ಬೆಳ್ಳಾರೆ: ಪುಟ್ಟ ಕಂದಮ್ಮಗಳ ಹಾಗೂ ಮಕ್ಕಳ ಸಿದ್ಧ ಉಡುಪುಗಳು ಹಾಗೂ ಇನ್ನಿತರ ವಸ್ತುಗಳ ಮಳಿಗೆ ಕಿಡ್ಸ್ ವರ್ಲ್ಡ್-ದಿ ಕಂಪ್ಲೀಟ್ ಕಿಡ್ಸ್ ಸ್ಟೋರ್ ಬೆಳ್ಳಾರೆಯ ಕೆಎಸ್ಸಾರ್ಟಿಸಿ ಬಸ್ ನಿಲ್ಧಾಣದ ಬಳಿಯಿರುವ ಕಾಮಧೇನು ಟವರ್ಸ್ ನಲ್ಲಿ ಅ.೨೪ರಂದು ಶುಭಾರಂಭಗೊಂಡಿತು.
ಮಳಿಗೆಯನ್ನು ಕಾಮಧೇನು ಟವರ‍್ಸ್ ಮಾಲಕ ಮಾಧವ ಗೌಡ ಕಾಮಧೇನು ಉದ್ಘಾಟಿಸಿ ಶುಭ ಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಾಧಕ್ಷ ಮುಸ್ತಫಾ ಬೆಳ್ಳಾರೆ, ಶಂಸುಲ್ ಉಲಮಾ ಟ್ರಸ್ಟ್ ಅಧ್ಯಕ್ಷ ಅಬೂಬಕ್ಕರ್ ಎ.ಎಚ್, ಹಾಜಿ ಮಮ್ಮಾಲಿ, ಸುನ್ನಿ ಐಕ್ಯ ವೇದಿಕೆ ಅಧ್ಯಕ್ಷ ಹಸೈನಾರ್ ಹಾಜಿ, ಗ್ರಾಪಂ ಸದಸ್ಯ ನವೀನ್ ಗೌಡ, ಮಾಜಿ ತಾಪಂ ಸದಸ್ಯ ಅನಿಲ್ ರೈ ಬೆಳ್ಳಾರೆ, ಪೆರುವಾಜೆ ಗ್ರಾಪಂ ಅಧ್ಯಕ್ಷ ಅನುಸೂಯ, ಶೂಬಿಝ್ ಮಾಲಕ ನಝೀರ್, ವಿಖಾಯ ಚೇರ್‌ಮ್ಯಾನ್ ಜಮಾಲುದ್ದಿನ್ ಕೆ.ಎಸ್, ರಶೀದ್ ಬೆಳ್ಳಾರೆ, ಹಾರಿಸ್ ಸೋಣಂಗೇರಿ, ಮಾಲಕರಾದ ಶಂಸುದ್ದಿನ್ ಜಿ.ಎ, ಕಮಾಲುದ್ದಿನ್ ಪೆರುವಾಜೆ ಮತ್ತಿತರರು ಉಪಸ್ಥಿತರಿದ್ದರು.
ಈ ಮಳಿಗೆಯು ಮಕ್ಕಳಿಗೆ ಬೇಕಾದ ಎಲ್ಲಾ ವಸ್ತುಗಳು ಒಂದೇ ಸೂರಿನಡಿಯಲ್ಲಿ ದೊರೆಯುವ ವಿಶಾಲವಾದ ಮಳಿಗೆ ಇದಾಗಿದೆ. ಇಲ್ಲಿ ಮಕ್ಕಳಿಗೆ ಬೇಕಾದ ಸಿದ್ಧ ಉಡುಪುಗಳು, ಆಟಿಕೆ ಸಾಮಾಗ್ರಿಗಳು, ತೊಟ್ಟಿಲುಗಳು, ಬೇಬಿ ವಾಕರ್‌ಗಳು ಹಾಗೂ ಇನ್ನಿತರ ವಸ್ತುಗಳು ಲಭ್ಯವಿದೆ. ಗ್ರಾಹಕರಿಗಾಗಿ ಅತಿ ಕಡಿಮೆ ದರದಲ್ಲಿ ಖ್ಯಾತ ಕಂಪೆನಿಗಳ ವಿವಿಧ ಉತ್ಪನ್ನಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.