ಸುಳ್ಯ: ಬೆಳೆ ವಿಮೆ ಪರಿಹಾರಕ್ಕೆ ಸಂಬಂಧಿಸಿ ಮುರುಳ್ಯದ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 27 ಮಂದಿ ಸದಸ್ಯರು ಹಿರಿಯ ಸಹಕಾರಿ ಪ್ರಸನ್ನ ಎಣ್ಮೂರು ನೇತೃತ್ವದಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆ ಸಹಕಾರದೊಂದಿಗೆ ಮಂಗಳೂರಿನ ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಇಲ್ಲಿನ ಸಂಘದ ಸದಸ್ಯರು ಸುಮಾರು 59 ಸಾವಿರದಷ್ಟು ಬೆಳೆವಿಮೆಗೆ ಪ್ರೀಮಿಯಂ ಪಾವತಿ ಮಾಡಿದ್ದರು. ಆದರೆ ಬೆಳೆವಿಮೆ ಪರಿಹಾರ ಇದುವರೆಗೂ ಲಭ್ಯವಾಗಿಲ್ಲ. ಆದರೆ ಅದೇ ಗ್ರಾಹಕ ಪಕ್ಕದ ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಬೆಳೆ ವಿಮೆ ಪಾವತಿ ಮಾಡಿದ ಕೃಷಿಕರಿಗೆ ಪರಿಹಾರ ಲಭ್ಯವಾಗಿದೆ. ಒಂದೇ ಗ್ರಾಮದಲ್ಲಿ ಈ ವ್ಯತ್ಯಾಸವಾಗಿರುವುದು ಹೇಗೆ ಎಂಬ ಪ್ರಶ್ನೆ ಇದ್ದರೆ, ಮುರುಳ್ಯದ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ಪ್ರೀಮಿಯಂ ಪಾವತಿ ಮಾಡಿರುವ 27 ಮಂದಿ ಕೃಷಿಕರು ಇದೀಗ ಗ್ರಾಹಕ ನ್ಯಾಯಾಲಯದ ಮುಂದೆ ಹೋಗಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement