ಬೆಳ್ಳಾರೆ: ರಾಷ್ಟ್ರೀಯ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ಳಾರೆ ಡಿವಿಜನ್ ವತಿಯಿಂದ ಸಾರ್ವಜನಿಕ ಕಾರ್ಯಕ್ರಮ ಬೆಳ್ಳಾರೆ ರಾಜೀವ್ ಗಾಂಧಿ ಸಭಾಭವನದಲ್ಲಿ ನಡೆಯಿತು.
ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ಶಾಫಿ ಬೆಳ್ಳಾರೆ ಪ್ರಾಸ್ತಾವಿಕ ಬಾಷಣವನ್ನು ಮಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಷಯ ಮಂಡನೆ ಮಂಡಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯರಾದ ಜನಾಬ್ ಸಿದ್ದೀಕ್ ಪನಾಮ ಮಾತನಾಡಿ ,ಭಾರತ ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳು ವ್ಯವಸ್ಥಿತವಾಗಿ ನಡೆಸುತ್ತಿರುವ ಗುಂಪು ಹತ್ಯೆ, ಗುಂಪು ಹಲ್ಲೆಗಳು, ಅನ್ಯಾಯ, ಅಕ್ರಮವನ್ನು ದೇಶಪ್ರೇಮಿಗಳು ಒಂದಾಗಿ ಫ್ಯಾಸಿಸ್ಟ್ ಶಕ್ತಿಗಳ ಅಟ್ಟಹಾಸವನ್ನು ಎದುರಿಸಬೇಕಾಗಿದೆ ಹಾಗೂ ಸಾಂವಿಧಾನಿಕ ಹಕ್ಕನ್ನು ಉಳಿಸುವುದು ಭಾರತೀಯರಾದ ನಮ್ಮ ಜವಾಬ್ದಾರಿ ಆಗಿದೆ ಎಂದರು.ಈ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರದಾದ್ಯಂತ ಅಭಿಯಾನ ಕೈಗೊಂಡಿದೆ ಎಂದರು.
ಫೈಝಲ್. ಜಿ ಅವರ ಪ್ರಾರ್ಥನೆ ಯೊಂದಿಗೆ ಜರುಗಿದ ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಬೆಳ್ಳಾರೆ ವಲಯ ಸಮಿತಿ ಸದಸ್ಯ ಶಫೀಕ್ ಸ್ವಾಗತಿಸಿ ಅಧ್ಯಕ್ಷ ಬಶೀರ್ ವಂದಿಸಿದರು.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel