ಬೆಳ್ಳಾರೆ ಜ್ಞಾನದೀಪ ಸಂಸ್ಥೆಯಲ್ಲಿ ಆಟಿ ಆಚರಣೆ : ಆಟಿ ಖಾದ್ಯಗಳ ಉಣಬಡಿಸಿದ ವಿದ್ಯಾರ್ಥಿಗಳು

August 18, 2019
3:00 PM

ಬೆಳ್ಳಾರೆ: ಆಟಿ ತಿಂಗಳಲ್ಲಿ ಹಲವಾರು ವಿಶೇಷ ಆಚರಣೆಗಳು ಇರುತ್ತವೆ. ಆಟಿ ತಿಂಗಳಿನಲ್ಲಿ ವಿವಿಧ ವಿಶೇಷ ಖಾದ್ಯಗಳನ್ನು ತಯಾರಿಸುವುದು ಪದ್ದತಿ. ಮನೆಯಲ್ಲಿ ,ಶಾಲೆಗಳಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ ಆಟಿ ಸಂದರ್ಭ ವಿಶೇಷ ಭಕ್ಷಗಳನ್ನು ತಯಾರಿಸಲಾಗುತ್ತದೆ. ಅಂತೆಯೆ  ಜ್ಞಾನದೀಪ ಶಿಕ್ಷಣಸಂಸ್ಥೆಯಲ್ಲಿ ಆಟಿಯ ಪ್ರಯುಕ್ತ ವಿವಿಧ ವಿಶೇಷ ಖಾದ್ಯಗಳ ಪ್ರದರ್ಶನ ನಡೆದಿದ್ದು ವಿದ್ಯಾರ್ಥಿಗಳ ಪಾಕ ಕೌಶಲ್ಯ ಸಾಬೀತುಪಡಿಸಿದೆ.

Advertisement

ನೂರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪಾಕ ಕೌಶಲ್ಯವನ್ನು ಅತಿಥಿಗಳು ಹಾಗು ಸಾರ್ವಜನಿಕರಿಗೆ ತೋರ್ಪಡಿಸಿ ಮೆಚ್ಚುಗೆಗೆ ಪಾತ್ರರಾದರು. ಅತಿಥಿಗಳಾದ ರಾಮಕುಂಜೇಶ್ವರ ಶಾಲೆಯ ತುಳು ಹಾಗು ಕನ್ನಡ ಭಾಷಾ ಶಿಕ್ಷಕಿ ಸರಿತಾ ಜನಾರ್ಧನ್ ಹಾಗೂ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಶಿಕ್ಷಕ ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ್ ಖಾದ್ಯಗಳ ರುಚಿ ಸವಿದ ನಂತರ ಮಕ್ಕಳೇ ತಯಾರಿಸಿದ ಖಾದ್ಯಗಳ ಮಾಹಿತಿಯನ್ನು ಪಡೆದುಕೊಂಡರು.

ಪ್ರಥಮ ಬಾರಿಗೆ ಆಯೋಜನೆ:ಸದಾ ಒಂದಿಲ್ಲೊಂದು ವಿದ್ಯಾರ್ಥಿ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುತ್ತಿರುವ ಜ್ಞಾನದೀಪ ಶಿಕ್ಷಣ ಸಂಸ್ಥೆ ಪ್ರಥಮ ಬಾರಿಗೆ ತನ್ನ ವಿದ್ಯಾರ್ಥಿಗಳಿಗೆ ಆಟಿದ ಪೊಲಬನ್ನು ಆಯೋಜನೆಗೊಳಿಸಿ ವಿದ್ಯಾರ್ಥಿಗಳ ಪಾಕ ಕೌಶಲ್ಯ ಸಾಬೀತುಪಡಿಸಲು ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳು ಕೂಡ ಕಳೆದೆರಡು ದಿನಗಳಿಂದ ನಿರಂತರ ಶ್ರಮ ವಹಿಸಿ ಆಟಿದ ಪೊಲಬುನಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಸಂಸ್ಥೆಯ ಶಿಕ್ಷಕರು ಮಾರ್ಗದರ್ಶಕರಾಗಿ ಸಹಕರಿಸಿದರು.

ವಿದ್ಯಾರ್ಥಿ ಬಾಣಸಿಗರ ಖಾದ್ಯಗಳ ವಿವರ:ನೂರಕ್ಕೂ ಅಧಿಕ ವಿದ್ಯಾರ್ಥಿಗಳು ತಲಾ ತಂಡವೊಂದರಂತೆ ರಚಿಸಿಕೊಂಡು ಬಗೆ ಬಗೆಯ 18 ಖಾದ್ಯಗಳನ್ನು ಪ್ರದರ್ಶನಕ್ಕೆ ಸಿದ್ದಪಡಿಸಿದರು. ಆಟಿ ಪೊಲಬುನಲ್ಲಿ ಪೀರೆಕಾಯಿ ಪಾಯಸ, ಸ್ವ ನಿರ್ಮಿತ ಗೋಬಿ ಮಚೂರಿ, ಪತ್ರೋಡೆ, ಕಾಯಿ ಹೋಳಿಗೆ, ಹೆಸರುಕಾಳು ಕೋಸಂಬರಿ, ಮಂಞಲ್‍ತಿರೆ, ವಿಶೇಷ ಉಪ್ಪಿನಕಾಯಿ, ಗುಳಿಯಪ್ಪ, ಬಟಾಟೆ ಬಜ್ಜಿ, ಅವಲಕ್ಕಿ, ಕಾಯಿಸುಳಿ ಕಡುಬು, ಪಂಚಕಜ್ಜಾಯ, ಹಲಸಿನ ಹಪ್ಪಳ ಅತಿಥಿಗಳು ಹಾಗು ಸಾರ್ವಜನಿಕರ ಪ್ರಮುಖ ಆಕರ್ಷಣಾ ತಿನಿಸುಗಳಾಗಿದ್ದವು.

 

Advertisement

ಮಕ್ಕಳಿಗೆ ಆಟಿಯ ಮಹತ್ವದ ಅರಿವಾಗಬೇಕು. ವಯಸ್ಸಿಗೂ ಮೀರಿದ ಪ್ರತಿಭೆಯನ್ನು ಮಕ್ಕಳು ಅನಾವರಣಗೊಳಿಸಿದ್ದಾರೆ. ಸ್ಪರ್ಧೆಗೆ ಬಿದ್ದವರಂತೆ ಪ್ರತಿಯೊಂದು ಖಾದ್ಯವನ್ನು ಮಕ್ಕಳು ವಿಭಿನ್ನವಾಗಿ ಮತ್ತು ರುಚಿಕಟ್ಟಾಗಿ ತಯಾರಿಸಿದ್ದಾರೆ. – ಸರಿತಾ ಜನಾರ್ಧನ್ ತುಳು ಮತ್ತು ಕನ್ನಡ ಶಿಕ್ಷಕಿ, ರಾಮಕುಂಜೇಶ್ವರ ಶಾಲೆ ಕಡಬ

ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ನಿಷ್ಣಾತರಾಗಬೇಕು. ಅದಕ್ಕಾಗಿ ಇಂತಹ ಆಚರಣೆ ಮತ್ತು ಚಟುವಟಿಕೆಗಳನ್ನು ನಡೆಸುತ್ತೇವೆ-  ಉಮೇಶ್ ಮಣಿಕ್ಕಾರ, ನಿರ್ದೇಶಕ ಜ್ಞಾನದೀಪ ಶಿಕ್ಷಣ ಸಂಸ್ಥೆ

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ತಾಳಮದ್ದಳೆ ಸಪ್ತಾಹ ಸಮಾರೋಪ | ಕುರಿಯ ಪ್ರಶಸ್ತಿ ಪ್ರದಾನ ಪ್ರಶಸ್ತಿ ಪಡೆವ ಕಲಾವಿದನ ಬದುಕು ಆದರ್ಶವಾಗಿರಬೇಕು
July 7, 2025
8:22 PM
by: The Rural Mirror ಸುದ್ದಿಜಾಲ
ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಕಲಾ ಪ್ರದರ್ಶನ | ಐದು ಜನರ ಕಲಾವಿದರ ಕಲಾಕೃತಿಗಳ ಅನಾವರಣ
July 2, 2025
9:53 PM
by: The Rural Mirror ಸುದ್ದಿಜಾಲ
ಪುತ್ತೂರಿನಲ್ಲಿ ಜೂನ್ 30 ರಿಂದ ಜುಲೈ 6 ರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ | ‘ಕುರಿಯ ಪ್ರಶಸ್ತಿ’ ಪ್ರದಾನ
June 26, 2025
7:05 AM
by: The Rural Mirror ಸುದ್ದಿಜಾಲ
ಮತ್ತದೇ ಬೇಸರ ಕಳೆಯಲು ಈ ಹಿತವಾದ ಮಳೆ | ಹಾಡಷ್ಟೇ ಅಲ್ಲ, ಈ ಅಭಿನಯ ನೋಡಲೇಬೇಕು…
May 27, 2025
7:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group