ಬೆಳ್ಳಾರೆ: ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಶ್ವಥ ಕಟ್ಟೆ ಬಳಿ ಇರುವ ಹೊಳೆಯ ಬದಿ ತಡೆಗೋಡೆ ನಿರ್ಮಾಣ ಮಾಡಲು ಸಣ್ಣ ನೀರಾವರಿ ಇಲಾಖೆಯಿಂದ ಶಾಸಕ ಎಸ್.ಅಂಗಾರ ರೂ.20. ಲಕ್ಷ ಅನುದಾನ ಒದಗಿಕೊಟ್ಟಿದ್ದು ಇದಕ್ಕೆ ಗುದ್ದಲಿ ಪೂಜೆಯನ್ನು ನ.16 ರಂದು ಶಾಸಕರು ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಉದಯಕುಮಾರ್ ಪೂಜಾ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ, ಸದಸ್ಯರಾದ ಸುರೇಶ್ ಕುಮಾರ್ ರೈ ಪನ್ನೆಗುತ್ತು, ಗುಣವತಿ ಮಂಡೇಪು, ಶಶಿಕಲಾ ಚಾವಡಿಬಾಗಿಲು, ನಾಗೇಶ್ ಕುಲಾಲ್, ಜಯರಾಮ ಉಮಿಕ್ಕಳ, ಎನ್.ಎಸ್.ಡಿ.ವಿಠಲದಾಸ್, ಜನಾರ್ಧನ, ಗ್ರಾಮ ಪಂಚಾಯತ್ ಸದಸ್ಯ ನವೀನ್ ರೈ ತಂಬಿನಮಕ್ಕಿ, ಪ್ರೇಮಚಂದ್ರ ಬೆಳ್ಳಾರೆ, ಚಂದ್ರಶೇಖರ ಪನ್ನೆ, ಮೋನಪ್ಪ ತಂಬಿನಮಕ್ಕಿ, ವಸಂತ, ಉಲ್ಲಾಸ್, ಮಹೇಶ್, ಕಂಟ್ರಾಕ್ಟರ್ ಮೂಸಾ ಹಾಜಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…
ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…
ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್…
ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…
ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…
ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…