ಬೆಳ್ಳಾರೆ: ಋಣ ಮುಕ್ತ ಕಾಯ್ದೆ ಅನುಷ್ಠಾನ ಹೋರಾಟ ಸಮಿತಿ ಸುಳ್ಯ ಇದರ ವತಿಯಿಂದ ಋಣ ಮುಕ್ತ ಕಾಯ್ದೆ ಹಾಗು ಮಾಹಿತಿ ಶಿಬಿರ ಶುಕ್ರವಾರ ಬೆಳ್ಳಾರೆಯ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.
Advertisement
ಸಂಪನ್ಮೂಲ ವ್ಯಕ್ತಿ ಎಂ.ಬಿ ಸದಾಶಿವ ಮಾತನಾಡಿ 2019-20ರ ಸಾಲಿನಲ್ಲಿ ಕರ್ನಾಟಕ ಸರಕಾರ ಜಾರಿಗೆ ತಂದ ಋಣ ಮುಕ್ತ ಕಾಯ್ದೆಯಿಂದ ಬಡ ಜನರು ಜನರು ಶೋಷಣೆಯಿಂದ ಮುಕ್ತರಾಗಲು ಇಂತಹ ಸದಾವಕಾಶಗಳನ್ನು ಬಳಸಿಕೊಳ್ಳಬೇಕು. ಅಗತ್ಯವಿದ್ದವರಿಗೆ ಮಾಹಿತಿಗಳನ್ನು ನೀಡಲಾಗುವುದು ಮತ್ತು ಅವರ ವಿವರಗಳನ್ನು ಗೌಪ್ಯವಿಡಲಾಗುವುದು ಎಂದರು.
Advertisement
ವೇದಿಕೆಯಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಅನಿಲ್ ರೈ ಚಾವಡಿಬಾಗಿಲು, ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಸ್ತಾಫಾ ಬೆಳ್ಳಾರೆ, ಭ್ರಷ್ಟಾಚಾರ ನಿಗ್ರಹ ದಳದ ಪ್ರಶಾಂತ್ ರೈ, ದಯಾಕರ ಆಳ್ವ ಉಪಸ್ಥಿತರಿದ್ದರು.
ಸಮಿತಿಯ ಸಂಚಾಲಕ ಸಚಿನ್‍ರಾಜ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಸಮಿತಿ ಅಧ್ಯಕ್ಷ ಆನಂದ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement