ಬೆಳ್ಳಾರೆ : ಒಂಟಿ ಮನೆಯಲ್ಲಿರುವಂತಹ ಅಥವಾ ಜನ ಸಂದಣಿ ಕಡಿಮೆ ಇರುವಂತಹ ಪ್ರದೇಶ ಗಳಲ್ಲಿ ನಿಮ್ಮ ಮನೆ ಅಥವಾ ವಠಾರದ ಕಡೆಗೆ ಚಿನ್ನ ಪಾಲಿಸ್ ಮಾಡಿಕೊಡುತ್ತೇವೆ ಎಂದು ಹೇಳಿಕೊಂಡು ಬಂದು ನಿಮ್ಮ ಚಿನ್ನಾಭರಣವನ್ನು ಬಿಚ್ಚಿಸಿ ಪಾಲಿಶ್ ಮಾಡುವ ನೆಪದಲ್ಲಿ ಮೋಸ ಮಾಡಬಹುದು ಎಚ್ಚರಿಕೆ….!
ವಿಮಾ ಕಂಪನಿಯವರೆಂದು, ಅಥವಾ ಮನೆಬಳಕೆಯ ವಸ್ತುಗಳ ಮಾರಾಟಗಾರರೆಂದು, ಸರಕಾರಿ ಇಲಾಖೆಯ ನಕಲಿ ಐಡಿ ಕಾರ್ಡ್ ತೋರಿಸಿ ನಂಬಿಸಿ ಹಣ ಮತ್ತು ಇತರೆ ವಸ್ತುಗಳನ್ನು ಮೋಸ ಮಾಡಿ ಲಪಟಾಯಿಸುವ ಸಾಧ್ಯತೆ ಇರುತ್ತದೆ..
ನೀವು ನಿಮ್ಮ ವಾಹನಗಳಲ್ಲಿ ಪ್ರಯಾಣಿಸುವಾಗ ಉದ್ದೇಶ ಪೂರ್ವಕವಾಗಿ ನಿಮ್ಮನ್ನೆ ಗುರಿಯಾಗಿಸಿಕೊಂಡು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆದು ನಿಮ್ಮ ವಾಹನದಲ್ಲಿಟ್ಟಿರುವ ಬೆಲೆ ಬಾಳುವ ವಸ್ತುಗಳನ್ನು ಮೋಸದಿಂದ ಲಪಟಾಯಿಸುವ ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳ ಭಾಗಗಳಲ್ಲಿ ಅಪರಾಧ ಕೃತ್ಯ ನಡೆಸುತ್ತಿರುವುದು ಕಂಡು ಬಂದಿರುತ್ತದೆ…
ಈ ಮೇಲಿನ ರೀತಿಯಲ್ಲಿ ತಮ್ಮ ಕೃತ್ಯ ಗಳನ್ನು ಎಸಗುವ ಗ್ಯಾಂಗ್ ಗಳು ನಮ್ಮ ಸುತ್ತಲಿನ ಜಿಲ್ಲೆಗಳಲ್ಲಿ ಸಕ್ರಿಯವಾಗಿರುವುದು ಕಂಡುಬಂದಿರುತ್ತದೆ…
ಆದುದರಿಂದ ನಿಮ್ಮ ಪರಿಸರದಲ್ಲಿ ಇಂತಹ ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ನಿಮ್ಮ ಗಮನಕ್ಕೆ ಬಂದರೆ ಸದಾ ನಿಮ್ಮೊಂದಿಗೆ ಇರುವ ನಮ್ಮ ಠಾಣೆಗೆ ಕೂಡಲೇ ಮಾಹಿತಿ ನೀಡಿ ಸಹಕರಿಸಿ ಎಂದು ಠಾಣಾಧಿಕಾರಿ ಈರಯ್ಯ ಡಿ ಎನ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ ಅಲ್ಲದೆ 9743053901 ,08257-271995 ನಂಬರಿಗೂ ತಕ್ಷಣ ಸಂಪರ್ಕಿಸಿ ತಿಳಿಸಬೇಕೆಂದು ತಿಳಿಸಿರುತ್ತಾರೆ.
ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಚಟುವಟಿಕೆ ಆರಂಭವಾಗಿದೆ. ಏಪ್ರಿಲ್ 15…
ಜನನ-ಮರಣ ಘಟನೆಗಳನ್ನು 21 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸೂಚನೆ.
ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಮುಂದುವರಿಯುತ್ತಿದ್ದು, ಮಳೆಯ ಚಟುವಟಿಕೆ ಕಡಿಮೆಯಾಗಿದೆ. ಏಪ್ರಿಲ್ 15…
ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…
ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆಯ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ…
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಎಂಬುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.…