ಬೆಳ್ಳಾರೆ: ಕಳೆದ ಸಾಲಿನ ಮದರಸ ವಾರ್ಷಿಕ ಪಬ್ಲಿಕ್ ಪರೀಕ್ಷೆ ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಗಳನ್ನು ಗುರುತಿಸಿ ನೀಡಲಾಗುವ ಮದರಸ ಎಕ್ಸಲೆನ್ಸ್ ಅವಾರ್ಡ್ ಗೆ ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸದ ವಿದ್ಯಾರ್ಥಿನಿ ಆಯಿಷತ್ ನಾಝ್ ಆಯ್ಕೆಗೊಂಡಿದ್ದರು. ಈ ಅವಾರ್ಡ್ ಪುರಸ್ಕಾರ ವು ಮಂಗಳೂರಿನ ಟಿ ಆರ್ ಪಿ ಸಭಾಂಗಣದಲ್ಲಿ ಆಗಸ್ಟ್ 4 ರಂದು ನಡೆದ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಕಾರ್ಯ ಕ್ರಮದಲ್ಲಿ ನೀಡಿ ಗೌರವಿಸಲಾಯಿತು.
ಇವರು ಕಳೆದ ಸಾಲಿನ ಸಮಸ್ತ ಮದರಸದ 5 ನೇ ತರಗತಿ ಯ ಪಬ್ಲಿಕ್ ವಾರ್ಷಿಕ ಪರೀಕ್ಷೆ ಯಲ್ಲಿ 500 ರಲ್ಲಿ 468 ಅಂಕ ಪಡೆದು ತಾಲೂಕಿನ ಲ್ಲಿ ದ್ವಿತೀಯ ಸ್ಥಾನಿಯಾಗಿದ್ದರು.
ಅವಾರ್ಡ್ ಪುರಸ್ಕಾರ ಸಮಾರಂಭದಲ್ಲಿ ಮುದರ್ರಿಸ್ ತಾಜುದ್ದೀನ್ ರಹ್ಮಾನಿ ,ಮದರಸ ಸದರ್ ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಉಪಸ್ಥಿತರಿದ್ದರು.
ಇವರು ಯುವ ಉದ್ಯಮಿ ನಝೀರ್ ಶೂಬಿಝ್ ಬೆಳ್ಳಾರೆ ಇವರ ಪುತ್ರಿ ಯಾಗಿರುತ್ತಾರೆ .
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel