ಬೆಳ್ಳಾರೆ : ಶ್ರೀ ಸದಾಶಿವ ಶಿಶುಮಂದಿರ ಬೆಳ್ಳಾರೆ ಮತ್ತು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಆಶ್ರಯದಲ್ಲಿ ಶಿಶುಮಂದಿರದಲ್ಲಿ ವನಮಹೋತ್ಸವ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ ಜರಗಿತು.
ಸಭಾಧ್ಯಕ್ಷತೆ ವಹಿಸಿದ ಶಿಶುಮಂದಿರದ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ ಪರಿಸರ ಜಾಗೃತಿ ಹಾಗೂ ಜಲ ಮರುಪೂರಣ ಸೇರದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಶಿಶುಮಂದಿರದ ಆವರಣದಲ್ಲಿ ಸಾಗುವಾನಿ, ಹಲಸು, ಮಾವಿನ ಗಿಡಗಳನ್ನು ನೆಡಲಾಯಿತು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಬೆಳ್ಳಾರೆ ಟೌನ್‍ನ ಅಧ್ಯಕ್ಷ ರೊ| ಬಿ. ನರಸಿಂಹ ಜೋಶಿ, ಶಮಿತಾ ಪಿ. ರೈ ಪನ್ನೆ, ಜಗನ್ನಾಥ ರೈ ತಂಬಿನಮಕ್ಕಿ, ರಾಮಚಂದ್ರ ಭಟ್ ಕೊಳಂಬಳ, ಸಂಜೀವ ಕಲಾೈ, ವಾಸುದೇವ ಆಚಾರ್ಯ ಕೊಡಿಯಾಲ, ರಮೇಶ್, ಮಾತೃಮಂಡಳಿಯ ಸದಸ್ಯೆಯರು ಹಾಗೂ ಪೋಷಕ ವರ್ಗ ಉಪಸ್ಥಿತರಿದ್ದರು.
ಶಿಶುಮಂದಿರ ಸಂಚಾಲಕರಾದ ಪಿ. ಮಹಾಲಿಂಗ ಭಟ್ ಸ್ವಾಗತಿಸಿ, ಮಾತಾಜಿ ತೇಜೇಶ್ವರಿ ವಂದಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…