ಬೇಸಿಗೆ ರಜೆಯೂ ಅಜ್ಜನ ಮನೆಯೂ

April 10, 2020
4:20 PM

ಬೇಸಿಗೆ ರಜೆಯೆಂದರೆ ನೆನಪಾಗುವುದು  ಅಜ್ಜಿ ಮನೆ.

Advertisement
Advertisement

ಎಲ್ಲರೂ ಅಜ್ಜಿ ಮನೆಗೆ ಪೇಟೆಯಿಂದ ಹಳ್ಳಿಗೆ ಬಂದರೆ ನಾವು ಹಳ್ಳಿಯಿಂದ ಪೇಟೆಗೆ ಹೋಗುತ್ತಿದ್ದೆವು.  ಮನೆ ಮುಂದೆಯೇ ಸಾಲಾಗಿ ಹೋಗುವ ಆಟೋ ರಿಕ್ಷಾ, ಕಾರು , ಬಸ್ ಗಳು,  ನಮೂನೆ , ನಮೂನೆ ಬೈಕ್, ಸ್ಕೂಟರ್ ಗಳು ನಮ್ಮನ್ನು  ಅಜ್ಜಿ ಮನೆ ಪಕ್ಕದ ಕಂಪೌಂಡ್    ಹತ್ತಿರ ನಮ್ಮ ಅಜ್ಜನೊಟ್ಟಿಗೆ ನಿಂತು ಕೊಂಡು ಲೆಕ್ಕ ಹಾಕುತ್ತಿದ್ದೆವು. ಆ ದಿನಗಳಲ್ಲಿ ಲೆಕ್ಕದ ಬೈಕುಗಳು, ಎರಡಂಕಿಯೊಳಗಿನ ನಾಲ್ಕು ಚಕ್ರದ ವಾಹನಗಳು ಮಾರ್ಗ ದಲ್ಲಿ ಓಡಾಡುತ್ತಿದ್ದವು.  ನಾನು , ನನ್ನ ತಂಗಿ ಹಾಗೂ  ‌‌ಮಾವನ ಎರಡರ ಹರೆಯದ  ಮಗ ಮೂವರು ಸೇರಿ ಲೆಕ್ಕ ಹಾಕುತ್ತಿದ್ದೆವು. ನಾವು ಮಾರ್ಗಕ್ಕೆ ಇಳಿಯದಂತೆ ಅಜ್ಜ ಜಾಗ್ರತೆ ವಹಿಸುತ್ತಿದ್ದರು.   ಸಂಜೆ ಮಾವಂದಿರು ಮನೆಗೆ ಬರುತ್ತಲೇ ನಮ್ಮ ಲೆಕ್ಕ ಒಪ್ಪಿಸುತ್ತಿದ್ದೆವು. ಸುಸ್ತಾಗಿ ಬಂದಿದ್ದರೂ ಸ್ವಲ್ಪವೂ  ಬೇಸರಿಸಿಕೊಳ್ಳದೇ  ಕೇಳಿಸಿಕೊಳ್ಳುತ್ತಿದ್ದರು.  ಮರುದಿನಕ್ಕೆ ನಮ್ಮ ಬೇಡಿಕೆಗಳ ಪಟ್ಟಿಗಳನ್ನು ತಾಳ್ಮೆಯಿಂದ ಕೇಳಿಕೊಳ್ಳುತ್ತಿದ್ದರು.  ಸಾದ್ಯ ವಾದಷ್ಟು  ಇಡೇರಿಸುತ್ತಿದ್ದರು. ಆವಾಗಿನ ಮಕ್ಕಳ ಬೇಡಿಕೆ ಗಳೂ  ಸಣ್ಣ ಮಟ್ಟಿನವು . ಮಣಿಸರ,     ಪ್ಲಾಸ್ಟಿಕ್ ಬಳೆಗಳುು, ಪುಟ್ಟ ಕೈ ಚೀಲ ,   ಉದ್ದ ನೇಯ ಗೌನ್ ,  ಬಿಸ್್ಕ್ಕತ್ತು , ಪೆಪ್ಪರ್  ಮೆೆಂಟ್,  ಬಾಲಮಂಗಳ, ಚಂದಮಮ ಇವುಗಳು ನಮ್ಮ ಪಟ್ಟಿಯಲ್ಲಿ ಸ್ಥಾನ  ಪಡೆದವುಗಳು. ಮಾವಂದಿರೂ ‌ ಬುದ್ಧಿವಂತಿಕೆ ತೋರಿಸುತ್ತಾ    ಇದ್ದರು, ದಿನಕ್ಕೆ   ಒಂದೇ ಎಂದು.

Advertisement
ಈ ಎಲ್ಲಾ ವುಗಳಿಗಿಂತ ನಮಗೆ ಆಕರ್ಷಣೆ ಇದ್ದುದು ಅಜ್ಜ ಹೇಳುತ್ತಿದ್ದ ಕಥೆಗಳಲ್ಲಿ. ಅಜ್ಜ ನ ಮನೆ ಕೊಡಗಿನ ವಿರಾಜಪೇಟೆ. ಅಲ್ಲಿ ನಮ್ಮ ಇಲ್ಲಿಗಿಂತ ಚಳಿ. ನಮ್ಮ ಬಾಲ್ಯದ ದಿನಗಳಲ್ಲಿ ಪೇಟೆಯಾದರೂ ಹಳ್ಳಿಯ ವಾತಾವರಣ ಅಲ್ಲಿ ಇತ್ತು.  ಪೇಟೆಯ ಹೊರವಲಯದಲ್ಲಿ ಇದ್ದ ಕಾರಣ ಮಾಲಿನ್ಯ ರಹಿತ ವಾತಾವರಣ. ಹಾಗಾಗಿ  ಅಜ್ಜನನ್ನು ಪೇಟೆಗೆ ಹೋಗಲೂ ಬಿಡದೆ ಕಥೆ ಹೇಳುವಂತೆ ಸತಾಯಿಸುತ್ತಿದ್ದೆವು. ಅವರು ಒಂದು ಹೊತ್ತಿಗೆ ೫ ಕಥೆಗಳನ್ನು ಹೇಳದೆ ಬಿಡುತ್ತಲೇ  ಇರಲಿಲ್ಲ.  ಅವರೂ ಅಷ್ಟೇ ಬಹಳ ಶ್ರದ್ಧೆಯಿಂದ ಯಾವುದೂ ಪುನರಾವರ್ತಿತ ವಾಗದಂತೆ ವಿಭಿನ್ನ ಶೈಲಿಯಲ್ಲಿ ಬೇರೆ ಬೇರೆ ಕಥೆಗಳನ್ನು ಹೇಳುತ್ತಿದ್ದರು.   ಅಲ್ಲಿ ರಾಮಾಯಣ , ಮಹಾಭಾರತ,  ಕಥೆಗಳಲ್ಲದೆ  ತೆನಾಲಿರಾಮ,  ಚಾಣಕ್ಯ, ವಿಕ್ರಮ ಬೇತಾಳದ ಪಾತ್ರಗಳೆಲ್ಲಾ ಬಂದು ಹೋಗುತ್ತಿದ್ದವು.  ಅಜ್ಜ ಎಷ್ಟು ಆಕರ್ಷಕ ವಾಗಿ ಕಥೆ ಹೇಳುತ್ತಿದ್ದರೆಂದರೆ ಅಜ್ಜಿ ತಂದಿಡುತ್ತಿದ್ದ ಕೋಡುಬಳೆ, ಕರ್ಜಿಕಾಯಿ, ತುಕ್ಕುಡಿ ಕಣ್ಣಿಗೆ ಕಾಣುತ್ತಿರಲಿಲ್ಲ.  ಕಥೆಯ ಪಾತ್ರಗಳೇ ಕಣ್ಣಮುಂದಿರುತ್ತಿದ್ದುವು.  ಅಜ್ಜಿ ಅಜ್ಜನಿಗೆ ಹೇಳುತ್ತಿದ್ದ ಕೆಲಸಗಳನ್ನೆಲ್ಲಾ ನಾವೇ ಮಾಡಿಮುಗಿಸುತ್ತಿದ್ದೆವು  ಕಥೆಯ ಸಮಯ ತಪ್ಪಬಾರದಲ್ಲಾ ಎಂಬ ಮುಂದಾಲೋಚನೆಯಲ್ಲಿ.   ಆಮೇಲೆ ದೂರದರ್ಶನ ಬಂದರೂ ಅಜ್ಜ ಹೇಳುತ್ತಿದ್ದ ಕಥೆಯ ಆಕರ್ಷಣೆ ಕಡಿಮೆಯಾಗಲಿಲ್ಲ. ನಮ್ಮ ಬಾಲ್ಯದಲ್ಲಿ  ಪ್ರಸಾರವಾಗುತ್ತಿದ್ದ  ರಾಮಾಯಣ ಮಹಾಭಾರತ ಗಳು ಈಗ ಮತ್ತೆ ಪ್ರಸಾರವಾಗುತ್ತಿವೆ. ಅಂದು ಒಂದು ಎಪಿಸೋಡ್ ನಿಂದ ಮುಂದಿನ ಎಪಿಸೋಡ್ ಗೆ ಒಂ  ದು ವಾರ ಕಾಯಬೇಕಾಗುತ್ತಿತ್ತು. ಆದರೆ ಈಗ ಒಂದೇ ದಿನ ಎರಡು ಬಾರಿ ಪ್ರಸಾರವಾಗುತ್ತಿದೆ. ಅದೂ ರಾಮಾಯಣ ಹಾಗೂ ಮಹಾಭಾರತ  .  ನಾವು ನೋಡಿದ ಅದೇ ಸಂಚಿಕೆಗಳು ನಮ್ಮ ಮಕ್ಕಳೂ‌ ಆಸಕ್ತಿ ಯಿಂದ ಕಾದು ನೋಡುತ್ತಿರುವುದು ಸಂತೋಷದ ವಿಷಯವೇ ಆಗಿದೆ. ನಾವು ಅಜ್ಜನಿಂದ ಕೇಳಿದಷ್ಟು ಕಥೆಗಳು ಮಕ್ಕಳಿಗಿಲ್ಲವಲ್ಲ ಎಂಬ ವಿಷಯ ಬಹಳಷ್ಟು‌ ಕಾಡುತ್ತಿತ್ತು .  ಈಗ ದೂರದರ್ಶನದಲ್ಲಿ  ಆ ಎಪಿಸೋಡ್ ಗಳನ್ನು ನೋಡುತ್ತಾ  ಮಕ್ಕಳೊಂದಿಗೆ ನಾವು ಖುಷಿಪಡುತ್ತಿದ್ದೇವೆ. ಬಾಲ್ಯದ ದಿನಗಳು  ಮರುಕಳಿಸುತ್ತಿವೆಯೇನೋ ಅನ್ನಿಸುತ್ತಿದೆ.
* ಅಶ್ವಿನಿ ಮೂರ್ತಿ‌ ಅಯ್ಯನಕಟ್ಟೆ
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಸ ಎಸೆದರೂ “ದಂಡ” | ರಥಬೀದಿಯಲ್ಲಿ ಮಲಗಿದರೂ “ದಂಡ” |
May 9, 2024
10:10 PM
by: ಮಹೇಶ್ ಪುಚ್ಚಪ್ಪಾಡಿ
ಆತ್ಮನಿರ್ಭರ ಗೋವಂಶ | ಮಲೆನಾಡಗಿಡ್ಡ ಹಸು ನಮಗೆ ಹಲವು ಪಾಠ ಕಲಿಸಬಲ್ಲವು..!
May 9, 2024
7:50 PM
by: ಮುರಳಿಕೃಷ್ಣ ಕೆ ಜಿ
ಛಾತಿ ಇಲ್ಲದ ನಾಗರಿಕರನ್ನು ರೂಪಿಸುತ್ತಿರುವ ಶಿಕ್ಷಣ
May 7, 2024
3:58 PM
by: ಡಾ.ಚಂದ್ರಶೇಖರ ದಾಮ್ಲೆ
ಮಲೆನಾಡು ಕಳೆದು ಹೋಗಿದೆ….! | ಯಾರಾದರೂ “ಮಲೆನಾಡಿಗೆ” ಈ ಮೊದಲಿನ “ಮಳೆಗಾಲ” ತಂದು ಕೊಡುವಿರಾ…. !
May 7, 2024
11:33 AM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror