ಬೆಳ್ಳಾರೆ: ರಂಝಾನ್ ಪ್ರಭಾಷಣಕ್ಕೆ ಶಾಫಿ ಅವರು ಈ ಬಾರಿ ಯಾವುದೇ ಅನುಮತಿಯನ್ನು ಕೋರಿ ಆಡಳಿತ ಸಭೆಗೆ ಅರ್ಜಿ ಸಲ್ಲಿಸಲಿಲ್ಲ.ಹೀಗಾಗಿ ಭಾಷಣದ ಬಗ್ಗೆ ಪ್ರಶ್ನಿಸಿದಾಗ ಈ ಘಟನೆ ನಡೆದಿದೆ ಎಂದು ಮಸೀದಿಯ ಪ್ರಧಾನ ಕಾರ್ಯ ದರ್ಶಿ ಇಬ್ರಾಹಿಂ ಪಿ ಕುಂಞಗುಡ್ಡೆ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ಶಾಫಿ ಬೆಳ್ಳಾರೆ ಅವರು ಸುಮಾರು 10 ವರ್ಷಗಳಿಂದ ಭಾಷಣ ಮಾಡುತ್ತಾ ಬಂದಿದ್ದು, ಅವರು ಬೆಳ್ಳಾರೆ ಮಸೀದಿಯ ಒಬ್ಬ ಸದಸ್ಯನಾಗಿದ್ದರೂ,ಅವರಿಗೆ ಭಾಷಣಕ್ಕೆ ಈ ಹಿಂದೆ ಅನುಮತಿ ನೀಡಲಾಗಿತ್ತು. ನಂತರ ಅದು ವಾಟ್ಸಾಪ್ ಗಳಲ್ಲಿ ರಾಜಕೀಯ ಪಕ್ಷದ ಕಾರ್ಯದರ್ಶಿಯ ಭಾಷಣ ಬೆಳ್ಳಾರೆ ಮಸೀದಿ ಯಲ್ಲಿದೆ ಎಂಬ ಪೋಸ್ಟರ್ ಗಳು ಬರಲಾರಂಭಿಸಿದ ನಂತರ ಅವರ ಭಾಷಣಕ್ಕೆ 2 ವರುಷಗಳ ಮೊದಲೆ ವಿರೋಧವಾಗಿತ್ತು. ಆಗ ಆಡಳಿತ ಸಮಿತಿಯು ಇನ್ನು ಮುಂದೆ ಯಾವುದೇ ಕಾರ್ಯಕ್ರಮವಿದ್ದರೂ ಆಡಳಿತ ಸಮಿತಿಯ ಸಭೆಗೆ ಅರ್ಜಿಯನ್ನು ಸಲ್ಲಿಸಬೇಕು. ಅದಲ್ಲದೆ ಆಡಳಿತ ಸಮಿತಿಯ ತೀರ್ಮಾನ ದಂತೆ ಅವರಿಗೆ ಅನುಮತಿ ನೀಡಲಾಗುದೆಂದು ತೀರ್ಮಾನ ಮಾಡಲಾಗಿತ್ತು. ಆದರೆ ಈ ವರುಷ ರಂಝಾನ್ ಪ್ರಭಾಷಣಕ್ಕೆ ಶಾಫಿ ಯಾವುದೇ ಅನುಮತಿಯನ್ನು ಕೋರಿ ಆಡಳಿತ ಸಭೆಗೆ ಅರ್ಜಿ ಸಲ್ಲಿಸಲಿಲ್ಲ. ಆದರೆ ಜೂನ್ 1 ರಂದು ಬೆಳಗ್ಗೆ ಭಾಷಣಕ್ಕೆ ಅನುಮತಿ ಇದೆ ಎಂದು ಗೊತ್ತಾಗಿದ್ದು ಅದರಂತೆಯೆ ರಾತ್ರಿ ತರಾವೀಹ್ ನಮಾಝಿನ ನಂತರ ಶಾಫಿ ಪ್ರಭಾಷಣಕ್ಕೆ ಎದ್ದು ನಿಂತಾಗ ಕಾರ್ಯದರ್ಶಿ ನಾನು ಮತ್ತು ಉಪಾಧ್ಯಕ್ಷ ರಾದ ಯು ಹೆಚ್ ಅಬೂಬಕ್ಕರ್ ಎಂಬುವವರು ಅನುಮತಿ ನೀಡದಿರುವ ಬಗ್ಗೆ ವಿಚಾರಿಸಿದಾಗ ಘಟನೆ ನಡೆದಿದ್ದು ಅದಕ್ಕೆ ಆ ರಾಜಕೀಯ ಪಕ್ಷದ ಕಾರಣವಾಗಿರುತ್ತದೆ ಎಂದು ಈ ರಂಝಾನ್ ತಿಂಗಳ ಮೇಲೆ ಸತ್ಯ ಮಾಡಿ ಹೇಳುತ್ತೇನೆ ಹಾಗೂ ಎಲ್ಲಿ ಬೇಕಾದರೂ ಪ್ರಮಾಣಕ್ಕೂ ಸಿದ್ದನಿದ್ದೇನೆ ಎಂದು ಇಬ್ರಾಹಿಂ ಪಿ ಕುಂಞಗುಡ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…