ಬೆಳ್ಳಾರೆಯಲ್ಲಿ ಹೃದ್ರೋಗ ತಪಾಸಣಾ ಶಿಬಿರ ಮತ್ತು ಸಲಹೆ

July 18, 2019
1:00 PM

ಬೆಳ್ಳಾರೆ : ಹಿತಾಯು ಕ್ಲಿನಿಕ್ ಮತ್ತು ಥೆರಪಿಸೆಂಟರ್ ಬೆಳ್ಳಾರೆ, ಟ್ರಿಕಾಗೋ, ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಹಾಗೂ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವುಗಳ ಸಹಭಾಗಿತ್ವದಲ್ಲಿ ಬೆಳ್ಳಾರೆಯ ಡಾ| ಶ್ರೇಯಸ್ ಭಾರದ್ವಾಜ್‍ ಅವರ ಹಿತಾಯು ಥೆರಪಿ ಸೆಂಟರ್ ನಲ್ಲಿ 15 ದಿನಗಳ ಹೃದ್ರೋಗ ತಪಾಸಣಾ ಶಿಬಿರ ಮತ್ತು ಸಲಹಾ ಶಿಬಿರ ಪ್ರಾರಂಭಗೊಂಡಿತು.

ಕೆ.ಎಂ.ಸಿ. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನಮೋಹನ ಮಾತನಾಡಿ, ಇಂದಿನ ಒತ್ತಡದ ವಾತಾವರಣದಲ್ಲಿ ಹೃದಯ ಸಂಬಂಧಿ ಎದೆನೋವು, ರಕ್ತದೊತ್ತಡ, ಉಸಿರಾಟ ತೊಂದರೆ, ಹೆಚ್ಚು ಕೊಬ್ಬಿನಾಂಶ, ಅನಿಯಮಿತ ಹೃದಯ ಬಡಿತ ಮೊದಲಾದ ಲಕ್ಷಣಗಳು ಕಂಡು ಬರುತ್ತಿದ್ದು,  ಇದರ ಶುಶ್ರೂಯೆ ಅತೀ ಅಗತ್ಯವಿರುತ್ತದೆ ಎಂದು ಹೇಳಿದರು.

ಅದರೊಂದಿಗೆ ಗ್ರಾಮೀಣ ಪ್ರದೇಶದ ಎಲ್ಲಾ ವರ್ಗದ ಜನರಿಗೂ ಆರೋಗ್ಯ ಕಾಳಜಿ ಬಗ್ಗೆ ಕೆ.ಎಂ.ಸಿ. ಮಂಗಳೂರು ತ್ವರಿತಗತಿಯ ಇ.ಸಿ.ಜಿ. ಸೇವೆಯನ್ನು ಹಿತಾಯು ಸೆಂಟರ್ ನಲ್ಲಿ ತೆರೆದಿದ್ದು, ರೋಗಿಗಳಿಗೆ ಕೇವಲ 10 ನಿಮಿಷದಲ್ಲಿ ಕೆ.ಎಂ.ಸಿ.ಯ ತಜ್ಞ ವೈದ್ಯರಿಂದ ರಿಪೋರ್ಟ್ ನೀಡಿ ಸೂಕ್ತ ಸಲಹೆಯನ್ನು ನೀಡಲಿರುತ್ತಾರೆ. ಮುಂದಿನ ದಿನಗಳಲ್ಲಿ ಇ.ಸಿ.ಜಿ. ಸೇವೆಯು ದಿನದ 24 ಗಂಟೆಯೂ ಸಾರ್ವಜನಿಕರಿಗೆ ಬೆಳ್ಳಾರೆಯ ಹಿತಾಯು ಕ್ಲಿನಿಕ್‍ನಲ್ಲಿ ಲಭ್ಯವಿರುತ್ತದೆ. ಬೆಳ್ಳಾರೆ ಪರಿಸರ್ ಸಾರ್ವಜನಿಕರು ಸದ್ರಿ ಸೇವೆ ಹಾಗೂ ಮಣಿಪಾಲ್ ಆರೋಗ್ಯ ಕಾರ್ಡ್‍ನ ವ್ಯವಸ್ಥೆಯನ್ನು ಸದುಪಯೋಗ ಪಡಿಸುವಂತೆ ಮಾಹಿತಿ ನೀಡಿದರು.

ರೋಟರಿ ಕ್ಲಬ್ ಬೆಳ್ಳಾರೆ ಟೌನ್‍ನ ಅಧ್ಯಕ್ಷ ರೊ| ಬಿ. ನರಸಿಂಹ ಜೋಶಿ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ರೋಟರಿಯ ನಿಕಟಪೂರ್ವ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ, ವಿನಯಕುಮಾರ್ .ಕೆ, ದಂತವೈದ್ಯ ಡಾ| ಅನಂತಕೃಷ್ಣ ಕೆದಿಲ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಡಾ| ಶ್ರೇಯಸ್ ಭಾರದ್ವಾಜ್ ಆರೋಗ್ಯ ಪದ್ಧತಿಯ ಬಗ್ಗೆ ವಿವರ ನೀಡಿ, ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಕತ್ತರಿಸಿ ಹಲಸು ನೆಟ್ಟ ಕೃಷಿಕ
July 5, 2026
11:19 PM
by: ದ ರೂರಲ್ ಮಿರರ್.ಕಾಂ
ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ
July 5, 2026
5:47 PM
by: ಮಹೇಶ್ ಪುಚ್ಚಪ್ಪಾಡಿ
ಬಾಳ ಮಧ್ಯಾಹ್ನದ ಲಹರಿ
July 5, 2026
3:10 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ
July 5, 2026
2:32 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror