ಬೆಳ್ಳಾರೆ : ಹಿತಾಯು ಕ್ಲಿನಿಕ್ ಮತ್ತು ಥೆರಪಿಸೆಂಟರ್ ಬೆಳ್ಳಾರೆ, ಟ್ರಿಕಾಗೋ, ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಹಾಗೂ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವುಗಳ ಸಹಭಾಗಿತ್ವದಲ್ಲಿ ಬೆಳ್ಳಾರೆಯ ಡಾ| ಶ್ರೇಯಸ್ ಭಾರದ್ವಾಜ್ ಅವರ ಹಿತಾಯು ಥೆರಪಿ ಸೆಂಟರ್ ನಲ್ಲಿ 15 ದಿನಗಳ ಹೃದ್ರೋಗ ತಪಾಸಣಾ ಶಿಬಿರ ಮತ್ತು ಸಲಹಾ ಶಿಬಿರ ಪ್ರಾರಂಭಗೊಂಡಿತು.
ಕೆ.ಎಂ.ಸಿ. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನಮೋಹನ ಮಾತನಾಡಿ, ಇಂದಿನ ಒತ್ತಡದ ವಾತಾವರಣದಲ್ಲಿ ಹೃದಯ ಸಂಬಂಧಿ ಎದೆನೋವು, ರಕ್ತದೊತ್ತಡ, ಉಸಿರಾಟ ತೊಂದರೆ, ಹೆಚ್ಚು ಕೊಬ್ಬಿನಾಂಶ, ಅನಿಯಮಿತ ಹೃದಯ ಬಡಿತ ಮೊದಲಾದ ಲಕ್ಷಣಗಳು ಕಂಡು ಬರುತ್ತಿದ್ದು, ಇದರ ಶುಶ್ರೂಯೆ ಅತೀ ಅಗತ್ಯವಿರುತ್ತದೆ ಎಂದು ಹೇಳಿದರು.
ಅದರೊಂದಿಗೆ ಗ್ರಾಮೀಣ ಪ್ರದೇಶದ ಎಲ್ಲಾ ವರ್ಗದ ಜನರಿಗೂ ಆರೋಗ್ಯ ಕಾಳಜಿ ಬಗ್ಗೆ ಕೆ.ಎಂ.ಸಿ. ಮಂಗಳೂರು ತ್ವರಿತಗತಿಯ ಇ.ಸಿ.ಜಿ. ಸೇವೆಯನ್ನು ಹಿತಾಯು ಸೆಂಟರ್ ನಲ್ಲಿ ತೆರೆದಿದ್ದು, ರೋಗಿಗಳಿಗೆ ಕೇವಲ 10 ನಿಮಿಷದಲ್ಲಿ ಕೆ.ಎಂ.ಸಿ.ಯ ತಜ್ಞ ವೈದ್ಯರಿಂದ ರಿಪೋರ್ಟ್ ನೀಡಿ ಸೂಕ್ತ ಸಲಹೆಯನ್ನು ನೀಡಲಿರುತ್ತಾರೆ. ಮುಂದಿನ ದಿನಗಳಲ್ಲಿ ಇ.ಸಿ.ಜಿ. ಸೇವೆಯು ದಿನದ 24 ಗಂಟೆಯೂ ಸಾರ್ವಜನಿಕರಿಗೆ ಬೆಳ್ಳಾರೆಯ ಹಿತಾಯು ಕ್ಲಿನಿಕ್‍ನಲ್ಲಿ ಲಭ್ಯವಿರುತ್ತದೆ. ಬೆಳ್ಳಾರೆ ಪರಿಸರ್ ಸಾರ್ವಜನಿಕರು ಸದ್ರಿ ಸೇವೆ ಹಾಗೂ ಮಣಿಪಾಲ್ ಆರೋಗ್ಯ ಕಾರ್ಡ್‍ನ ವ್ಯವಸ್ಥೆಯನ್ನು ಸದುಪಯೋಗ ಪಡಿಸುವಂತೆ ಮಾಹಿತಿ ನೀಡಿದರು.
ರೋಟರಿ ಕ್ಲಬ್ ಬೆಳ್ಳಾರೆ ಟೌನ್‍ನ ಅಧ್ಯಕ್ಷ ರೊ| ಬಿ. ನರಸಿಂಹ ಜೋಶಿ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ರೋಟರಿಯ ನಿಕಟಪೂರ್ವ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ, ವಿನಯಕುಮಾರ್ .ಕೆ, ದಂತವೈದ್ಯ ಡಾ| ಅನಂತಕೃಷ್ಣ ಕೆದಿಲ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಡಾ| ಶ್ರೇಯಸ್ ಭಾರದ್ವಾಜ್ ಆರೋಗ್ಯ ಪದ್ಧತಿಯ ಬಗ್ಗೆ ವಿವರ ನೀಡಿ, ವಂದಿಸಿದರು.