ರಸನ್ನ ಕೆ. ಎಣ್ಮೂರು, ಅಚ್ಯುತ ಗೌಡ ಏನೆಕಲ್ಲು, ವಿಜಯ್ ಶೀರಾಡಿ, ಕುಟ್ರುಪ್ಪಾಡಿ, ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕೊರಗಪ್ಪ ಗೌಡ ಬಲ್ಯ. ಭವಾನಿ ಶಂಕರ್ ಪೈಲಾಜೆ ಮತ್ತಿತರರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಾನಿಯಾದ ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ
November 25, 2024
7:50 PM
by: The Rural Mirror ಸುದ್ದಿಜಾಲ
ಐದು ತಿಂಗಳಲ್ಲಿ 100 ಕೋಟಿ ಗಿಡ ನೆಡುವ ಮೂಲಕ ಅಭಿಯಾನ ಯಶಸ್ವಿ | ಪ್ರಧಾನಿ ಮೋದಿ ಶ್ಲಾಘನೆ
November 25, 2024
7:46 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 25-11-2024 | ಒಣ ಹವೆ ಮುಂದುವರಿಕೆ | ನವೆಂಬರ್ ಕೊನೆಯ ತನಕವೂ ಮಳೆಯ ಸಾಧ್ಯತೆ ಇಲ್ಲ |
November 25, 2024
2:57 PM
by: ಸಾಯಿಶೇಖರ್ ಕರಿಕಳ
ಗದಗದ ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಚಾಲನೆ
November 25, 2024
7:33 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror