ಸುಳ್ಯ: ವಾಸ್ತವ ವಾಗಿ ನಮಗೆ ಉಪಯೋಗ ಬರುವ ಸಂಗತಿಗಳನ್ನು ಕಲಿತುಕೊಂಡು ಪಠ್ಯದ ಜೊತೆ ಮುಂದೆ ಸಾಗಿದರೆ ಯಶಸ್ವಿ ವ್ಯಕ್ತಿಗಳಾಗುತ್ತೇವೆ ಎಂದು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಇಲ್ಲಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಹೇಳಿದರು.
Advertisement
ಅವರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಇಲ್ಲಿನ ವಾಣಿಜ್ಯ ಸಂಘ ದಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಬ್ಯಾಂಕು ವ್ಯವಹಾರಗಳ ಬಗೆಗಿನ ಅರ್ಧ ದಿನದ ಕಾರ್ಯಾಗಾರ ದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. ಬ್ಯಾಂಕು ವ್ಯವಹಾರ ನಡೆಸುವಲ್ಲಿ ಗ್ರಾಹಕರಾಗಿ ತಿಳಿದಿರಬೇಕಾದ ಮೂಲಭೂತ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ತೊಡಗಿಸಿಕೊಳ್ಳುವಂತೆ ಕಾರ್ಯಾಗಾರವನ್ನು ನಡೆಸಲಾಗಿತ್ತು.
ವಾಣಿಜ್ಯ ಶಾಸ್ತ್ರದ ಉಪನ್ಯಾಸಕಿ ಸಾವಿತ್ರಿ ಸ್ವಾಗತಿಸಿ ವಂದಿಸಿದರು. ವಾಣಿಜ್ಯ ಶಾಸ್ತ್ರದ ಉಪನ್ಯಾಸಕಿಯಾರಾದ ಸಾವಿತ್ರಿ ಮತ್ತು ಹರ್ಷಿತಾ ಕಾರ್ಯಾಗಾರವನ್ನು ನಡೆಸಿಕೊಟ್ಟರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement