ಸುಳ್ಯ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ೧೫೦ನೇ ಜನ್ಮ ದಿನಾಚರಣೆಯ ಅಂಗವಾಗಿ ಸುಳ್ಯದ ಗಾಂಧಿ ಚಿಂತನ ವೇದಿಕೆಯು ವತಿಯಿಂದ ಬೆಳ್ಳಾರೆಯಿಂದ ಸುಳ್ಯದವರೆಗೆ ನಡೆಯುತ್ತಿರುವ ಗಾಂಧಿ ನಡಿಗೆ ಆರಂಭಗೊಂಡಿದೆ. ಮಹಾತ್ಮಾಗಾಂಧೀಜಿಯವರ ಆದರ್ಶ ಮತ್ತು ಚಿಂತನೆಗಳು ಎಲ್ಲೆಡೆ ಪಸರಿಸಬೇಕು ಎಂಬ ಉದ್ದೇಶದಿಂದ ಗಾಂಧಿನಡಿಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ಮುನ್ನ ಗಾಂಧಿ ಚಿಂತನೆ ಕಾರ್ಯಕ್ರಮ ನಡೆಯಿತು. ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಗಾಂಧಿ ಚಿಂತನೆ ನಡೆಸಿಕೊಟ್ಟರು.
ಹಿರಿಯರಾದ ಕಿಲಂಗೋಡಿ ಶಂಕರ ರಾವ್, ಡಾ.ಗೋಪಿನಾಥ್, ಚಿದಾನಂದ ರಾವ್ ಪಾಟಾಜೆ, ಮಹಮ್ಮದ್ ಇಂಜಿನಿಯರ್, ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್, ಕುಂಞಪ್ಪ ಮಾಸ್ತರ್, ಐತ್ತ ಪಾಟಾಜೆ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಕುಂತಲಾ ನಾಗರಾಜ್ ಸ್ವಾಗತಿಸಿದರು. ಗಾಂಧಿ ಚಿಂತನಾ ವೇದಿಕೆ ಮುಖ್ಯ ಸಂಚಾಲಕ ಹರೀಶ್ ಬಂಟ್ವಾಳ್ ಪ್ರಸ್ತಾವನೆಗೈದರು. ಕೊರಗಪ್ಪ ಕುರುಂಬುಡೇಲು ವಂದಿಸಿದರು. ಗಾಂಧಿ ಚಿಂತನಾ ವೇದಿಕೆಯ ಡಾ.ಸುಂದರ್ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು.
ಬಿಳಿ ಜುಬ್ಬ ಮತ್ತು ಗಾಂಧಿ ಟೋಪಿ ಧರಿಸಿದ ನೂರ ಐವತ್ತು ಮಂದಿ ಗಾಂಧಿ ನಡಿಗೆಗೆಯಲ್ಲಿ ಭಾಗವಹಿಸುತ್ತಿದ್ದಾರೆ.
ಇವರೊಂದಿಗೆ ಸುಳ್ಯ ನೆಹರು ಸ್ಮಾರಕ ಕಾಲೇಜಿನ ಕಾಲೇಜಿನ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಘಟಕ ಶ್ರೀ.ಧ,ಗ್ರಾ.ಯೋಜನೆಯ ಸದಸ್ಯರು, ಯುವಜನ ಸಂಯುಕ್ತ ಮಂಡಳಿ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸುತ್ತಿದ್ದಾರೆ. ಗಾಂಧಿ ನಡಿಗೆಯಲ್ಲಿ ರಾಷ್ಟ್ರ ಧ್ವಜಗಳು ರಾರಾಜಿಸುತ್ತಿದ್ದು ಗಾಂಧಿ ಭಾವಚಿತ್ರಕ್ಕೆ ಅಲ್ಲಲ್ಲಿ ಪುಷ್ಪಾರ್ಜನೆಯು ನಡೆಯುತ್ತಿದೆ. ಗಾಂಧಿ ಚಿಂತನ ವೇದಿಕೆಯ ಮುಖ್ಯ ಸಂಚಾಲಕ ಹರೀಶ್ ಬಂಟ್ವಾಳ್, ಸಂಚಾಲಕರುಗಳಾದ ಡಾ.ಸುಂದರ ಕೇನಾಜೆ, ದಿನೇಶ್ ಮಡಪ್ಪಾಡಿ ನೇತೃತ್ವ ವಹಿಸಿದ್ದಾರೆ. ಅಲ್ಲಲ್ಲಿ ಸ್ವಾಗತ, ಕಿರು ಸಭಾ ಕಾರ್ಯಕ್ರಮ ನಡೆದು ಮಧ್ಯಾಹ್ನ 3 ಗಂಟೆಗೆ ನಡಿಗೆ ಸುಳ್ಯಕ್ಕೆ ಆಗಮಿಸಲಿದೆ.