ಉಜಿರೆ: ದ್ರವ್ಯ ಲೇಷ್ಯೆ ಮತ್ತು ಭಾವ ಲೇಷ್ಯೆಯಿಂದ ದೇಹ ಮತ್ತು ಮನಸ್ಸು ಪರಿಶುದ್ಧವಾಗುತ್ತದೆ. ದೇಹವನ್ನು ಸುಗಂಧ ದ್ರವ್ಯಗಳಿಂದ ಪರಿಶುದ್ಧಗೊಳಿಸಬಹುದು. ದೇಹವನ್ನು ಸುಗಂಧ ದ್ರವ್ಯಗಳಿಂದ ಪರಿಶುದ್ಧಗೊಳಿಸಿದರೆ ಜಪ, ತಪ, ಧ್ಯಾನ, ಸತ್ಸಂಗ, ಭಜನೆ, ಪೂಜೆ ಮೊದಲಾದ ಕ್ರಿಯೆಗಳಿಂದ ನಮ್ಮ ಭಾವನೆಗಳು ಪರಿಶುದ್ಧವಾಗಿ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಭಜನೆಯಿಂದ ಮಾನಸಿಕ ಪರಿವರ್ತನೆ ಆಗುತ್ತದೆ ಹಾಗೂ ಶ್ರದ್ಧೆ ಮತ್ತು ಸ್ಪರ್ಧೆಯಿಂದ ಸಾಮಾಜಿಕ ಸುಧಾರಣೆಯಾಗುತ್ತದೆ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.
ಬೆಳ್ತಂಗಡಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಬೆಳ್ತಂಗಡಿ ಜೈನ್ ಮಿಲನ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ ಮಂಗಳೂರು ವಿಭಾಗದಜಿನ ಭಜನಾ ಸ್ಪರ್ಧೆಯನ್ನು ಅವರು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಬಸದಿಗೆ ಹೋದಾಗ ಎಲ್ಲರೂ ದರ್ಶನ ಸ್ತುತಿಯನ್ನು ಹಾಡಬೇಕು. ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ, ಶ್ಲೋಕಗಳನ್ನು, ಅಷ್ಟಕಗಳನ್ನು ಹೇಳಬೇಕು. ಜಾತಿಜೈನರು ನೀತಿಜೈನರೂ ಆಗಬೇಕು. ಪ್ರತಿ ಮನೆಯಲ್ಲಿಯೂ ಭಜನೆಯಿಂದ ಸಾಮಾಜಿಕ ಪರಿವರ್ತನೆಯಾಗುತ್ತದೆ. ಭಜನಾ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೂ ನಾವು ಹಸ್ತಾಂತರಿಸಿ ಆರೋಗ್ಯಪೂರ್ಣ, ಸುಸಂಸ್ಕೃತ ಸಮಾಜ ರೂಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಅಲ್ಪಸಂಖ್ಯಾತರಾದ ಜೈನರು ತಮ್ಮ ಪರಿಶುದ್ಧ ಆಚಾರ-ವಿಚಾರ, ನಡೆ-ನುಡಿ ಹಾಗೂ ವ್ರತ-ನಿಯಮಗಳ ಪಾಲನೆಯೊಂದಿಗೆ ಸಮಾಜಕ್ಕೆ ಮಾರ್ಗದರ್ಶಕರಾಗಬೇಕು ಎಂದು ಅವರು ಸಲಹೆ ನೀಡಿದರು.
25 ದೀಪಗಳನ್ನು ಏಕಕಾಲದಲ್ಲಿ ಬೆಳಗಿಸುವುದರೊಂದಿಗೆ ಹೇಮಾವತಿ ವೀ. ಹೆಗ್ಗಡೆಯವರು ಬೆಳ್ತಂಗಡಿ ಜೈನ್ ಮಿಲನ್ ರಜತ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು. ನೆರೆ ಸಂತ್ರಸ್ತರಾದ ನೇಮಿರಾಜ್‍ಜೈನ್ ಮತ್ತು ಕಡಿರುದ್ಯಾವರದ ಉದಯಕುಮಾರ್ ಜೈನ್ ಅವರಿಗೆ ತಲಾ 25,000 ರೂ.ನೆರವು ನೀಡಲಾಯಿತು. ಭಾರತೀಯ ಜೈನ್ ಮಿಲನ್‍ನ ಮಂಗಳೂರು ವಲಯದ ಅಧ್ಯಕ್ಷ ಪುಷ್ಪರಾಜಜೈನ್ ಶುಭಾಶಂಸನೆ ಮಾಡಿ, ರಾಜ್ಯದಲ್ಲಿ 350 ತಂಡಗಳ ಹತ್ತುಸಾವಿರ ಮಂದಿ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಯುವಜನತೆ ಭಜನೆಯಲ್ಲಿ ಆಸಕ್ತಿ ಮತ್ತು ಉತ್ಸಾಹದಿಂದ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು. 2020ರ ಜನವರಿ 4 ಮತ್ತು 5 ರಂದು ಧಾರವಾಡದಲ್ಲಿ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ನಡೆಯಲಿದೆ ಎಂದು ಅವರು ಪ್ರಕಟಿಸಿದರು.
ಬೆಳ್ತಂಗಡಿ ಜೈನ್ ಮಿಲನ್ ಸ್ಥಾಪಕಾಧ್ಯಕ್ಷ ಪಡಂಗಡಿ ಭೋಜರಾಜ ಹೆಗ್ಡೆ ಮತ್ತು ನಿರ್ದೇಶಕರುಗಳು ಉಪಸ್ಥಿತರಿದ್ದರು. ಉಜಿರೆಯ ಡಾ. ಬಿ. ಯಶೋವರ್ಮ ಸ್ವಾಗತಿಸಿದರು. ಬಂಟ್ವಾಳದ ಸುದರ್ಶನ ಜೈನ್ ಧನ್ಯವಾದವಿತ್ತರು. ಡಾ. ಬಿ.ಪಿ. ಸಂಪತ್‍ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಜೈನ್ ಮಿಲನ್‍ನ ಎಲ್ಲಾ ನಿರ್ದೇಶಕರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಂಗಳೂರು ವಿಭಾಗ ಮಟ್ಟದ ಸ್ಪರ್ಧೆಯಲ್ಲಿ 107 ತಂಡಗಳ 600 ಮಂದಿ ಸದಸ್ಯರು ಭಾಗವಹಿಸಿದರು.
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …