ಬೆಳ್ಳಾರೆಯಲ್ಲಿ ರುದ್ರಭೂಮಿಗೆ ತಹಶೀಲ್ದಾರರಿಂದ ಸ್ಥಳ ವೀಕ್ಷಣೆ

July 8, 2019
4:00 PM

ಬೆಳ್ಳಾರೆ : ಬೆಳ್ಳಾರೆ ಭಾಗದ ಸಾರ್ವಜನಿಕರ ಬಹು ಕಾಲದಿಂದ ಇದ್ದ ರುದ್ರಭೂಮಿಯ ಅಲಭ್ಯತೆಯ ಕೊರತೆಯನ್ನು ಬೆಳ್ಳಾರೆಯ ಸಾಮಾಜಿಕ ಮುಖಂಡರು ಹಾಗು ಗ್ರಾಮ ಪಂಚಾಯತ್ ಆಡಳಿತ ವರ್ಗದವರು ಸುಳ್ಯ ತಹಶೀಲ್ದಾರ ಕುಂಞ ಅಹಮ್ಮದ್ ಅವರ ಗಮನಕ್ಕೆ ಕೆಲವು ಸಮಯದ ಹಿಂದೆ ತಂದಿದ್ದರು.
ಬೆಳ್ಳಾರೆಗೆ ಭೇಟಿ ನೀಡಿದ್ದ ಸಂದರ್ಭ ತಹಶೀಲ್ದಾರ ಕುಂಞ ಅಹಮ್ಮದ್ ಅವರು ಬಹಳ ವರ್ಷಗಳ ಹಿಂದೆ ಬೆಳ್ಳಾರೆ ಭಾಗದಲ್ಲಿ ಅಸ್ಥಿತ್ವದಲ್ಲಿದ್ದ ರುದ್ರಭೂಮಿಯನ್ನು ಮರುನವೀಕರಣಗೊಳಿಸುವ ಸಲುವಾಗಿ ಸ್ಥಳ ವೀಕ್ಷಣೆ ನಡೆಸಿದರು. ಸ್ಥಳಕ್ಕೆ ಅಗತ್ಯವಿರುವ ಸೌಲಭ್ಯಗಳ ಕುರಿತು ಅಳವಡಿಕೆಗೆ ಆದೇಶಿಸಿ, ಸ್ಥಳದಲ್ಲಿದ್ದ ಕೆಲವು ಕುಂದುಕೊರತೆಗಳನ್ನು ನಿವಾರಿಸಲು ಬೆಳ್ಳಾರೆ ಗ್ರಾಮ ಪಂಚಾಯತ್‍ಗೆ ಸೂಚಿಸಿದರು.
ಬಹಳ ವರ್ಷಗಳ ಹಿಂದೆ ವಾಸ್ತು ಹಾಗು ಜೋತಿಷ್ಯ ಶಾಸ್ತ್ರಜ್ಞರ ಅಣತಿಯಂತೆ ಬೆಳ್ಳಾರೆ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ಈಶಾನ್ಯ ಅಭಿಮುಖವಾಗಿ ರುದ್ರಭೂಮಿ ಇರಬೇಕೆಂಬ ಕಾರಣಕ್ಕಾಗಿ ನಿರ್ಮಿಸಲಾಗಿತ್ತೆಂದು ತಿಳಿದು ಬಂದಿದೆ. ಬೆಳ್ಳಾರೆ ಗ್ರಮ ಪಂಚಾಯತ್ ಅಧ್ಯಕ್ಷೆ ಶಕುಂತಳಾ ನಾಗರಾಜ್, ಉಪಾಧ್ಯಕ್ಷ ಮುಸ್ತಾಫಾ ಬೆಳ್ಳಾರೆ, ಸದಸ್ಯ ನವೀನ್ ರೈ ತಂಬಿನಮಕ್ಕಿ, ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಸುಳ್ಯ ತಾಲೂಕು ಅಧ್ಯಕ್ಷ ಸುಂದರ ಪಾಟಾಜೆ, ಜಯರಾಮ್ ಉಮಿಕ್ಕಳ, ರಾಮ ಲೆಕ್ಕಾಧಿಕರಿ ವಸುಧಾ ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 19-04-2024 | ಇಂದು ಉತ್ತಮ ಮಳೆಯ ಮುನ್ಸೂಚನೆ |
April 19, 2024
11:00 AM
by: ಸಾಯಿಶೇಖರ್ ಕರಿಕಳ
ತೀರ್ಥಹಳ್ಳಿ ಮೊದಲ ಮಳೆ ವ್ಯಕ್ತಿ ಬಲಿ | ಶಿವಮೊಗ್ಗದಲ್ಲೂ ಗಾಳಿ ಮಳೆ |
April 19, 2024
10:02 AM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮಳೆ
April 18, 2024
10:09 PM
by: ದ ರೂರಲ್ ಮಿರರ್.ಕಾಂ
ಆದರ್ಶ ಜೀವನ ಮತ್ತು ಪರಿಸರ ಸ್ನೇಹಿ ನೀತಿ ತಿಳಿಸುವ ಮಂಗಟ್ಟೆ ಹಕ್ಕಿಗಳು…
April 18, 2024
4:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror