ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆ ಅತೀ ಹೆಚ್ಚು ಮೂಲಸೌಲಭ್ಯ, ಶುಚಿತ್ವ ಮತ್ತು ನೈರ್ಮಲ್ಯ ಹೊಂದಿದೆ. ಸಾಮರಸ್ಯದ ಇತಿಹಾಸವೂ ಇದೆ. ಇಲ್ಲಿಯ ಬ್ರ್ಯಾಂಡ್ ಹೆಸರು ಉಳಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು ಎಂಬ ಅಭಿಪ್ರಾಯವು ಜಿಲ್ಲಾ ಪತ್ರಕರ್ತರ ಸಮ್ಮಳನದಲ್ಲಿ ಕೇಳಿಬಂತು.
ಬ್ರ್ಯಾಂಡ್ ಮಂಗಳೂರು ಎಂಬ ವಿವಿಧ ಪತ್ರಿಕೆಗಳ ಮುಖ್ಯಸ್ಥರ ಗೋಷ್ಠಿಯಲ್ಲಿ, ಕಳೆದ ಮೂರು ದಶಕಗಳಲ್ಲಿ ಮಂಗಳೂರು ಸಾಕಷ್ಟು ಬದಲಾವಣೆ ಕಂಡಿದೆ. ಹೊಸ ಸೌಲಭ್ಯಗಳು ಬಂದಿದೆ. ಆದರೆ, ಕೆಲವು ಘಟನೆಗಳು ಮತ್ತು ಅದರ ವೈಭವೀಕರಣದಿಂದ ಹೊರ ಜಗತ್ತಿನಲ್ಲಿ ಮಂಗಳೂರಿನ ಹೆಸರು ಹಾಳಾಗುತ್ತಿದೆ. ಬ್ರ್ಯಾಂಡ್ ಮಂಗಳೂರು ಉಳಿಸಲು ಮಾಧ್ಯಮಗಳ ಮುಖ್ಯಸ್ಥರು ಪ್ರಮುಖ ಪಾತ್ರ ವಹಿಸಬೇಕು ಎಂಬ ಅಭಿಪ್ರಾಯ ಕೇಳಿಬಂತು.
ಹಿರಿಯ ಪತ್ರಕರ್ತ ಈಶ್ವರ ದೈತೋಟ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಪತ್ರಿಕೆಗಳ ಮುಖ್ಯಸ್ಥರಾದ ಯು.ಕೆ.ಕುಮಾರ್‌ನಾಥ್, ಸುರೇಶ್ ಪುದುವೆಟ್ಟು, ಅಬ್ದುಸ್ಸಲಾಂ ಪುತ್ತಿಗೆ, ಡಾ.ಯು.ಪಿ. ಶಿವಾನಂದ ವಿಚಾರ ಮಂಡಿಸಿದರು.
ರಾಮಕೃಷ್ಣ ಆರ್., ಹರ್ಷ, ಜಿತೇಂದ್ರ ಕುಂದೇಶ್ವರ, , ಕೆ.ಯು.ಜಾರ್ಜ್, ಲೀಲಾಕ್ಷ ಕರ್ಕೇರ, ಲಕ್ಷ್ಮಣ್ ಕುಂದರ್ ಉಪಸ್ಥಿತರಿದ್ದರು. ಗೋಷ್ಠಿ ಬಳಿಕ ಪ್ರಶ್ನೋತ್ತರ ನಡೆಯಿತು.
ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ವಿಜಯ್ ಕೋಟ್ಯಾನ್ ಸ್ವಾಗತಿಸಿ ಪುಷ್ಪರಾಜ್ ವಿಚಾರ ಮಂಡಿಸಿದರು, ಹಿಲರಿ ಕ್ರಾಸ್ತ ವಂದಿಸಿದರು. ಮಾಜಿ ಅಧ್ಯಕ್ಷ ಬಿ.ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.