ಬೆಳ್ಳಾರೆಯಲ್ಲಿ ಸ್ವಾತಂತ್ರ್ಯ ಸದನ ನಿರ್ಮಿಸಲು ಶಾಸಕರಿಗೆ ಮನವಿ

September 16, 2019
5:00 PM

ಬೆಳ್ಳಾರೆ: ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಸ್ಥಳವಾಗಿದ್ದ ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಸದನ ನಿರ್ಮಾಣವಾಗಬೇಕು ಎಂದು ಬೆಳ್ಳಾರೆಯ ಸ್ನೇಹಿತರ ಕಲಾ ಸಂಘದ ವತಿಯಿಂದ ಸುಳ್ಯ ಶಾಸಕ ಎಸ್ ಅಂಗಾರ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಕೊರಗಪ್ಪ ನಾಯ್ಕ ಕುರುಂಬುಡೇಲು ಶಾಸಕರಿಗೆ ಮನವಿ ಪತ್ರ ನೀಡಿದರು. ಪೂರ್ವಾಧ್ಯಕ್ಷರುಗಳಾದ ಚಂದ್ರಶೇಖರ ಪನ್ನೆ, ಪದ್ಮನಾಭ ಬೀಡು, ಆನಂದ ಗೌಡ ಪಡ್ಪು, ಕಾರ್ಯದರ್ಶಿ ಸಂಜಯ ನೆಟ್ಟಾರು, ಸದಸ್ಯರುಗಳಾದ ಶಿವರಾಮ ನಾಯಕ್ ಪನ್ನೆ, ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ, ಜಯಂತ ಪೂಜಾರಿ ಕಾವಿನ ಮೂಲೆ, ಸತೀಶ್ ಕುಮಾರ್ ಕಿಲಂಗೋಡಿ ಉಪಸ್ಥಿತರಿದ್ದರು.

ಬೆಳ್ಳಾರೆ ಕೋಟೆಯಲ್ಲಿ ಒಂದು ಅಮರ ಸುಳ್ಯ ಸ್ವಾತಂತ್ರ್ಯ ಭವನ ನಿರ್ಮಾಣವಾಗಬೇಕು. ಆ ಭವನದಲ್ಲಿ 1837ರ ಬಂಡಾಯದಲ್ಲಿ ಪಾಲ್ಗೊಂಡ ಹಿರಿಯರ ಬಗೆಗಿನ ದಾಖಲೆಗಳು, ಆಗ ಬಳಸಲಾದ ಕತ್ತಿ, ಕೋವಿ ಮತ್ತು ಇತರ ಆಯುಧಗಳು, ರೈತ ಸಂಗ್ರಾಮದ ಬಗ್ಗೆ ಹೊರಬಂದಿರುವ ಎನ್. ಎಸ್. ದೇವಿಪ್ರಸಾದರ ಅಮರ ಸುಳ್ಯದ ಸ್ವಾತಂತ್ರ್ಯ ಸಮರ, ನಿರಂಜನರ ಕಲ್ಯಾಣ ಸ್ವಾಮಿ ಮತ್ತು ಅಪರಂಪಾರ, ಡಾ. ಪ್ರಭಾಕರ ಶಿಶಿಲರ ಮೂಡಣದ ಕೆಂಪು ಕಿರಣ ಮತ್ತು ಅಮರ ಕ್ರಾಂತಿ ವೀರರು, ವಿದ್ಯಾಧರ ಬಡ್ಡಡ್ಕ ಅವರ ಕೆದಂಬಾಡಿ ರಾಮಗೌಡ, ಪಾಲ್ತಾಡಿ ರಾಮಕೃಷ್ಣ ಆಚಾರ್‍ರ ಸ್ವಾತಂತ್ರ್ಯ ಯೋಧ ಕೆದಂಬಾಡಿ ರಾಮ ಗೌಡ, ಡಾ. ಪ್ರತಿಮಾ ಜಯರಾಂರ 1837ರ ಕೊಡಗು ಕೆನರಾ ಬಂಡಾಯ ಎಂಬಿತ್ಯಾದಿ ಕೃತಿಗಳಲ್ಲದೆ ಭಾರತದ ಸ್ವಾತಂತ್ರ್ಯ ಹೋರಾಟದ ಗಾಂಧೀ, ನೆಹರೂ, ಸುಭಾಶ್ಚಂದ್ರ ಭೋಸ್, ವಲ್ಲಭಬಾಯಿ ಪಟೇಲರಂತಹ ದೇಶ ಭಕ್ತರ ಬಗೆಗಿನ ಕೃತಿಗಳು ಓದುಗರಿಗೆ ಲಭ್ಯವಾಗುವಂತೆ ಮಾಡುವ ಗ್ರಂಥಾಲಯವೊಂದು ನಿರ್ಮಾಣವಾಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸ್ವಾತಂತ್ರ್ಯ ಸಮರದ ವಿವರದ ಕೆಲವು ದಾಖಲೆಗಳನ್ನು ಮತ್ತು ಅಮರಕ್ರಾಂತಿ ಸ್ವಾತಂತ್ರ್ಯ ಭವನದ ನಿರ್ಮಾಣ ವೆಚ್ಚದ ನೀಲಿ ನಕಾಶೆಯೊಂದನ್ನು ಪತ್ರದೊಂದಿಗೆ ನೀಡಲಾಯಿತು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭೂಮಿಗೆ ಗಗನಯಾತ್ರಿ ಶುಭಾಂಶು ಶುಕ್ಲಾ ಮರುಯಾನ | ಕ್ಯಾಲಿಫೋರ್ನಿಯಾದ ಕಡಲತೀರದಲ್ಲಿ ಇಳಿಯಲಿರುವ ನೌಕೆ
July 14, 2025
11:16 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-07-2025 | 10 ದಿನಗಳವರೆಗೂ ಕರಾವಳಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮಳೆ | ಜುಲೈ 16 ರಿಂದ ರಾಜ್ಯದೆಲ್ಲೆಡೆ ಉತ್ತಮ ಮಳೆ |
July 14, 2025
1:02 PM
by: ಸಾಯಿಶೇಖರ್ ಕರಿಕಳ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಧಾತ್ರಿ ಕೆ ರಾವ್
July 14, 2025
7:47 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಭವಿಷ್ಯ ಕೆ ಪಿ
July 14, 2025
7:40 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group