ಬೆಳ್ಳಾರೆ: ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ 2019-20ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮ ಸಭೆ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.
ಸಾಮಾಜಿಕ ಪರಿಶೋಧನಾ ತಾಲೂಕು ಸಂಯೋಜನಾಧಿಕಾರಿ ರೋಹಿತ್ ಪ್ರಸ್ತಾವಿಸಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕುರಿತು ಸಮಗ್ರ ಮಾಹಿತಿ ನೀಡಿ ಪಿಂಚಣಿ ಖಾತೆದಾರರ ವರದಿಯನ್ನು ವಾಚಿಸಿದರು.. ತಾಂತ್ರಿಕ ಅಭ್ಯಂತಕ ಆತಿಷ್ ಮಾತನಾಡಿ ಕೃಷಿ ಹೊಂಡ ನಿರ್ಮಾಣಕ್ಕೆ, ಹಾಗು ಸಾರ್ವಜನಿಕ ಕಾಮಗಾರಿಗಳಿಗೆ ಅನುದಾನಗಳ ಮಾಹಿತಿ ನೀಡಿದರು. ಅದರೊಂದಿಗೆ ಪ್ರತಿಯೊಬ್ಬನ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು 12 ಸಾವಿರ ರೂಪಾಯಿಗಳ ಸಹಾಯಧನವನ್ನು ನೀಡಲಾಗುತ್ತಿದ್ದು, ಅಗತ್ಯವಿರುವವರು ಅರ್ಜಿಗಳನ್ನು ಸಲ್ಲಿಸಬಹುದು ಎಂದರು.
ತೋಟಗಾರಿಕಾ ಇಲಾಖೆಯ ಮಾಹಿತಿ ನೀಡಿದ ಬೆಳ್ಳಾರೆ ಗ್ರಾಮ ಪಂಚಾಯತ್‍ನ ಕಾರ್ಯದರ್ಶಿ ಭವ್ಯ ಅಡಿಕೆ ಕೃಷಿಗೆ ಉತ್ತೇಜನ ನೀಡಲಾಗುತ್ತಿದ್ದು, ಪ್ರತಿ ಅಡಿಕೆ ಗುಂಡಿಗೆ 110ರೂ(2.30ಫೀಟು ಅಗಲ ಮತ್ತು ಉದ್ದವಿದ್ದರೆ ಮಾತ್ರ) ನೀಡಲಾಗುತ್ತಿದೆ. ಅಂತೆಯೆ ತೆಂಗಿನ ಗುಂಡಿಯೊಂದಕ್ಕೆ 300 ರೂಪಾಯಿಗಳಂತೆ ಸಹಾಯಧನವನ್ನು ವಿತರಿಸಲಾಗುತ್ತಿದೆ. ಅಗತ್ಯವಿದ್ದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದರು.
ಬೆಳ್ಳಾರೆ ಸಮೀಪದ ಕಲ್ಲೋಣಿಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕ ಬಾವಿ ನಿರ್ಮಾಣವಾಗುತ್ತಿದ್ದು, ಮಕ್ಕಳು, ಹೊಂಡದ ಅರಿವಿಲ್ಲದವರು ಬಾವಿಯೊಳಗೆ ಬೀಳುವ ಅಪಾಯವಿದ್ದು, ಬಾವಿ ನಿರ್ಮಾಣವಾಗುತ್ತಿರುವ ಜಾಗ ಸುರಕ್ಷಿತವಾಗಿಲ್ಲವೆಂದು ಸಮಾಜಿಕ ಪರಿಶೋಧನಾ ಸಂಯೋಜನಾಧಿಕಾರಿ ರೋಹಿತ್ ಅವರು ಬೆಳ್ಳಾರೆ ಗ್ರಾಮ ಪಂಚಾಯಿತಿಯನ್ನು ಎಚ್ಚರಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ ನೋಡೆಲ್ ಅಧಿಕಾರಿ ಹಾಗು ಶಿಕ್ಷಣ ಸಂಯೋಜನಾಧಿಕಾರಿ ವಸಂತಕುಮಾರ್ ಬೆಳ್ಳಾರೆ ಗ್ರಾಮ ಪಂಚಾಯತ್ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಉದ್ಯೋಗ ಖಾತರಿ ಯೋಜನೆಯಡಿ ಜನರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತದೆ. ಜನರು ನಿರಾಶರಾಗಬಾರದು. ಸಭೆಗೆ ಪ್ರತಿಯೊಬ್ಬ ಫಲಾನುಭವಿಗಳು ಬಂದರೆ ಸಂಬಂಧಿಸಿದ ವಿಷಯಗಳ ಕುರಿತು ನೇರ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದರು
ವೇದಿಕೆಯಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಕುಂತಳಾ ನಾಗರಾಜ್, ಉಪಾಧ್ಯಕ್ಷ ಮುಸ್ತಾಫಾ ಬೆಳ್ಳಾರೆ, ಸದಸ್ಯರಾದ ಆರಿಫ್ ಬೆಳ್ಳಾರೆ, ನವೀನ್ ರೈ ತಂಬಿನಮಕ್ಕಿ, ವಿಠಲ್‍ದಾಸ್, ಪೂರ್ಣಿಮಾ ಉಪಸ್ಥಿತರಿದ್ದರು. ಹರೀಶ್ ಸ್ವಾಗತಿಸಿ, ಕಾರ್ಯದರ್ಶಿ ಭವ್ಯ ಅನುಪಾಲನಾ ವಿವರವನ್ನು ವಾಚಿಸಿ ವಂದಿಸಿದರು. ಜಯರಾಮ್ ವಾರ್ಷಿಕ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ನಾಡಗೀತೆ ಹಾಡಿದರು.
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…
ತಮಿಳುನಾಡು ಕರಾವಳಿ ಸಮೀಪ ಉಂಟಾಗಿರುವ ವಾಯುಭಾರ ಕುಸಿತವು ಆಂದ್ರಾ ಕರಾವಳಿ ದಾಟಿ ಉತ್ತರಕ್ಕೆ…