ಗ್ರಾಮೀಣ ಭಾಗದಲ್ಲಿ ಅಲ್ಲ, ಇದು ಬೆಳ್ಳಾರೆ ಪೇಟೆಯ ಪ್ರಶ್ನೆ. ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯಲ್ಲಿ ಹರಿಯುತ್ತದೆ, ಜನರಿಗೆ ಅಭಿಷೇಕವಾಗುತ್ತದೆ. ಸೂಕ್ತ ಕ್ರಮವಾಗಬೇಕು, ಚರಂಡಿ ವ್ಯವಸ್ಥೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನಹರಿಸಬೇಕಿದೆ.
ಭರ್ಜರಿ ಮಳೆ ಬಂದರಂತೂ ಸಾಕು ಬೆಳ್ಳಾರೆ ಪೇಟೆಯ ರಸ್ತೆ ಮೇಲೆ ಸಂಪೂರ್ಣ ಚರಂಡಿ ನೀರು ಹರಿದು ಪೇಟೆಯೇ ಹೊಳೆಯಂತಾಗುತ್ತದೆ. ಅತಿಯಾದ ನೀರಿನ ಹರಿವಿನಿಂದ ನಡು ಪೇಟೆಯ ರಸ್ತೆಯೇ ಸಂಪೂರ್ಣ ಕೆಸರುಮಯವಾಗಿ ವಾಹನ ಸವಾರರು ಹಾಗು ಪಾದಾಚಾರಿಗಳು ಸಂಕಷ್ಟ ಎದುರಿಸುವಂತಾಗಿದೆ. ಇದಕ್ಕೆಲ್ಲ ಕಾರಣ ಬೆಳ್ಳಾರೆ ಪೇಟೆಯಲ್ಲಿರುವ ಅಸಮರ್ಪಕ ಚರಂಡಿ ವ್ಯವಸ್ಥೆ.
ಬೆಳ್ಳಾರೆ ಮೇಲಿನ ಪೇಟೆಯ ಬಸ್ ನಿಲ್ದಾಣ ಎದುರಿನಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದ್ದು ಕೆಸರು ನೀರು ನಿಂತು ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ಪ್ರಯಾಣಿಕರಿಗೆ ಕೆಸರಿನ ಅಭಿಷೇಕವಾಗುತ್ತಿದೆ. ಇದರಿಂದ ಕೆಲವು ಬಸ್‍ಗಳು ನಿಲ್ದಾಣದೊಳಗೆ ಬಾರದೆ ರಸ್ತೆಯ ಮೇಲೆಯೆ ಹಲವು ಬಾರಿ ನಿಲುಗಡೆಯೂ ಮಾಡುವಂತಾಗಿದೆ. ನಿಲ್ದಾಣದ ಮುಂಭಾಗದಲ್ಲಿ ನಡೆಯಲಾರದಷ್ಟು ಕೆಸರಿನ ನೀರು ತುಂಬುತ್ತಿರುತ್ತದೆ. ಕೆಸರು ನೀರಿನೊಂದಿಗೆ ಪೇಟೆಯ ತ್ಯಾಜ್ಯಗಳು ಬೆರೆತಿರುವುದನ್ನು ಜೋರು ಮಳೆ ಬಂದಾಗ ಕಾಣ ಸಿಗುವುದು.
ಕೆಳಗಿನ ಪೇಟೆಯ ರಸ್ತೆಯೂ ಕೆಸರು ಗದ್ದೆಯಂತೆ ಬೆಳ್ಳಾರೆಯ ಮೇಲೆ ಪೇಟೆಗಿಂತ ಕೆಳಗಿನ ಪೇಟೆಯ ಸ್ಥಿತಿಯೂ ಭಿನ್ನವಾಗಿಲ್ಲ. ಇಲ್ಲಿಯೂ ಚರಂಡಿಯ ವ್ಯವಸ್ಥೆ ಸರಿಯಾಗಿಲ್ಲ. ಅಸಮರ್ಪಕವಾದ ಸ್ಲ್ಯಾಬ್ ಅಳವಡಿಕೆಯಿಂದಾಗಿ ಚರಂಡಿಯೊಳಗಿನ ನೀರು ತುಂಬಿ ರಸ್ತೆಯ ಮೇಲೆ ಹರಿಯುವಂತಗಿದೆ. ಉದಾಹರಣೆಯಾಗಿ ವರ್ಷದ ಮೊದಲ ಮಳೆಗೆ ಬೆಳ್ಳಾರೆಯ ಹಲವರಿಗೆ ಕೆಸರಿನ ಸಿಂಚನವಾಗಿದೆ.
ಅಭಿವೃದ್ದಿಯ ಶಿಖರದೆಡೆಗೆ ದಾಪುಗಾಲಿಡುತ್ತಿರುವ ಬೆಳ್ಳಾರೆ ಪೇಟೆಯ ಶೋಭೆಯನ್ನು ಇಂತಹ ಸಮಸ್ಯೆಗಳು ಕುಂದಿಸುತ್ತಿದೆ. ಪ್ರತಿ ನಿತ್ಯ ಪೇಟೆಯ ರಸ್ತೆಯ ಮೇಲೆ ನೂರಾರು ವಿದ್ಯಾರ್ಥಿಗಳು, ವೃದ್ದರು ನಡೆದುಕೊಂಡು ಹೋಗುತ್ತಿರುತ್ತಾರೆ. ಕೆಸರಿದ್ದಾಗ ನಡೆದುಕೊಂಡು ಹೋಗಲು ಕಷ್ಟಪಡುವ ಇಂಥಹವರು ಕೆಲವು ಬಾರಿ ಕೆಳ ಪೇಟೆಯಿಂದ ಮೇಲೆ ಪೇಟೆಗೆ ಅಂದರೆ 100ರಿಂದ 150 ಮೀ. ರಸ್ತೆಯನ್ನೂ ರಿಕ್ಷಗಳಲ್ಲಿ ಹೋಗುವ ಪರಿಸ್ಥಿಯುಂಟಾಗಿದೆ.
ಚರಂಡಿಯ ದುಸ್ಥಿತಿಯಿಂದಾಗಿ ಉಂಟಾಗುತ್ತಿರುವ ತೊಂದರೆಯನ್ನು ಕಣ್ಣಾರೆ ಕಂಡ ಹಲವು ಜನರು ಮಳೆಗಾಲಕ್ಕೂ ಮೊದಲೇ ಚರಂಡಿ ಸರಿಪಡಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿದ್ದರೆ ಈ ಸಮಸ್ಯೆಯನ್ನು ತಪ್ಪಿಸಬಹುದಿತ್ತೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚರಂಡಿ ಸರಿಪಡಿಸಿ ಸರಾಗವಾಗಿ ನೀರು ಹರಿದುಹೋಗಲು ವ್ಯವಸ್ಥೆ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲಾಗಿದೆ. – ಶಕುಂತಳಾ ನಾಗರಾಜ್ ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷೆ
Advertisement
ಕುಂಭಮೇಳಕ್ಕೆ ತೆರಳಿದ ಅನುಭವ ಹಾಗೂ ಅಲ್ಲಿನ ಅನುಭವಗಳ ಬಗ್ಗೆ ಕೃಷಿಕ ಟಿ ಆರ್…
ಈಗಿನಂತೆ ಮಾರ್ಚ್ 4 ಅಥವಾ 5 ರಿಂದ ಮೋಡದ ವಾತಾವರಣ ಹೆಚ್ಚಿರುವ ಸಾಧ್ಯತೆಗಳಿದ್ದು,…