ಬೆಳ್ಳಾರೆ:ಅಸಂಖ್ಯಾತ ಜನರ ಮನೋವಿಕಾಸ ಮಾಡುವ ಮೂಲಕ ಅವರಲ್ಲಿನ ವ್ಯಕ್ತಿತ್ವವನ್ನು ಬೆಳಗಿಸುವ ಶ್ರೇಷ್ಠ ಕಾರ್ಯವನ್ನು ಗಂಗಾಧರ ಬೆಳ್ಳಾರೆ ಮಾಡಿದ್ದರು. ಮನೋವಿಶ್ಲೇಷಕರಾಗಿ, ಕಥೆಗಾರ, ಯಕ್ಷಗಾನ,ನಾಟಕ, ಸಿನಿಮಾ ಹಾಗೂ ತರಬೇತುದಾರರಾಗಿ ಹಲವು ಅಯಾಮಗಳಲ್ಲಿ ಗುರುತಿಸಿಕೊಂಡಿದ್ದ ಬೆಳ್ಳಾರೆಯವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದರು ಎಂದು ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ ಹೇಳಿದರು.
ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ನಡೆದ ಖ್ಯಾತ ಮನೋ ವಿಶ್ಲೇಷಕ ದಿ|ಗಂಗಾಧರ ಬೆಳ್ಳಾರೆಯ ಸಂಸ್ಮರಣೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಸ್ಮರಣಾ ಮಾತುಗಳನ್ನಾಡಿದರು.
‘ಹದಿಹರೆಯದ ಮನೋವಿಜ್ಞಾನ’ ಎಂಬ ವಿಷಯದ ಬಗ್ಗೆ ಆಪ್ತಸಮಾಲೋಚಕಿ, ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ಸಂಶೋಧನಾ ವಿದ್ಯಾರ್ಥಿನಿ ಶೆಫಾಲಿ ಕೆ.ಎಸ್ ಉಪನ್ಯಾಸ ನೀಡಿದರು.
ಕುಂಬ್ರ ಮೂಕಾಂಬಿಕಾ ಪ್ರಿಂಟರ್ಸ್‍ನ ದಿವಾಕರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬೆಳ್ಳಾರೆಯ ಸಾರ್ವಜನಿಕ ಗ್ರಂಥಾಲಯಕ್ಕೆ ದಿ|ಗಂಗಾಧರ ಬೆಳ್ಳಾರೆಯವರು ಬರೆದ ಪುಸ್ತಕಗಳನ್ನು ದಿ|ಗಂಗಾಧರ ಬೆಳ್ಳಾರೆಯವರ ಮಾತೃಶ್ರೀ ಪ್ರೇಮಲೀಲಾ ಟಿ.ಡಿ ಅವರು ಗ್ರಂಥಪಾಲಕಿ ಶಶಿಕಲಾ ಅವರಿಗೆ ಹಸ್ತಾಂತರಿಸಿದರು. ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಪುತ್ಯ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ ಜಯರಾಮ ಉಮಿಕ್ಕಳ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಸ್ವಾಗತಿಸಿದರು. ಉಪನ್ಯಾಸಕಿ ಅಮಿತಾ ವೈ ಶೆಟ್ಟಿ ವಂದಿಸಿದರು. ಉಪನ್ಯಾಸಕ ಗಣೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಮೌಸಮಿ ಸಹಕರಿಸಿದರು. ಅಪರಾಹ್ನ ದಿ|ಗಂಗಾಧರ ಬೆಳ್ಳಾರೆಯವರು ಅಭಿನಯಿಸಿದ್ದ ಗಾನಸಿರಿ ಕ್ರಿಯೇಷನ್ಸ್‍ವರ ‘ಕನಸು’ಕಣ್ಣು ತೆರೆದಾಗ ಕನ್ನಡ ಚಲನಚಿತ್ರದ ಪ್ರದರ್ಶನ ನಡೆಯಿತು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…